Home ಜಿಲ್ಲೆ ಕಲಬುರಗಿ ಬದುಕಿಗೆ ಸಂಗೀತವೇ ಆರೋಗ್ಯ, ಸಂಗೀತವೇ ಆಯಸ್ಸು:ಡಾ.ರಾಜೇಶ್ವರಿ ಹಿರಾಪುರ್

ಬದುಕಿಗೆ ಸಂಗೀತವೇ ಆರೋಗ್ಯ, ಸಂಗೀತವೇ ಆಯಸ್ಸು:ಡಾ.ರಾಜೇಶ್ವರಿ ಹಿರಾಪುರ್

ಕಲಬುರಗಿ :ಜೂ.2:ಸಂಗೀತ ನಮ್ಮ ಜೀವನದ ಒಂದು ಪ್ರಮುಖ ಭಾಗವಾಗಿದೆ. ಸಂಗೀತವನ್ನು ಕೇಳುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಮತ್ತು ಒತ್ತಡ ಕಡಿಮೆಯಾಗುತ್ತದೆ.ಸಂಗೀತವು ಕೇವಲ ಮನಸ್ಸಿಗಷ್ಟೇ ಅಲ್ಲ, ದೇಹದ ಆರೋಗ್ಯಕ್ಕೂ ಸಹಾಯಕವಾಗಿದೆ ಎಂದು
ಕಲಬುರಗಿ ಜಿಮ್ಸ್ ಆಸ್ಪತ್ರೆಯ ನೇತ್ರ ವಿಭಾಗದ ಎಚ್‍ಓ ಡಿ ಡಾ. ರಾಜೇಶ್ವರಿ ಹಿರಾಪುರ್ ಅವರು ಹೇಳಿದರು, ಅವರು ಕಲ್ಯಾಣ ಕಲಬುರಗಿ ಕಲಾ ಟ್ರಸ್ಟ್ (ರಿ) ವತಿಯಿಂದ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ “ಸಂಗೀತ ಹಾಗೂ ನಾಟಕೋತ್ಸವ” ಕಾರ್ಯಕ್ರಮ ನಗರದ ಕಸ್ತೂರಿಬಾಯಿ ಪಿ. ಬುಳ್ಳಾ ಸ್ಮಾರಕ ಸಾಂಸ್ಕೃತಿಕ ಭವನ ವಿವೇಕಾನಂದ ನಗರದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಂಗೀತ ದೈಹಿಕ ಹಾಗೂ ಮಾನಸಿಕ ಅರೋಗ್ಯವನ್ನು ಉತ್ತಮಗೋಳಿಸುತ್ತದೆ ಎಂದರು. ಕಲಬುರಗಿ ರಂಗಾಯಣದ ಆಡಳಿತಾಧಿಕಾರಿಗಳಾದ ಸಿದ್ರಾಮ ಸಿಂಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜನಪದ ಹಾಡುಗಳು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಜೀವನ ಮೌಲ್ಯಗಳ ಪ್ರತಿಬಿಂಬವಾಗಿವೆ. ನಮ್ಮ ಪೂರ್ವಜರು ತಮ್ಮ ದೈನಂದಿನ ಜೀವನ, ಕೃಷಿ, ಹಬ್ಬಗಳು, ಸಂತೋಷ ಮತ್ತು ದುಃಖಗಳನ್ನು ಹಾಡುಗಳ ಮೂಲಕ ವ್ಯಕ್ತಪಡಿಸುತ್ತಿದ್ದರು.

ಇಂದಿನ ಆಧುನಿಕ ಯುಗದಲ್ಲಿ ಜನಪದ ಹಾಡುಗಳ ಮಹತ್ವವನ್ನು ನಾವು ಮರೆಯಬಾರದು. ಅವು ನಮ್ಮ ಸಂಸ್ಕೃತಿಯ ಅಮೂಲ್ಯ ಸಂಪತ್ತಾಗಿವೆ. ಆದ್ದರಿಂದ ನಾವು ಈ ಹಾಡುಗಳನ್ನು ಕಲಿಯಬೇಕು, ಉಳಿಸಬೇಕು ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸಬೇಕು.ಎಂದು ಹೇಳಿದರು. ವಿಶೇಷ ಆಹ್ವಾನಿತರಾಗಿ ಆನಂದಕುಮಾರ ಮಹಿಂದ್ರಕರ್ ಭಾಗವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರೇಣುಕಾ ಎಸ್. ಕೊತಲಿ ಹಾಗೂ ಕನಕ ಶಿಕ್ಷಣ ಸಂಸ್ಥೆ ಟ್ರಸ್ಟ್ ಕಲಬುರ್ಗಿಅಧ್ಯಕ್ಷ ರಾದ ವಿಜಯಲಕ್ಷ್ಮೀ ಉಪಸ್ಥಿತರಿದ್ದರು.
ಸಂಗೀತ, ನಾಟಕ ಹಾಗೂ ಸಾಂಸ್ಕೃತಿಕ ಕಲೆಯ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಕಲಬುರಗಿಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಕಲಾವಿದರು ಭಾಗವಹಿಸಿದ್ದರು.ಡೊಳ್ಳು ಕುಣಿತವನ್ನು ಮಾಳಿಂಗರಾಯ ಬರಗಾಲಿ ತಂಡ. ಹಿಂದೂಸ್ತಾನಿ ಸಂಗೀತ ವನ್ನು ಆಕಾಶವಾಣಿ ಕಲಾವಿದರಾದ ಗುರುಶಾಂತಯ್ಯ ಸ್ಥಾವರಮಠ.
ಜನಪದ ಗಾಯನವನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾಬುರಾವ ಕೋಬಾಳ್ , ಸುಗಮ ಸಂಗೀತವನ್ನು ಆಕಾಶವಾಣಿ ಕಲಾವಿದ ಶಿವಕುಮಾರ ಹಿರೇಮಠ ಅವರು . ಕೊಳಲು ವಾದನವನ್ನು ಪುಟ್ಟರಾಜ ರಾಜಾಪೂರ ಹಾಗೂ ಹಾಸ್ಯ ಭಾಷಣವನ್ನು ಗುಂಡಣ್ಣ ಡಿಗ್ಗಿ ನಡೆಸಿಕೊಟ್ಟರು.
ಇದೇ ವೇಳೆ ರಂಗಾಯಣ ಕಲಬುರಗಿ ಕಲಾವಿದರಿಂದ “ನಾಟಕ : ಕಾಲಚಕ್ರ ” ಪ್ರದರ್ಶನ ಯಶಸ್ವಿಯಾಗಿ ಜರುಗಿತು. ಮೊದಲಿಗೆ ಟ್ರಸ್ಟ್ ಅಧ್ಯಕ್ಷ ಶ್ರೀಶೈಲ್ ಪೂಜಾರಿ ಪ್ರಾಸ್ತವಿಕವಾಗಿ ಮಾತನಾಡಿದರು ವಿಶ್ವನಾಥ್ ತೋಟನಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.