
ಬಾದಾಮಿ, ಮೇ20: ತಾಲೂಕಿನ ಮಮಟಗೇರಿ ಹನುಮಸಾಗರ, ಕಲ್ಲಾಪುರ, ತಪ್ಪಸಕಟ್ಟಿ ಸೋಮನಕೊಪ್ಪ, ಚೊಳಚಗುಡ್ಡ ಗ್ರಾಮಗಳಲ್ಲಿ ಎಲೆ ಬಳ್ಳಿ ಸಂಪೂರ್ಣ ನಾಶವಾಗಿದ್ದು, ಮತ್ತು ಕೆಲವಷ್ಟು ಕಡೆ ಬಾಳೆ ನಾಶವಾದ ಸ್ಥಳಕ್ಕೆ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಹಾಂತೇಶ್ ಲಕ್ಷ್ಮಣ ಹಟ್ಟಿ ಅವರು ಭೇಟಿ ನೀಡಿ ಎಲೆ ಬಳ್ಳಿ ನಾಶವಾಗಿರುವುದನ್ನು ವೀಕ್ಷಿಸಿದರು.
ಮುಖ್ಯಮಂತ್ರಿಗಳಿಗೆ ಮತ್ತು ತೋಟಗಾರಿಕೆ ಸಚಿವರಿಗೆ ಕೃಷಿ ಸಚಿವರಿಗೆ ಕೂಡಲೇ ಈ ಭಾಗದ ಎಲೆ ಬಳ್ಳಿ ಕನಿಷ್ಠ 60 ರಿಂದ 70 ಹೆಕ್ಟರ್ ಬೇರೆ ಬೇರೆ ರೈತರ ಹಾನಿಯಾಗಿದ್ದು ಆ ರೈತರ ತೋಟಗಳಿಗೆ ಭೇಟಿ ನೀಡಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರ ಮೂಲಕ ಹಾನಿ ಪರಿಶೀಲನೆ ಮಾಡಿ ಕೂಡಲೇ ಸರ್ಕಾರಕ್ಕೆ ವರದಿ ಕಳಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ತೋಟಗಾರಿಕೆ ಸಹಾಯಕ ನಿರ್ದೇಶಕ ಬಿ.ಪಿ.ಪಾಟೀಲ್, ಅಧಿಕಾರಿ ತುಳಸಿಗೇರಿ ಮತ್ತು ಇಲಾಖೆ ಸಿಬ್ಬಂದಿ ವರ್ಗ ಹಾಜರಿದ್ದರು.





















