
ನವದೆಹಲಿ,ನ.೧:ಹಬ್ಬದ ಋತುವಿನ ನಡುವೆಯೇ ವಾಣಿಜ್ಯ ಬಳಕೆಯ ಅಡುಗೆ ಅನಿಲ (ಎಲ್ಪಿಜಿ) ಸಿಲಿಂಡರ್ ಬೆಲೆಯಲ್ಲಿ ಮತ್ತೆ ಏರಿಕೆ ಮಾಡಲಾಗಿದೆ. ೧೯ ಕೆ.ಜಿ. ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಇಂದಿನಿಂದ ೧೦ ರೂ. ಹೆಚ್ಚಿಸಲಾಗಿದ್ದು, ದೆಹಲಿಯಲ್ಲಿ ಇದರ ಬೆಲೆ ೨,೮೨೦ಕ್ಕೆ ತಲುಪಿದೆ. ಇದರಿಂದ ಹೋಟೆಲ್, ರೆಸ್ಟೋರೆಂಟ್ ಸೇರಿದಂತೆ ವಾಣಿಜ್ಯ ಸಂಸ್ಥೆಗಳ ನಿರ್ವಹಣಾ ವೆಚ್ಚ ಮತ್ತಷ್ಟು ಹೆಚ್ಚಾಗಲಿದೆ.
ಅಕ್ಟೋಬರ್ ೧ರಂದು ೬೨.೫೦ ಏರಿಕೆ ಮಾಡಲಾಗಿತ್ತು.ಇದೀಗ ಸತತ ಎರಡನೇ ತಿಂಗಳು ಬೆಲೆ ಹೆಚ್ಚಳವಾಗಿದೆ.ಅಂತರರಾಷ್ಟ್ರೀಯ ಮಾರುಕಟ್ಟೆಯ ಇಂಧನ ದರ ಹಾಗೂ ರೂಪಾಯಿ-ಡಾಲರ್ ವಿನಿಮಯ ದರದಲ್ಲಿನ ಬದಲಾವಣೆ ಆಧರಿಸಿ ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನ ಎಲ್ಪಿಜಿ ಮತ್ತು ವಿಮಾನ ಇಂಧನ ದರ ಪರಿಷ್ಕರಿಸುತ್ತವೆ.
ಕೋಲ್ಕತ್ತಾದಲ್ಲಿ ಅತಿ ಹೆಚ್ಚು ೧೭ ಬೆಲೆ ಏರಿಕೆಯಾಗಿದೆ.ಜುಲೈ ಮತ್ತು ಆಗಸ್ಟ್ನಲ್ಲಿ ಕ್ರಮವಾಗಿ ೧೮೩.೫೦ ಹಾಗೂ ೧೯೨ ಇಳಿಕೆಯಾಗಿದ್ದ ವಾಣಿಜ್ಯ ಸಿಲಿಂಡರ್ ದರ ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ಮತ್ತೆ ಏರಿಕೆಯಾಗಿದೆ. ೫ ಕೆ.ಜಿ. ಫ್ರೀ ಟ್ರೇಡ್ ಎಲ್ಪಿಜಿ ಹೊಸ ಸಂಪರ್ಕದ ಸಿಲಿಂಡರ್ ಬೆಲೆ ೧,೯೦೩ ಹಾಗೂ ಮರುಭರ್ತಿ ದರ ೭೮೨ಕ್ಕೆ ನಿಗದಿಯಾಗಿದೆ.
ವಿಮಾನಗಳಿಗೆ ಬಳಸುವ ಏವಿಯೇಷನ್ ಟರ್ಬೈನ್ ಫ್ಯೂಯೆಲ್ (ಎಟಿಎಫ್) ಬೆಲೆಯನ್ನೂ ಪ್ರತಿ ಲೀಟರ್ಗೆ ೧.೩೭ ಹೆಚ್ಚಿಸಲಾಗಿದೆ.ಇದರಿಂದ ದರ ೧೩೭.೧೨ರಿಂದ ೧೩೮.೫೦ಕ್ಕೆ ಏರಿಕೆಯಾಗಿದೆ.ಇದು ಸತತ ನಾಲ್ಕನೇ ತಿಂಗಳ ದರ ಹೆಚ್ಚಳವಾಗಿದೆ. ವಿಮಾನಯಾನ ಸಂಸ್ಥೆಗಳ ನಿರ್ವಹಣಾ ವೆಚ್ಚದಲ್ಲಿ ಶೇ.೪೦ರವರೆಗೆ ಪಾಲು ಹೊಂದಿರುವ ಇಂಧನದ ಬೆಲೆ ಏರಿಕೆ ವಿಮಾನಯಾನ ಕ್ಷೇತ್ರದ ಮೇಲೂ ಪರಿಣಾಮ ಬೀರಲಿದೆ.
ಗೃಹ ಬಳಕೆಯ ೧೪.೨ ಕೆ.ಜಿ. ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.ಇದರ ಬೆಲೆ ೯೪೨ರಲ್ಲೇ ಮುಂದುವರಿದಿದೆ. ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲೂ ಯಾವುದೇ ಪರಿಷ್ಕರಣೆ ಆಗಿಲ್ಲ. ಅಂತರರಾಷ್ಟ್ರೀಯ ಇಂಧನ ಮಾರುಕಟ್ಟೆಯ ಬೆಳವಣಿಗೆಗಳು ಮತ್ತು ರೂಪಾಯಿ ಮೌಲ್ಯದಲ್ಲಿನ ಏರಿಳಿತ ಮುಂದಿನ ತಿಂಗಳ ದರಗಳ ಮೇಲೂ ಪ್ರಭಾವ ಬೀರುವ ಸಾಧ್ಯತೆಯಿದೆ.
ಪ್ರಮುಖ ನಗರಗಳಲ್ಲಿ ಹೊಸ ದರ
ದೆಹಲಿ: ೨,೮೨೦ (೧೦ ಏರಿಕೆ)
ಮುಂಬೈ: ೨,೭೭೫ (೧೦.೫೦ ಏರಿಕೆ)
ಚೆನ್ನೈ: ೨,೯೯೪.೫೦ (೧೧.೫೦ ಏರಿಕೆ)
ಕೋಲ್ಕತ್ತಾ: ೨,೯೭೧ (೧೭ ಏರಿಕೆ)
























