
ಲಕ್ಷೆ÷್ಮÃಶ್ವರ,ಆ೨೩: ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿಗ ಬೃಂದಾವನ ಪುರಾತನ ಇತಿಹಾಸವನ್ನು ಹೊಂದಿರುವ ಜಾಗೃತ ಸ್ಥಳವಾಗಿದ್ದು, ಈ ೩೦೬ನೇ ವರ್ಷದಆರಾಧನಾ ಮಹೋತ್ಸವವನ್ನು ಆಗಸ್ಟ್ ೨೯ ೩೦ ಮತ್ತು ೩೧ ರಂದು ಮಠದಲ್ಲಿ ವಿಜೃಂಭಣೆಯಿAದ ಆಚರಿಸುವ ನಿಟ್ಟಿನಲ್ಲಿ ಸಮಾಜ ಬಾಂಧವರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನಿಸ್ ಹೇಳಿದರು.
ಅವರು ಪಟ್ಟಣದ ಶ್ರೀ ಶಂಕರಭಾರತಿಮಠದ ಸಭಾಭವನದಲ್ಲಿ ರಾಯರ ಆರಾಧನಾ ಮಹೋತ್ಸವದಕುರಿತು ವಿಪ್ರಬಾಂಧವರ ಮತ್ತು ಭಕ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ. ನೂರಾರು ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿರುವ ಪಟ್ಟಣದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಎಲ್ಲರ ಸಹಾಯ ಸಹಕಾರದಿಂದ ಆರಾಧನೆ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು, ಇದೇ ಅಗಷ್ಟ ೨೯ ೩೦ ಮತ್ತು ೩೧ ಹೀಗೆ ಮೂರು ದಿನಗಳ ಕಾಲ ಆರಾಧನಾ ಕಾರ್ಯಕ್ರಗಳುಸಂಪ್ರದಾಯದAತೆ ಜರುಗಲಿದ್ದು, ಸಾವಿರಾರು ಭಕ್ತರು ಆಗಮಿಸುವದರಿಂದ ಸಕಲ ಸಿದ್ದತೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಹೇಳಿದರು.
ಶ್ರೀಮಠದ ಧರ್ಮದರ್ಶಿ ಹನುಮಂತಾಚಾರ್ಯ ಹೊಂಬಳ ಮಾತನಾಡಿ ಆರಾಧನೆ ನಿಮಿತ್ಯ ಮೂರು ದಿನಗಳ ಕಾಲ ಶ್ರೀ ರಾಘವೇಂದ್ರ ಅಷ್ಟೋತ್ತರ, ಅಭಿಷೇಕ, ವಿಶೇಷ ಅಲಂಕಾರ, ಪುರಾಣ, ಪಾರಾಯಣ, ಸಂಗೀತ ಸೇವೆ ನಡೆಯಲಿದ್ದು, ದಿ.೩೧ ರಂದು ಸೋಮವಾರ ಬೆಳಿಗ್ಗೆ ೧೦ ಗಂಟೆಗೆ ರಥೋತ್ಸವವು ಸಕಲ ವಾಧ್ಯ ವೈಭವ, ಭಜನೆಗಳಿಂದ ನೆರವೇರಲಿದ್ದು, ಸಕಲರು ಪ್ರತಿವರ್ಷದಂತೆ ಯಶಸ್ವಿಗೊಳಿಸುತ್ತಿರುವ ಆರಾಧನೆ ಕಾರ್ಯಕ್ರಮವನ್ನು ಈ ವರ್ಷವು ಸಾಂಗವಾಗಿ ನೆರವೇರಿಸುವ ಸಂಕಲ್ಪ ಮಾಡಿ ಯಶಸ್ವಿಗೊಳಿಸುವವಲ್ಲಿ ಸಹಕಾರ ನೀಡಬೇಕು, ಮತ್ತು ಶ್ರೀ ರಾಯರ ಕೃಪೆಗೆ ಪಾತ್ರರಾಗಬೇಕು ಎಂದು ಹೇಳಿದರು.
ತಾಲೂಕ ಬ್ರಾಹ್ಮಣ ಸಂಘದ ಅಧ್ಯಕ್ಷ ಕೃಷ್ಣ ಕುಲಕರ್ಣಿ, ಶಂಕರಸೇವಾ ಸಮಿತಿ ಅಧ್ಯಕ್ಷ ವೆಂಕಟೇಶ ಗುಡಿ ಮಾತನಾಡಿ ಸಮಾಜದೊಂದಿಗೆ ಎಲ್ಲ ಸಮಾಜ ಬಾಂಧವರು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುತ್ತಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಡಿ.ಪಿ.ಹೇಮಾದ್ರಿ, ಆರ್.ಎಚ್.ಕುಲಕರ್ಣಿ, ನಾರಾಯಣಭಟ್ ಪುರಾಣಿಕ, ಎಸ್.ಜಿ.ಹೊಂಬಳ, ಅರವಿಂದ ದೇಶಪಾಂಡೆ, ಎ.ಪಿ.ಕುಲಕರ್ಣಿ, ಪಾಪು ಪುರೋಹಿತ್, ಬಿ.ಕೆ.ಕುಲಕರ್ಣಿ, ಅನಿಲ ಕುಲಕರ್ಣಿ, ಕೃಷ್ಣಕುಮಾರ ಕುಲಕರ್ಣಿ, ದಿಗಂಬರ ಪೂಜಾರ, ಗುರಣ್ಣ ಪಾಟೀಲಕುಲಕರ್ಣಿ, ರಾಘವೇಂದ್ರ ಪೂಜಾರ, ಶ್ರೀಕಾಂತ ಪೂಜಾರ, ಆರ್.ಎನ್.ಪಂಚಬಾವಿ, ಮುಂತಾದವರು ಭಾಗವಹಿಸಿ ಸಲಹೆ ಸೂಚನೆಗಳನ್ನ ನೀಡಿದರು.
































