Home ಜಿಲ್ಲೆ ಬೆಂಗಳೂರು ಚರಂಡಿ ಸ್ವಚ್ಚತೆಗೆ ಕ್ರಮ ಕೈಗೊಳ್ಳದ ಅಧಿಕಾರಿಗಳು,ಜನಪ್ರತಿನಿಧಿಗಳು

ಚರಂಡಿ ಸ್ವಚ್ಚತೆಗೆ ಕ್ರಮ ಕೈಗೊಳ್ಳದ ಅಧಿಕಾರಿಗಳು,ಜನಪ್ರತಿನಿಧಿಗಳು

ಕೆಜಿಎಫ್.ಜು.೨೯:ಅಧಿಕಾರಿಗಳಿಗೆ ಹೇಳಿ ಸಾಕಾಗಿ ಹೋಗಿ ಕಡೆಗೆ ನಮ್ಮ ಕೆಲಸ ನಾವು ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ ಸಾರ್ವಜನಿಕರು ತಮ್ಮ ರಸ್ತೆಯಲ್ಲಿರುವ ಚರಂಡಿ ಸ್ವಚ್ಚತೆಯನ್ನು ಹಲವು ದಿನಗಳಿಂದ ತಾವೇ ಮಾಡುತ್ತಿರುವುದು ಬೆಳಕಿಗೆ ಬಂದಿದೆ.


ನಗರ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಪಾರಂಡಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ೩ನೇ ಬ್ಲಾಕ್‌ನಲ್ಲಿ ಚರಂಡಿ ಕಾಮಗಾರಿ ನಡೆಸಲು ಕಾಮಗಾರಿ ಪ್ರಾರಂಭಿಸಿ ಹಲವು ವರ್ಷಗಳೇ ಕಳೆದಿದ್ದರು ಇದುವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ


ಹೀಗಾಗಿ ಅಪೂರ್ಣಗೊಂಡಿರುವ ಕಾಮಗಾರಿಯಿಂದ ಮನೆಗಳಲ್ಲಿನ ತ್ಯಾಜ್ಯದ ನೀರು ರಸ್ತೆ ಮೇಲೆ ಬಂದು ದುರ್ವಾಸನೆ ಬೀರುತ್ತಿದೆ.ಸ್ಥಳೀಯ ನಿವಾಸಿಗಳು ನಿತ್ಯ ನರಗ ಯಾತನೆ ಅನುಭವಿಸುತ್ತಿದ್ದಾರೆ.


ಹಲವು ಬಾರಿ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಶಾಶ್ವತ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.


ಅಂತಿಮವಾಗಿ ಅಧಿಕಾರಿಗಳ ನಿರ್ಲಕ್ಷಕ್ಕೆ ಬೆಸೆತ್ತು ಜನರೇ ಸ್ವಯಂ ಪ್ರೇರಿತರಾಗಿ ತಮ್ಮ ರಸ್ತೆಯಲ್ಲಿನ ಚರಂಡಿ ಸ್ವಚ್ಚತೆಗೆ ಮುಂದಾಗಿದ್ದಾರೆ.ಪಂಚಾಯ್ತಿ ಮಾಡಬೇಕಾದ ಕೆಲಸವನ್ನು ನಾಗರೀಕರು ಮಾಡಬೇಕಾದ ಪರಿಸ್ಥಿತಿ ಪಾರಂಡಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಉದ್ಬವವಾಗಿದೆ.


ಇದರೊಂದಿಗೆ ಚುನಾಯಿತ ಪ್ರತಿನಿಧಿಗಳ ಆಡಳಿತ ಅವಧಿ ಸಹ ಮುಗಿದಿರುವುದರಿಂದ ಯಾರು ಸಹ ಇತ್ತ ಗಮನಹರಿಸುತ್ತಿಲ್ಲ ಎಂಬ ಟೀಕೆಗಳು ಕೇಳಿ ಬರುತ್ತಿದೆ.ಇನ್ನಾದರು ಇತ್ತ ಗಮನಹರಿಸಿ ಅಪೂರ್ಣಗೊಂಡಿರುವ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಲಿದ್ದಾರಾ ಕಾದು ನೋಡಬೇಕಿದೆ