Home ಜಿಲ್ಲೆ ಕಲಬುರಗಿ ಗೃಹಲಕ್ಷ್ಮಿ ಹಣದಿಂದ ಅಂಗನವಾಡಿ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ

ಗೃಹಲಕ್ಷ್ಮಿ ಹಣದಿಂದ ಅಂಗನವಾಡಿ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ

ಚಿತ್ತಾಪುರ: ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ದೊರೆಯುವ ಹಣವನ್ನು ವೈಯಕ್ತಿಕ ಬಳಕೆಗೆ ಮಾತ್ರ ಸೀಮಿತಗೊಳಿಸದೆ, ಅಂಗನವಾಡಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಬಳಸಿಕೊಂಡು ಕಾರ್ಯಕರ್ತೆ ವಿದ್ಯಾನಿಧಿ ಕವಡೆ ಅವರು ಗಮನಾರ್ಹ ಸಮಾಜಮುಖಿ ಕಾರ್ಯಕ್ಕೆ ಮುಂದಾಗಿದ್ದು ಇತರರಿಗೆ ಮಾದರಿಯ್ಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ತಾಲೂಕಾ ಅಧಿಕಾರಿ ಆರತಿ ತುಪ್ಪದ್ ಶ್ಲಾಘಿಸಿದರು.
ತಾಲೂಕಿನ ಅಂಗನವಾಡಿ ಕೇಂದ್ರ 5ರಲ್ಲಿನ ಅಂಗನವಾಡಿ ಕಾರ್ಯಕರ್ತೆ ವಿದ್ಯಾನಿಧಿ ಕವಡೆ ಅವರು ಸರ್ಕಾರದ ಗೃಹ ಲಕ್ಷ್ಮಿ ಯೋಜನೆ ಪ್ರಾರಂಭ ಆದಾಗಿನಿಂದ ಪ್ರತಿ ತಿಂಗಳು ಬಂದಂತಹ ಹಣವನ್ನು ಬಳಸಿಕೊಂಡು ಅಂಗನವಾಡಿ ಮಕ್ಕಳಿಗೆ ಪಠ್ಯಪುಸ್ತಕಗಳು, ಸಮವಸ್ತ್ರ, ಬ್ಯಾಗ್ ಹಾಗೂ ಅಗತ್ಯ ಶೈಕ್ಷಣಿಕ ಸಾಮಗ್ರಿಗಳನ್ನು ಖರೀದಿಸಿ ಮಕ್ಕಳಿಗೆ ವಿತರಿಸಿದ್ದಾರೆ. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಕಲಿಕೆಯ ಆಸಕ್ತಿ ಬೆಳೆಸಬೇಕು ಹಾಗೂ ಅವರಿಗೆ ಅಗತ್ಯವಾದ ಪುಸ್ತಕಗಳು ದೊರೆಯಬೇಕು ಎಂಬ ಉದ್ದೇಶದಿಂದ ಈ ಕಾರ್ಯ ಕೈಗೊಂಡಿರುವುದು ರಾಜ್ಯದಲ್ಲಿಯೇ ಮಾದರಿಯಾಗಿದ್ದಾರೆ ಇವರ ಈ ಕಾರ್ಯ ಹೀಗೆ ಮುಂದುವರೆಯಲಿ ಎಂದು ಹಾರೈಸಿದರು.
ಅಂಗನವಾಡಿ ಕೇಂದ್ರಗಳು ಮಕ್ಕಳ ಆರಂಭಿಕ ಶಿಕ್ಷಣ, ಕಲಿಕೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಪ್ರಮುಖ ವೇದಿಕೆಯಾಗಿವೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ಸ್ವಂತ ಖರ್ಚಿನಲ್ಲಿ ಒದಗಿಸಿರುವುದು ಇತರರಿಗೂ ಪ್ರೇರಣೆಯಾಗುವಂತಹ ಕಾರ್ಯವಾಗಿದೆ.
“ಮಕ್ಕಳ ಶಿಕ್ಷಣಕ್ಕಾಗಿ ಮಾಡುವ ಸಣ್ಣ ಸಹಾಯವೂ ಅವರ ಭವಿಷ್ಯದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಬಹುದು” ಎಂಬ ಆಶಯದೊಂದಿಗೆ ವಿದ್ಯಾನಿಧಿ ಕವಡೆ ಅವರು ಈ ಕಾರ್ಯ ಮಾಡಿದ್ದಾರೆ,
ಸರ್ಕಾರದ ಯೋಜನೆಯಿಂದ ದೊರೆಯುವ ಸೌಲಭ್ಯವನ್ನು ಸಮಾಜದ ಒಳಿತಿಗಾಗಿ ಬಳಸಿಕೊಂಡು, ವಿಶೇಷವಾಗಿ ಬಡ ಹಾಗೂ ಅಗತ್ಯವಿರುವ ಮಕ್ಕಳ ಶಿಕ್ಷಣಕ್ಕೆ ನೆರವಾಗಿರುವ ಈ ಕಾರ್ಯವು ಸಮಾಜಮುಖಿ ಚಿಂತನೆಗೆ ಉತ್ತಮ ಉದಾಹರಣೆಯಾಗಿದೆ ಎಂದರು.
ವಿದ್ಯಾನಿಧಿ ಕವಡೆ ಅವರು ಮಾತನಾಡಿ ಪ್ರತಿ ತಿಂಗಳು ಬರುವಂತಹ ಹಣವನ್ನು ನಾನು ಮಕ್ಕಳ ಭವಿಷ್ಯಕ್ಕಾಗಿ ಬಳಸುತ್ತಿದ್ದೆ,ಅಗತ್ಯ ವಸ್ತುಗಳ ಜೊತೆಗೆ ಮಕ್ಕಳಿಗೆ ವನಭೋಜನಕ್ಕೆ ಕರೆದುಕೊಂಡು ಹೋಗಿದ್ದೆನೆ, ಸರ್ಕಾರ ಯಾರದೆ ಇರಲಿ ಈ ಯೋಜನೆ ಜಾಲ್ತಿಯಲ್ಲಿ ಇರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ದಂಡೋತಿ ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ಶೋಭಾ ಕೇಶೆಟ್ಟಿ, ಜಿಲ್ಲಾ ಇಸಿಇ ಪೆÇ್ರೀಗ್ರಾಂ ವ್ಯವಸ್ಥಾಪಕರು ಕಲಿಕೆ ಟಾಟಾ ಟ್ರಸ್ಟ್ ಕಲಬುರ್ಗಿಯ ಮಲ್ಲಿಕಾರ್ಜುನ್ ಬಿ,ದಾನಿಗಳು ಸಿದ್ದಲಿಂಗಪ್ಪ ಯರಗಲ್,ಕಾಂಗ್ರೆಸ್ ಮುಖಂಡರು ಶರೀಫ್ ಸಾಬ್ ತೋಷಾಕನಿ, ಯುವ ಮುಖಂಡರು ನೀಲಕಂಠ ಮೂಕೆ ಸಹಾಯಕಿ ವಿದ್ಯಾ ಸೇರಿದಂತೆ ಫಲಾನುಭವಿಗಳು,ಪಾಲಕರು ಗ್ರಾಮಸ್ಥರು ಇದ್ದರು.