Home ಜಿಲ್ಲೆ ಕಲಬುರಗಿ ಸಂಗೀತ ಕಲಾವಿದರು ಸಮೃದ್ಧ ಸಮಾಜದ ಆಸ್ತಿ :ಜ್ಯೋತಿ ಪಾಟೀಲ

ಸಂಗೀತ ಕಲಾವಿದರು ಸಮೃದ್ಧ ಸಮಾಜದ ಆಸ್ತಿ :ಜ್ಯೋತಿ ಪಾಟೀಲ

ಕಲಬುರಗಿ,ಸೆ.೨೭-ಗ್ರಾಮೀಣ ಭಾಗದ ಸಂಗೀತ ನಮ್ಮ ಹಳ್ಳಿಯ ಧ್ವನಿ ಮಾತ್ರವಲ್ಲ, ಅದು ನಮ್ಮ ಮಣ್ಣಿನ ಆತ್ಮ. ಆ ಆತ್ಮವನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರದು ಎಂದು ಶ್ರೀ ರಾಮ ಕನ್ನಡ ಕಾನ್ವೆಂಟ್ ಶಾಲೆಯ ಮುಖ್ಯ ಗುರುಗಳಾದ ಜ್ಯೋತಿ ಪಾಟೀಲ ಹೇಳಿದರು.
ಕಲಬುರಗಿ ತಾಲ್ಲೂಕಿನ ಉಪಳಾ೦ವ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಪಕ್ಕದ ಆವರಣದಲ್ಲಿ ಶ್ರೀ ದೇವಿ ಸರಸ್ವತಿ ಕಲಾ ಬಳಗ ಸಂಘದ ವತಿಯಿಂದ ಹಮ್ಮಿಕೊಂಡಿರುವ ಮಧುರ ಗಾಯನ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಗ್ರಾಮೀಣ ಸಂಗೀತ ನಮ್ಮ ಮಣ್ಣಿನ ಧ್ವನಿ ಇದು ಕೇವಲ ಹಾಡಲ್ಲ, ನಮ್ಮ ಹಳ್ಳಿಯ ಜನರ ಜೀವನ, ಭಾವನೆ, ಸಂಸ್ಕೃತಿ ಮತ್ತು ಮಣ್ಣಿನ ಪರಿಮಳವನ್ನು ಸಾರುವ ಜೀವಂತ ಪರಂಪರೆ, ಸಂಗೀತ ಕಲಾವಿದರು ಸಮೃದ್ಧ ಸಮಾಜದ ಆಸ್ತಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಶಿಕ್ಷಕರಾದ ಕುಪೆಂದ್ರ ಹುಲಸುರೆ, ನ್ಯಾಯವಾದಿ ಹಣಮಂತರಾಯ ಅಟ್ಟೂರ, ಶ್ರೀ ರಾಮ ಕನ್ನಡ ಕಾನ್ವೆಂಟ್ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಗೌಡೇಶ ಬಿರೆದಾರ, ಬಸವರಾಜ ಧರಿ ಆಗಮಿಸಿದರು, ಸಂಘದ ಅಧ್ಯಕ್ಷರಾದ ಶರಣು ಕಟ್ಟಿಮನಿ ಸಾಗನೂರ ಅಧ್ಯಕ್ಷತೆ ವಹಿಸಿದರು. ಸಂಗೀತ ಕಲಾವಿದರಾದ ಗುರುಶಾಂತಯ್ಯ ಸ್ಥಾವರಮಾಠ, ಆನಂದಕುಮಾರ ಪೂಜಾರಿ, ಸೋಮಯ್ಯ ಸಿಂದನೂರ, ಬಸಯ್ಯ ಗುತ್ತೇದಾರ, ತೋಟಯ್ಯ ಅಬ್ಬೆತೂ ಮಕೂರ, ಶ್ರೀಶೈಲ ಯಳಸಂಗಿ, ವೀರಯ್ಯ ಸ್ವಾಮಿ ಮಾಡಿಯಾಳ ಸಂಗೀತ ಸೇವೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ಅನೇಕ ಜನ ಭಾಗವಹಿಸಿದರು.