ನಗರದ ಹೆಗ್ಗನಹಳ್ಳಿಯ ನಿಸರ್ಗ ಹೈಸ್ಕೂಲ್ ಆವರಣದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಶಾಸಕ ಎಸ್. ಮುನಿರಾಜುರವರು ಉದ್ಘಾಟಿಸಿದರು. ಮಾಜಿ ಬಿಬಿಎಂಪಿ ಸದಸ್ಯ ಹಾಗೂ ಶಾಲೆಯ ಸಂಸ್ಥಾಪಕ ಹೆಚ್.ಎನ್. ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.