Home ಜಿಲ್ಲೆ ಬೀದರ್ ತಿಂಗಳ ವಚನ ಭಜನೆ ಮತ್ತು ಚಿಂತನೆ ಕಾರ್ಯಕ್ರಮ

ತಿಂಗಳ ವಚನ ಭಜನೆ ಮತ್ತು ಚಿಂತನೆ ಕಾರ್ಯಕ್ರಮ

ಬೀದರ: ಜೂ.೧೭:ನಗರದ ಗುಮ್ಮೆ ಕಾಲೋನಿಯ ಅರಿವಿನ ಮನೆಯಲ್ಲಿ ಅಕ್ಕನಾಗಮ್ಮ ಮಹಿಳಾ ಸಾಂಸ್ಕೃತಿಕ ಸಂಘದ ವತಿಯಿಂದ ತಿಂಗಳ ವಚನ ಭಜನೆ ಮತ್ತು ಚಿಂತನೆ ಕಾರ್ಯಕ್ರಮ ಸೋಮವಾರ ಜರುಗಿತು.
ಪ್ರವಚÀನಕಾರರಾದ ಭಾರತಿ ಪಾಟೀಲ ರವರು ಕಾರ್ಯಕ್ರಮ ಉದ್ಘಾಟಿಸಿ ಮತ್ತು ಅನುಭಾವ ಮಂಡಿಸುತ್ತಾ ೧೨ನೇ ಶತಮಾನದ ಆಧ್ಯಾತ್ಮಿಕತೆಯ ಮೇರು ವ್ಯಕ್ತಿತ್ವದ ಶರಣೆ ಮುಕ್ತಾಯಕ್ಕ ಅಜಗಣ್ಣನರವರಾಗಿದ್ದು, ಮುಕ್ತಾಯಕ್ಕರ ಅಣ್ಣ ಅಜಗಣ್ಣ ಲಿಂಗೈಕ್ಯವಾದಾಗ, ಅಲ್ಲಮ ಪ್ರಭುದೇವರು ಮುಕ್ತಾಯಕ್ಕನೊಡನೆ ಸಂವಾದ ನಡೆದಾಗ ಭೌತಿಕ ಶರೀರ ತಾತ್ಕಾಲಿಕವಾದುದು, ಶರಣರ ದೃಷ್ಠಿಯಲ್ಲಿ ಅಂತರAಗದಲ್ಲಿ ಅರಳಿದ ಚೈತನ್ಯದ ಶಕ್ತಿ ಶಾಶ್ವತವಾದದ್ದು. ಅಜಗಣ್ಣ ನಮ್ಮನ್ನು ಅಗಲಿದರೂ ಆ ಮಹಾಶರಣನ ಆಧ್ಯಾತ್ಮಿಕ ಶಕ್ತಿಯು ಜಗತ್ತಿಗೆ ಮಾದರಿಯಾಗಿದೆ. ಅದಕ್ಕೆ ಅಲ್ಲಮರು ಹೇಳುವಂತೆ, ಹೆಣ್ಣು, ಹೊನ್ನು, ಮಣ್ಣು ಮಾಯೆಯ ರೂಪಗಳಾಗಿವೆ. ಆದರೆ ಸುಜ್ಞಾನವೆಂಬುವುದು ಶಾಶ್ವತವಾದ, ಶ್ರೀಮಂತವಾದ ಒಡವೆಯಾಗಿವೆ ಎಂದು ವಿಷಯ ಪ್ರತಿಪಾದಿಸಿದರು.
ಸಾಹಿತಿಗಳಾದ ರೂಪಾ ಪಾಟೀಲ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ, ಜಗತ್ತಿನಲ್ಲಿ ಆರೋಗ್ಯವಂತ ಸಮಾಜವಾಗಬೇಕಾದರೆ ಯೋಗ ಮಹತ್ವವಾದುದು. ಪತಂಜಲಿ ಮಹರ್ಷಿಯವರು ಪ್ರಪ್ರಥಮವಾಗಿ ಯೋಗ ಮತ್ತು ಪ್ರಾಣಾಯಾಮದ ಬಗ್ಗೆ ಸಮಾಜಕ್ಕೆ ಪರಿಚಯ ಮಾಡಿಕೊಟ್ಟ, ಯೋಗ ಮಹರ್ಷಿಗಳಾಗಿರುತ್ತಾರೆ. ಸಮಾಜದಲ್ಲಿ ಜನರು ದೈಹಿಕ, ಮಾನಸಿಕವಾಗಿ ಒತ್ತಡದಿಂದ ಬಳಲುತ್ತಿದ್ದಾರೆ. ಇದಕ್ಕೆ ಯೋಗ, ಪ್ರಾಣಾಯಾಮ ಮತ್ತು ಧ್ಯಾನ ಮಾನವನನ್ನು ಆರೋಗ್ಯವಂತನಾಗಿ ಮಾಡುತ್ತದೆ. ಪ್ರತಿ ದಿವಸ ಒಂದು ಗಂಟೆಯಾದರೂ ಯೋಗ ಮಾಡಿ ದೈಹಿಕ ಮತ್ತು ಮಾನಸಿಕ ರೋಗದಿಂದ ಮುಕ್ತರಾಗಬೇಕೆಂದು ಸಲಹೆ ನೀಡಿದರು.
ಅಕ್ಕನಾಗಮ್ಮಾ ಮಹಿಳಾ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಲಕ್ಷ್ಮೀಬಾಯಿ ಜಿ. ಬಿರಾದಾರ ರವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಬಸವಾದಿ ಶರಣರ ವಚನಗಳ ಮೌಲ್ಯಗಳು ಸಮಾಜಕ್ಕೆ ದಿವ್ಯ ಔಷದ್ಯಗಳಾಗಿವೆ ಎಂದು ತಿಳಿಸಿದ್ದರು.
ಮಂಗಳಾ ಸ್ವಾಮಿ ವಚನ ಪ್ರಾರ್ಥನೆ ನೆರವೆÀರಿಸಿದರು. ಕುಮಾರಿ ಸಂಪನ್ನ ಬಿರಾದಾರ ಸ್ವಾಗತ ಕೋರಿದರು. ಜ್ಯೋತಿ ನಿಣ್ಣೆ ನಿರೂಪಿಸಿದರು. ವಿಜಯಲಕ್ಷಿö್ಮÃ ಮೂಲಗೆ ವಂದಿಸಿದರು.
ಪ್ರಮುಖರಾದ ನಾಗೇಶ್ವರಿ ಕೌಡಗಾವೆ, ಮಲ್ಲಮ್ಮ, ಪಾರ್ವತಿ ಶಿಕ್ಷಕಿ, ರಾಣಿ ಮಂಗಲಗಿ, ಜ್ಯೋತಿ ಮಂಗಲಗಿ, ಇಂದುಮತಿ ಕಟಗಿ, ಕಲ್ಪನಾ ಅಬ್ಬೆಂದಿ, ಜಗದೇವಿ, ರೇಖಾ ಕೌಡಗಾವೆ, ಅರ್ಚನಾ, ಪಾರ್ವತಿ, ಪುಪ್ಪಾ ಪಾಟೀಲ್, ಶಶಿಕಲಾ, ಹೇಮಲತಾ ಜ್ಯೋತೆಪ್ಪನೋರ್ ಮುಂತಾದವರು ಉಪಸ್ಥಿತರಿದ್ದರು.