
ಧಾರವಾಡ,ಆ೨೫: ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ -೨೦೨೬ ರ ಸಂಬAಧ ಮತದಾರರ ಕರಡು ಪಟ್ಟಿ ಪ್ರಕಟಿಸಲಾಗಿದ್ದು, ಒಟ್ಟು ೧೩,೫೩,೯೪೬ ಮತದಾರರು ಕರಡು ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿದ್ದ ಒಟ್ಟು ೧೬,೨೧,೯೬೧ ಮತದಾರರ ಪೈಕಿ ಶೇ. ೮೩.೪೮ ರಷ್ಟು ಅಂದರೆ ೧೩,೫೩,೯೪೬ ಮತದಾರರ ಮಾಹಿತಿ ಪರಿಶೀಲಿಸಿ ಕರಡು ಪಟ್ಟಿಗೆ ತರಲಾಗಿದೆ ಎಂದು ಹೇಳಿದರು.
ಕರಡು ಮತದಾರರ ಪಟ್ಟಿಯಿಂದ ಹೊರಗುಳಿದ ಒಟ್ಟು ೨,೬೮,೦೧೫ ಮತದಾರರ ಪೈಕಿ ೫೨,೭೯೧ ಮಂದಿ ಮೃತಪಟ್ಟಿದ್ದಾರೆ, ೧,೨೫,೨೮೭ ಮತದಾರರು ಶಾಶ್ವತವಾಗಿ ವಲಸೆ ಹೋಗಿದ್ದಾರೆ. ೨೭,೧೮೫ ದ್ವಿ ಪ್ರತಿ ಹಾಗೂ ೬೨,೦೭೯ ಗೈರು ಮತದಾರರು ಹಾಗೂ ೬೭೩ ಇತರೆ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಮಾಹಿತಿ ನೀಡಿದರು.
ಕರಡು ಮತದಾರರ ಪಟ್ಟಿ ಪ್ರಕಟಗೊಂಡಿದ್ದು, ಇಂದಿನಿAದ ಸೆಪ್ಟೆಂಬರ್ ೨೩ ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಅಗಸ್ಟ್ ೨೪, ೨೦೨೬ ರಿಂದ ಪ್ರಾರಂಭವಾಗಿ ಸಪ್ಟೆಂಬರ್ ೨೩, ೨೦೨೬ ರಂದು ಮುಕ್ತಾಯಗೊಳ್ಳುವ ಹಕ್ಕು ಮತ್ತು ಆಕ್ಷೇಪಣೆ ಅವಧಿಯಲ್ಲಿ ಸಂಬAಧಿಸಿದ ಮತದಾರರ ನೋಂದಣಾಧಿಕಾರಿಗಳಿಗೆ, ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ, ಮತಗಟ್ಟೆ ಅಧಿಕಾರಿಗಳಿಗೆ ಮತ್ತು Voters Portal (voters.eci.gov.in) or ECI Voter Helpline App.ದಲ್ಲಿ ಅರ್ಹ ಮತದಾರರು ನಮೂನೆ-೬ ದೊಂದಿಗೆ ನಿಗದಿತ ಘೋಷಣಾ ನಮೂನೆಯನ್ನು ಭರಣಾ ಮಾಡಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
ಂSಆಆಔ ಯಾದಿಗಳನ್ನು ಜಿಲ್ಲೆಯ ಏಳು ವಿಧಾನಸಭಾ ಮತ ಕ್ಷೇತ್ರವಾರು ಮತದಾರರ ನೋಂದಣಾಧಿಕಾರಿಗಳ, ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ, ಜಿಲ್ಲಾ ಚುನಾವಣಾಧಿಕಾರಿಗಳ ವೆಬ್ ಸೈಟ್ https://jharkhand.nic.in/en/elections/ ಮತ್ತು ಮುಖ್ಯ ಚುನಾವಣಾಧಿಕಾರಿಗಳು ಬೆಂಗಳೂರು ಇವರ ವೆಬ್ಸೈಟ್ <https://ceo.karnataka.gov.in/asso.html> ನಲ್ಲಿ ಸಾರ್ವಜನಿಕರ ಮಾಹಿತಿ ಹಾಗೂ ಸೂಕ್ತ ಸಲಹೆಗಾಗಿ ಪ್ರಸಿದ್ದಿ ಪಡಿಸಲಾಗಿರುತ್ತದೆ ಎಂದು ತಿಳಿಸಿದರು.
ಮತದಾರರ ಯಾದಿ ಸಮಗ್ರ ಪರಿಷ್ಕರಣೆ ೨೦೨೬ ನಿಮಿತ್ತ ಮತಗಟ್ಟೆ ಅಧಿಕಾರಿಗಳು ಮನೆ ಮನೆ ಭೇಟಿ ನೀಡಿ ಗಣತಿ ಕಾರ್ಯ ಕೈಗೊಂಡಾಗ ವಿಳಾಸದಲ್ಲಿ ಲಭ್ಯವಿಲ್ಲದ ಅರ್ಹ ಮತದಾರರು ಅಂದರೆAbsentee Ballot ಮತದಾರರು ಹಾಗೂ ಭಾರತದ ಯಾವುದೇ ಪ್ರದೇಶದಲ್ಲಿ ಮತದಾರರಾಗಿ ನೋದಣಿಯಾಗದ ಮತ್ತು ಜಿಲ್ಲೆಯಲ್ಲಿ ಯಾವುದಾರರೂ ಮತ ಕ್ಷೇತ್ರದಲ್ಲಿ ಖಾಯಂ ರಹವಾಸಿಯಾಗಿರುವ ಅರ್ಹ ಮತದಾರರು ನಮೂನೆ ೭ ಭರ್ತಿ ಮಾಡಬೇಕು. ಅಗಸ್ಟ್ ೨೪, ೨೦೨೬ ರಂದು ಪ್ರಸಿದ್ದಿ ಪಡಿಸಲಾದ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಯಾಗದೆ ಇರುವ ಅರ್ಹ ಮತದಾರರು ನಮೂನೆ ೮ ಭರ್ತಿ ಮಾಡಬೇಕು. ಅಕ್ಟೋಬರ್ ೦೧, ೨೦೨೬ ಕ್ಕೆ ೧೮ ವರ್ಷ ಪೂರ್ಣಗೂಳ್ಳುವ ಅರ್ಹ ಮತದಾರರು ನಮೂನೆ ೬ ನ್ನು ಭರ್ತಿ ಮಾಡಬೇಕು ಎಂದು ತಿಳಿಸಿದರು.
ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ: ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-೨೦೨೬ ಸಂಬAಧ ಕರಡು ಮತದಾರರ ಪಟ್ಟಿಯನ್ನು ಪ್ರಚುರ ಪಡಿಸುವ ಕುರಿತು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರ ಅಧ್ಯಕ್ಷತೆಯಲ್ಲಿ ರಾಜಕೀಯ ಪಕ್ಷಗಳ ಸಭೆ ಜರುಗಿತು.
ಕರಡು ಮತದಾರರ ಪಟ್ಟಿಯನ್ನು ಮತಗಟ್ಟೆ ಕೇಂದ್ರ, ಗ್ರಾಮ ಪಂಚಾಯಿತಿ ಕಚೇರಿ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ, ತಾಲ್ಲೂಕು ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ ಹಾಗೂ https://jharkhand.nic.in/en/elections/ ಮತ್ತು ವೆಬ್ಸೈಟ್ನಲ್ಲಿಯೂ ಪರಿಶೀಲಿಸಿಕೊಂಡು ಈ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ ಹಾಗೂ ಅರ್ಜಿಗಳನ್ನು ಇಅI ಓಇಖಿ ಒಔಃIಐಇ ಂPPಐIಅAಖಿIಔಓ ನಲ್ಲಿಯೂ ಆನ್ಲೈನ್ ಮೂಲಕ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಅರ್ಹತಾ ದಿನಾಂಕಕ್ಕೆ ೧೮ ವರ್ಷ ಪೂರ್ಣಗೊಳ್ಳುವವರು ಹಾಗೂ ಅರ್ಹ ಮತದಾರರು ಸಂಬAಧಿಸಿದ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಲ್ಲದವರು ಹಾಗೂ ಹೆಸರು ಕೈಬಿಟ್ಟು ಹೋಗಿರುವವರು ಹಾಗೂ ಮತದಾರರ ಪಟ್ಟಿಯಲ್ಲಿ ಮಾಹಿತಿಯನ್ನು ತಿದ್ದುಪಡಿ ಮಾಡಿಸಬೇಕಾದಲ್ಲಿ ಮತ್ತು ಅದೇ ವಿಧಾನಸಭಾ ಕ್ಷೇತ್ರದ ಬೇರೆ ಮತಗಟ್ಟೆಗೆ ವರ್ಗಾಯಿಸಬೇಕಾಗಿದ್ದಲ್ಲಿ ನಮೂನೆಗಳಲ್ಲಿ ಆಗಸ್ಟ್ ೨೪ ರಿಂದ ಅಕ್ಟೋಬರ್ ೨೨ ರೊಳಗೆ ಅರ್ಜಿಗಳನ್ನು ಭರ್ತಿ ಮಾಡಿ ತಮ್ಮ ವ್ಯಾಪ್ತಿಯ ಮತದಾನ ಕೇಂದ್ರದಲ್ಲಿ, ತಾಲ್ಲೂಕು ಕಚೇರಿಯಲ್ಲಿ, ಮತದಾರರ ನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ನೀಡಿ ಸ್ವೀಕೃತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ೦೭ ವಿಧಾನಸಭಾ ಮತಕ್ಷೇತ್ರಗಳಿಗೆ ಸಂಬAಧಿಸಿದAತೆ ಈ ಹಿಂದೆ ಒಟ್ಟು ೧,೬೬೫ ಮತಗಟ್ಟೆಗಳಿದ್ದು, ಪ್ರಸ್ತುತ ೧,೭೦೭ ಮತಗಟ್ಟೆಗಳನ್ನು ಪ್ರಸಿದ್ದಿಪಡಿಸಿರುತ್ತಾರೆ.
ಅಗಸ್ಟ್ ೨೪, ೨೦೨೬ ರಂದು ಜಿಲ್ಲೆಯ ೦೭ ವಿಧಾನಸಭಾ ಮತಕ್ಷೇತ್ರವಾರು ಪ್ರಸಿದ್ದಿಪಡಿಸಲಾದ ಕರಡು ಮತದಾರರ ಪಟ್ಟಿಗಳನ್ನು ಮತ್ತು ಭಾರತ ಚುನಾವಣಾ ಆಯೋಗದಿಂದ ಅನುಮೋದನೆಯಾದ ನಂತರದ ಜಿಲ್ಲೆಯ ಒಟ್ಟು ೧,೭೦೭ ಮತಗಟ್ಟೆಗಳ ಯಾದಿಗಳನ್ನು ಪ್ರಮುಖ ನೋಂದಾಯಿತ ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಮಾಹಿತಿಗಾಗಿ ನೀಡಲಾಗಿದೆ.
ಜಿಲ್ಲೆಯಲ್ಲಿ ಜೂನ್ ೧೬, ೨೦೨೬ ರಿಂದ ಅಗಸ್ಟ್ ೨೩, ೨೦೨೬ ರ ವರೆಗೆ ೧೫,೦೪೪ ಅರ್ಜಿಗಳು ನಮೂನೆ-೬, ೬೪ ಅರ್ಜಿಗಳು ೬ಎ, ೫೩೦ ಅರ್ಜಿಗಳು ನಮೂನೆ-೭, ಮತ್ತು ೨೮,೩೬೨ ಅರ್ಜಿಗಳು ನಮೂನೆ-೮ ಸೇರಿ ಒಟ್ಟು ೪೪,೦೦೦ ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸಿದ್ದಾರೆ.
ಅಗಸ್ಟ್ ೨೪, ೨೦೨೬ ರಿಂದ ಸಪ್ಟೆಂಬರ ೨೩, ೨೦೨೬ ವರೆಗೆ ಸ್ವೀಕೃತವಾಗುವ ನಮೂನೆ-೬, ೭ ಮತ್ತು ೮ ನೇದ್ದವುಗಳನ್ನು ಹಾಗೂ ಎಸ್ಐಆರ್-೨೦೨೬ ನೋಟಿಸ್ ಜಾರಿಗೊಳಿಸಿ, ಅಗಸ್ಟ್ ೨೪, ೨೦೨೬ ರಿಂದ ಅಕ್ಟೋಬರ್ ೨೨, ೨೦೨೬ ರ ವರೆಗೆ ವಿಲೇವಾರಿ ಮಾಡಲು ಜಿಲ್ಲೆಯಲ್ಲಿ ೭೮ ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಅರ್ಹ ಮತದಾರರು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ಇವರೆಗೆ ಭಾಗಿಯಾಗಿ ಯಶಸ್ವಿಗೊಳಿಸಲು ಸಹಕಾರ ನೀಡಿದ್ದು, ಅದರಂತೆ ಮುಂದಿನ ಅಕ್ಟೋಬರ್ ೨೨, ೨೦೨೬ರ ವರೆಗೆ ಸಹಕಾರ ನೀಡಲು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ. ರುದ್ರೇಶ ಎಸ್.ಘಾಳಿ, ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಹಾಗೂ ಎಲ್ಲ ವಿಧಾನಸಭಾ ಕ್ಷೇತ್ರದ ಮತದಾರರ ನೊಂದಣಾಧಿಕಾರಿಗಳು, ಎಲ್ಲ ರಾಜಕೀಯ ಪಕ್ಷದ ಮುಖಂಡರು ಉಪಸ್ಥಿತರಿದ್ದರು.






























