Home ಜಿಲ್ಲೆ ವಿದ್ಯುತ್ ಸ್ಪರ್ಶದಿಂದ ಬಾಲಕನ ಸಾವು: ಸಾಂತ್ವನ

ವಿದ್ಯುತ್ ಸ್ಪರ್ಶದಿಂದ ಬಾಲಕನ ಸಾವು: ಸಾಂತ್ವನ

ಕುಂದಗೋಳ,ಮೇ20: ತಾಲ್ಲೂಕಿನ ಗುಡಗೇರಿ ಗ್ರಾಮದಲ್ಲಿ ವಿದ್ಯುತ್ ತಗಲಿ 10 ವರ್ಷದ ಬಾಲಕ ಕಾರ್ತಿಕ ಪೂಜಾರ ಮೃತಪಟ್ಟ ಘಟನೆ ತೀವ್ರ ನೋವುಂಟು ಮಾಡಿದೆ ಎಂದು ಶಾಸಕ ಎಂ ಆರ್ ಪಾಟೀಲ ಹೇಳಿದರು.


ಘಟನೆಯ ಹಿನ್ನಲೆಯಲ್ಲಿ ಅವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಮೃತ ಬಾಲಕನ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ವೈಯಕ್ತಿಕ ಸಹಾಯಧನ ನೀಡಿದರು.


ಇಂಥ ದುರ್ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ತಿಳಿಸಲಾಗಿದೆ ಎಂದರು.


ಈ ಸಂದರ್ಭದಲ್ಲಿ ಮಾಹಂತೇಶ ಶ್ಯಾಗೋಟಿ, ಉಮೇಶ ಹೇಬಸೂರ,ಬಸನಗೌಡ ಕರೆಹೊಳಲಪ್ಪನವರ್ ಸಹದೇವ ಮಾಳಗಿ,ಬಸವರಾಜ ನಾಗನಾಯ್ಕರ, ವಿನಾಯಕ ಮುನ್ನಾಳಕೆರಿ ಇದ್ದರು.