Home ಜಿಲ್ಲೆ ಕಲಬುರಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮನೆ ಕಾಮಗಾರಿ ಅಪೂರ್ಣ: ಫಲಾನುಭವಿಯಿಂದ ಸಹಾಯಕ ಆಯುಕ್ತರಿಗೆ ದೂರು

ಪ್ರಧಾನ ಮಂತ್ರಿ ಆವಾಸ್ ಯೋಜನೆ ಮನೆ ಕಾಮಗಾರಿ ಅಪೂರ್ಣ: ಫಲಾನುಭವಿಯಿಂದ ಸಹಾಯಕ ಆಯುಕ್ತರಿಗೆ ದೂರು

ಕಲಬುರಗಿ:ಮೇ.೨೦: ೨೦೧೮-೧೯ನೇ ಸಾಲಿನ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮಂಜೂರಾದ ಮನೆ ಇನ್ನೂ ಪೂರ್ಣಗೊಳ್ಳದೇ ಇರುವ ಕುರಿತು ಫಲಾನುಭವಿ ಪ್ರಶಾಂತ ತಂದೆ ಭೀಮರಾವ ಅವರು ಸಹಾಯಕ ಆಯುಕ್ತರಿಗೆ ಅವರಿಗೆ ದೂರು ಸಲ್ಲಿಸಿದ್ದಾರೆ.
ತಾರಫೈಲ್ ೧೩ನೇ ಕ್ರಾಸ್ ನಿವಾಸಿಯಾಗಿರುವ ರೇಣುಕಾ ಗಂಡ ಪ್ರಶಾಂತ ಅವರ ಹೆಸರಿನಲ್ಲಿ ಯೋಜನೆಯಡಿ ಮನೆ ಮಂಜೂರಾಗಿದ್ದು, ಡಿ.ಡಿ ಕೂಡ ಪಾವತಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ಮನೆ ಕಾಮಗಾರಿ ಕೇವಲ ಬೇಸಮೆಂಟ್ ಹಂತದಲ್ಲೇ ನಿಂತಿದ್ದು, ೧೮.೦೫.೨೦೨೬ ರವರೆಗೆ ಪೂರ್ಣಗೊಳಿಸಿಲ್ಲ ಎಂದು ಆರೋಪಿಸಿದ್ದಾರೆ.
ಈ ಕುರಿತು ಹಲವು ಬಾರಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ “ಶೀಘ್ರದಲ್ಲೇ ಮನೆ ಪೂರ್ಣಗೊಳಿಸುತ್ತೇವೆ” ಎಂದು ಸುಳ್ಳು ಭರವಸೆ ನೀಡುತ್ತಾ ಬಂದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಮಾಹಿತಿಗೆ ಅಧಿಕಾರಿಗಳು ಬೇರೆ ಮನೆಯ ಛಾಯಾಚಿತ್ರವನ್ನು ನೀಡಿ “ಮನೆ ಪೂರ್ಣಗೊಂಡಿದೆ” ಎಂದು ಮಾಹಿತಿ ನೀಡಿರುವುದು ಗಂಭೀರ ಅಕ್ರಮವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಇದೇ ವೇಳೆ, ೩೫೦ ಮನೆಗಳ ಕಾಮಗಾರಿ ಸಂಪೂರ್ಣಗೊAಡಿದೆ ಎಂದು ತೋರಿಸಿ ಗುತ್ತಿಗೆದಾರರು ಸಂಪೂರ್ಣ ಬಿಲ್ ಪಡೆದುಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ ಅನೇಕ ಮನೆಗಳು ಅಪೂರ್ಣವಾಗಿದ್ದು, ಫಲಾನುಭವಿಗಳಿಗೆ ಮೋಸವಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದಿನಾಂಕ ೦೫.೦೫.೨೦೨೬ ರಂದು ಸಹಾಯಕ ಆಯುಕ್ತರು ಸ್ವತಃ ಸ್ಥಳ ಪರಿಶೀಲನೆ ನಡೆಸಿ, ಎರಡು-ಮೂರು ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಭರವಸೆ ನೀಡಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರಶಾಂತ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದ್ದರಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮಂಜೂರಾದ ಮನೆ ತಕ್ಷಣ ಪೂರ್ಣಗೊಳಿಸಿ, ತಪ್ಪು ಮಾಹಿತಿ ನೀಡಿದ ಅಧಿಕಾರಿಗಳು ಹಾಗೂ ಸಂಬAಧಪಟ್ಟ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸುರೇಶ ಇಟಗಿ, ಗುಂಡೇಶ ಶಿವನೂರ, ದೇವೇಂದ್ರ ಕವಳೇಕಾರ, ದತ್ತು ಹೈಯಾಳಕರ್ ಇದ್ದರು.