
ಕಲಬುರಗಿ,ಜು 16: ಅಳಂದ ತಾಲೂಕಿನ ನಿಂಬರಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನ,ಜಾನುವಾರು ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸಿದ್ದಪ್ಪ ಸುಪ್ರಯ್ಯ ಕಾಳೆ ( 50) ದತ್ತನಗರ ಮೊಹಳ ಸೋಲಾಪುರ,ಗೋವಿಂದ ಸೂರಚಂದ ಭೋಸಲೆ ( 40) ಕುರ್ಡವಾಡಿ ಸೊಲಾಪುರ ಮತ್ತು ಕಲಬುರಗಿ ಎಂಎಸ್‍ಕೆ ಮಿಲ್ ನಿವಾಸಿಗಳಾದ ಆಶೀಫ್ ಖುರೇಷಿ ಅಜೀಮ್ ಖುರೇಷಿ ( 25),ತೌಫಿಕ್ ಅಬ್ದುಲ್ ಗನಿ ( 30) ಎಂಬ ನಾಲ್ವರು ಬಂಧಿತ ಆರೋಪಿಗಳು.
ಬಂಧಿತರಿಂದ 10 ಗ್ರಾಮ್ ಬಂಗಾರ ಮತ್ತು 6.20 ಲಕ್ಷ ರೂ ನಗದು ಸೇರಿ ವಾಹನವನ್ನು ವಶ ಪಡಿಸಿಕೊಳ್ಳಲಾಗಿದೆ.
ಕುಡಕಿ ಗ್ರಾಮದ ಮಾಳಪ್ಪ ಸನ್ನೆಸಿ ,ನಿಂಬರಗಾ ಗ್ರಾಮದ ಮಹಿಬೂಬ ಚಾಂದಸಾಬ ಮುಡ್ಡಿ, ವಿಜಯಕುಮಾರ ಟಪ್ಪಾ ಅವರು ಮನೆಯಲ್ಲಿ ನಗದು ಮತ್ತು ಆಭರಣ ಹಾಗೂ ಭೂಸನೂರು ಗ್ರಾಮದ ಪ್ರಮೋದ ಕುಲಕರ್ಣಿ ಅವರ ಮನೆಯಲ್ಲಿ 2.2 ಲಕ್ಷ ರೂ ಮೌಲ್ಯದ ಜಾನುವಾರು ಕಳ್ಳತನ ಪ್ರಕರಣ ಕುರಿತು ನಿಂಬರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು.
ಪ್ರಕರಣಗಳ ಪತ್ತೆಗೆ ಎಸ್ಪಿ ಮತ್ತು ಹೆಚ್ಚುವರಿ ಎಸ್ಪಿ ಅವರ ಮಾರ್ಗದರ್ಶನದಲ್ಲಿ ಅಳಂದ ಡಿವೈಎಸ್ಪಿ ತಮ್ಮರಾಯ ಪಾಟೀಲ ಅಳಂದ ಸಿಪಿಐ ಜಗದೀಶ ಕೆಜಿ ಮತ್ತು ನಿಂಬರಗಾ ಪಿಎಸ್ ಐ ಗಳಾದ ಇಂದುಮತಿ ಮತ್ತು ಶಿವಾನಂದ ಮತ್ತು ಸಿಬ್ಬಂದಿ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು.ತಂಡದ ಸಾಧನೆಗೆ ಎಸ್ಪಿ ಅಡ್ಡೂರು ಶ್ರೀನಿವಾಸಲು ಅವರು ಅಭಿನಂದಿಸಿದ್ದಾರೆ.





























