Home ಜಿಲ್ಲೆ ಯೋಜನೆ ಕಾರ್ಯಾರಂಭಕ್ಕೆ ಆಗ್ರಹ

ಯೋಜನೆ ಕಾರ್ಯಾರಂಭಕ್ಕೆ ಆಗ್ರಹ

ನವಲಗುಂದ,ಮೇ20 : ಮಲಪ್ರಭಾ ಮಹದಾಯಿ ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆ ಕುರಿತು ತಕ್ಷಣವೇ ಸರ್ವಪಕ್ಷ ಸಭೆಕರೆದು ಪ್ರಧಾನಮಂತ್ರಿಗಳ ಬಳಿ ನಿಯೋಗ ಕರೆದೋಯ್ದು ಕೂಡಲೇ ಸಮಸ್ಯೆ ಪರಿಹರಿಸಿ ಯೊಜನೆ ಕಾರ್ಯಾರಂಭ ಮಾಡುವಂತೆ ಆಗ್ರಹಿಸಿ ಮಹದಾಯಿ ಕಳಸಾ ಬಂಡೂರಿ ಹೋರಾಟಗಾರರು ತಹಶೀಲ್ದಾರ ಕಚೇರಿ ಶಿರೇಸ್ತದಾರ ಗಣೇಶ ಚಳ್ಳಕೆರೆ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಹೋರಾಟಗಾರ ಸುಭಾಸಚಂದ್ರಗೌಡ ಪಾಟೀಲ ಮಾತನಾಡಿ ಮಲಪ್ರಭೆ ಮಹದಾಯಿ ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆ ಕುರಿತು ಜಲಸಂಪನ್ಮೂಲ ಸಚಿವರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ ಅವರು ಎಂಪಿ ಗಳ ಸಭೆ ಕರೆದು ಪ್ರಧಾನಮಂತ್ರಿಗಳ ಬಳಿಗೆ ಹೋಗುವದಾಗಿ ಸಭೆ ಮಾಡಿದ್ದಾರೆ ಆದರೆ ಇದುವರೆಗೂ ಯಾವುದೇ ಕಾರ್ಯವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು

ಉತ್ತರ ಕರ್ನಾಟಕದಲ್ಲಿ ಮುಂಗಾರು ಪ್ರಾರಂಭವಾಗಿದ್ದು ಇಂಥ ಸಂದರ್ಭದಲ್ಲಿ ಡಿಸ್ಕೆಲ್ ಪೆಟ್ರೋಲ್ ರೈತರಿಗೆ ಹಾಗೂ ರೈತರಿಗೆ ಡಿಜೈಲ್ ಪೆಟ್ರೋಲ್ ಕ್ಯಾನಗಳಿಗೆ ಕೊಡುವುದಿಲ್ಲ. ಮೊದಲಿನಂತೆ ಕ್ಯಾನ ಮೂಲಕ ಪೆಟ್ರೋಲ್ ಡೀಸೆಲ್ ರೈತರಿಗೆ ಪೂರೈಸಬೇಕು.

ರೈತರಿಗೆ ಎಫ್ ಐ ಡಿ ಮೂಲಕ ಗೊಬ್ಬರ ವಿತರಣೆ ನಿಲ್ಲಿಸಿ ಎಲ್ಲಾ ಅಂಗಡಿಗಳಲ್ಲಿ ಮತ್ತು ಸೊಸೈಟಿಗಳ ಮೂಲಕ ವಿತರಣೆಯಾಗಬೇಕು ಗೊಬ್ಬರಗಳ ರೈತರಿಗೆ ಕೋರತೆಯಾಗಂತ ನೋಡಿಕೊಳ್ಳಬೇಕು. ರೈತ ಸಂಪರ್ಕ ಕೇಂದ್ರಗಳಲ್ಲಿ ಮುಂಗಾರು ಹಂಗಾಮಿನ ಹೆಸರು ಸೋಯಾಬೀನ್ ಗೋವಿನಜೋಳ ಇತರ ಬೀಜಗಳನ್ನು ತಕ್ಷಣವೇ ವಿತರಣೆಯಾಗಬೇಕು.

ಬೆಳೆ ವಿಮೆ ವಿತರಣೆಯಲ್ಲಿ ಅನೇಕ ರೈತರಿಗೆ ವಿಮೆ ಸಿಗದಾಗಿದೆ ಇನ್ನೂ ಕಳೆದ ವರ್ಷಸತತವಾಗಿ ಮಳೆ ಸುರಿದಿದ್ದರಿಂದ ಗೋವಿನ ಜೋಳ ಬೆಳೆ ಹಾನಿಯಾಗಿ ರೈತರಿಗೆ ಬೆಳೆವಿಮೆ ಬಂದಿರುವುದಿಲ್ಲ ಎಲ್ಲ ರೈತರಿಗೂ ಬೆಳೆ ವಿಮಾ ದೊರಕಬೇಕು ಹಾಗೂ ಹೆಸರು ಪಿಕಿನಲ್ಲಿಯೂ ಬೆಳೆ ವಿಮ್ ವ್ಯತ್ಯಾಸವಾಗಿದ್ದು ತಕ್ಷಣವೇ ಸರ್ಕಾರ ಮತ್ತು ವೀಮಾ ಕಂಪನಿಯವರಿಗೆ ಪರಾಮರ್ಶಿಸಿ ಎಲ್ಲ ರೈತರಿಗೂ ಬೆಳೆಯಮ ಕೊಡಬೇಕು ಹಾಗೂ ಬಾಕಿ ಉಳಿದ ರೈತರಿಗೆ ಬೆಳೆ ವಿಮಾ ಪರಿಹಾರ ವಿತರಣೆಯಾಗಬೇಕು

ಪಟ್ಟಣದಲ್ಲಿ ಎಪಿಎಂಸಿ ಉಪ ಮಾರುಕಟ್ಟೆ ಇದ್ದು ನವಲಗುಂದಕ್ಕೆ ಪ್ರತ್ಯೇಕ ಎಪಿಎಂಸಿ ಮಾರುಕಟ್ಟೆಯಾಗಬೇಕು ಅಲ್ಲದೇ ನವಲಗುಂದಕ್ಕೆ ಅಗ್ನಿಶಾಮಕ ಅತಿ ಅವಶ್ಯಕಯಿದೆ ಹಾಗೂ ನವಲಗುಂದಕ್ಕೆ ತಕ್ಷಣವೇ ರೈತ ಸಂಪರ್ಕ ಕೇಂದ್ರವನ್ನು ತೆರೆಯಬೇಕು ಎಂದು ಅವರು ಒತ್ತಾಯಿಸಿದರು.

ಹೋರಾಟ ಸಮಿತಿ ಅಧ್ಯಕ್ಷ ಯಲ್ಲಪ್ಪ ದಾಡಿಭಾವಿ, ರವಿ ತೋಟದ, ಅಲ್ಲಾಬಕ್ಷ ಹಂಚಿನಾಳ, ನಿಂಗಪ್ಪ ತೋಟದ, ಯಲ್ಲಪ್ಪ ತಡಸಿ, ಸಂಗಪ್ಪ ನೀಡವಣಿ, ಗೋವಿಂದರಡ್ಡಿ ಮೊರಬದ, ಪಕ್ಕೀರಗೌಡ ಬಸನಗೌಡ್ರ, ಉಳಿವೆಪ್ಪ ಉಳ್ಳಾಗಡ್ಡಿ, ಹುಸೇನಷಾ ಮಕಾಂದಾರ, ಇಮಾಮಸಾಬ ಚಾಹುಸೇನ್, ಸಿದ್ದಲಿಂಗಪ್ಪ ಹಳ್ಳದ ಇತರರು ಇದ್ದರು.