Home ಜಿಲ್ಲೆ ಬೆಂಗಳೂರು ಕೇಂದ್ರದ ನೀತಿಯಿಂದ ಬಡವರ ಪಡಿತರ ಚೀಟಿ ರದ್ದು

ಕೇಂದ್ರದ ನೀತಿಯಿಂದ ಬಡವರ ಪಡಿತರ ಚೀಟಿ ರದ್ದು

ಕೆಜಿಎಫ್,ಜು.೩೦: ಕಳೆದ ೩ ವರ್ಷಗಳಿಂದ ಪಡಿತರ ಚೀಟಿದಾರರಿಗೆ ಯಾವುದೇ ಸಮಸ್ಯೆಗಳು ಉದ್ಬವವಾಗಿರಲಿಲ್ಲ.ಆದರೆ ದಿಢೀರ್ ಎಂದು ಏಕೆ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎಂದು ಮಾಧ್ಯಮದವರು ಅಧಿಕಾರಿಗಳನ್ನು ಪ್ರಶ್ನೆಗಳನ್ನು ಕೇಳುವಂತೆ ಮಾಧ್ಯಮದವರಿಗೆ ಸಲಹೆ ನೀಡಿದ ಘಟನೆ ನಡೆಯಿತು.


ನಗರಸಭೆ ಸಭಾಂಗಣದಲ್ಲಿ ಪಡಿತರ ಚೀಟಿದಾರರ ಅಹವಾಲು ಜನಸ್ಪಂದನ ಸಭೆಯನ್ನು ಶಾಸಕಿ ರೂಪಶಶಿಧರ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.


ಸಭೆಯಲ್ಲಿ ನೂರಾರು ಮಹಿಳೆಯರು ಕಳೆದ ಹಲವು ವರ್ಷಗಳಿಂದ ಪಡಿತರ ಧಾನ್ಯ ಬರುತ್ತಿತ್ತು.ಆದರೆ ದಿಢೀರ್ ಎಂದು ಬಿಪಿಎಲ್ ಕಾರ್ಡ್‌ನಿಂದ ಎಪಿಎಲ್ ಕಾರ್ಡ್‌ಗೆ ಬದಲಾವಣೆಗೊಳಿಸಲಾಗಿದೆ.ನಮ್ಮ ಮನೆಯಲ್ಲಿ ದುಡಿಯುವ ಕೈಗಳು ಯಾರು ಇಲ್ಲ ಮನೆಯಲ್ಲಿರುವ ಮಕ್ಕಳು ನಮ್ಮನ್ನು ನೋಡಿಕೊಳ್ಳುವುದಿಲ್ಲ ನಮಗೆ ಲಭಿಸುತ್ತಿದ್ದ ಆಹಾರ ಧಾನ್ಯಗಳು ಸಹಕಾರಿಯಾಗಿತ್ತು.


ಆದರೆ ನಿಮ್ಮ ಮಕ್ಕಳು ನೌಕರಿ ಮಾಡುತ್ತಿರುವುದರಿಂದ ನಿಮ್ಮ ಕಾರ್ಡ್ ರದ್ದುಪಡಿಸಲಾಗಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡುತ್ತಿದ್ದಾರೆ.ನಾವು ಯಾರಿಗೆ ನಮ್ಮ ನೋವನ್ನು ಹೇಳಿಕೊಳ್ಳುವುದು.ನಮಗೆ ನೀಡಲಾಗಿದ್ದ ಬಿಪಿಎಲ್ ಕಾರ್ಡ್ ನೀಡಬೇಕು ಬಿಪಿಎಲ್ ಕಾರ್ಡ್‌ನಿಂದ ನಮಗೆ ಆರೋಗ್ಯ ಸಮಸ್ಯೆ ಕಂಡು ಬಂದಾಗ ಉಪಯೋಗವಾಗುತ್ತಿತ್ತು.ಆದರೆ ಬಿಪಿಎಲ್ ಕಾರ್ಡ್ ಇಲ್ಲಿದಿರುವುದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಹ ಕಷ್ಟವಾಗುತ್ತಿದೆ ಎಂಬ ಅಳಲನ್ನು ತೊಡಿಕೊಂಡರು.


ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಆಹಾರ ಮತ್ತು ನಾಗರೀಕ ಸರಬರಾಜು ಜಂಟಿ ನಿದೇರ್ಶಕ ರಾಜಶೇಖರ್,ಕೇಂದ್ರ ಒಂದು ನಿಯಮವನ್ನು ಜಾರಿಗೊಳಿಸಿ ೩ ಎಕರೆಗಿಂತ ಹೆಚ್ಚು ಜಮೀನು ಹೊಂದಿರುವರು ಮನೆಯಲ್ಲಿ ನೌಕರಿಯಲ್ಲಿ ಇರುವ ಮನೆ ಮಗ ಹಾಗೂ ಸ್ವಂತ ಮನೆ ,ಸ್ವಂತ ವಾಹನ ಹೊಂದಿರುವರ ೭.೭೬ ಲಕ್ಷ ಕಾರ್ಡ್‌ಗಳನ್ನು ರದ್ದುಪಡಿಸುವಂತೆ ಆದೇಶ ನೀಡಲಾಗಿತ್ತು.


ಆದರೆ ನಾವು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮನೆ ಮನೆಗೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮವಹಿಸುವಂತೆ ಸೂಚಿಸಿದ್ದೇವು ಅದರಂತೆ ಕೆಜಿಎಫ್ ವಿಧಾನಸಭೆ ಕ್ಷೇತ್ರದ ನಗರ ಪ್ರದೇಶದಲ್ಲಿ ೧೧೦೦ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ೮೦೦ ಕಾರ್ಡ್‌ಗಳು ರದ್ದುಗೊಂಡಿವೆ ಎಂದು ಹೇಳಿದರು.


ಶಾಸಕಿ ರೂಪಶಶಿಧರ್ ಮಾತನಾಡಿ,ರಾಜ್ಯ ಸರ್ಕಾರ ಯಾರ ಕಾರ್ಡ್‌ಗಳನ್ನು ರದ್ದುಪಡಿಸಿರಲಿಲ್ಲ.ಆದರೆ ಕೇಂದ್ರದ ನೀತಿಯಿಂದ ಬಡವರ ರೇಷನ್ ಕಾರ್ಡ್‌ಗಳು ರದ್ದುಗೊಂಡಿವೆ.ಮನೆ ನಿರ್ಮಿಸಲು ಬ್ಯಾಂಕ್ ನಿಂದ ಸಾಲ ಪಡೆಯಲು ತೆರೆಗೆ ಪಾವತಿದಾರರು ಎಂದು ನಮೂಧಿಸಿದ್ದಾರೆ.ಅಂತಹ ರೇಷನ್ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ.ಅರ್ಹ ರೇಷನ್ ಕಾರ್ಡ್‌ದಾರರಿಗೆ ಮರಳಿ ಕಾಡ್‌ಗಳನ್ನು ವಿತರಿಸುವ ನಿಟ್ಟಿನಲ್ಲಿ ನಗರ ಹಾಗೂ ಗ್ರಾಮೀಣಭಾಗದಲ್ಲಿ ವಿಶೇಷ ಅಂದೋಲನವನ್ನು ಎರ್ಪಡಿಸುವ ಮೂಲಕ ಬಡವರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲಾಗುವುದು ಎಂದು ಹೇಳಿದರು.