Home ಜಿಲ್ಲೆ ಕಲಬುರಗಿ ಮೊಹರೀರ್‍ಗೆ ಗೌರವ ಡಾಕ್ಟರೇಟ್ ಪ್ರದಾನ

ಮೊಹರೀರ್‍ಗೆ ಗೌರವ ಡಾಕ್ಟರೇಟ್ ಪ್ರದಾನ

ಕಲಬುರಗಿ: ಜು.1:ಬೆಂಗಳೂರಿನ ಹೊಸೂರಿನಲ್ಲಿರುವ ಟಿಜಿಐ ಗ್ರ್ಯಾಂಡ್ ಫಾರ್ಚುನಾ ಸಭಾಂಗಣದಲ್ಲಿ ಶನಿವಾರ ನಡೆದ ಏಷಿಯಾ ಇಂಟರ್‍ನ್ಯಾಷನಲ್ ಕಲ್ಚರ್ ಅಕಾಡೆಮಿ ಘಟಿಕೋತ್ಸವದಲ್ಲಿ ಕಲಬುರಗಿಯ ರವೀಂದ್ರನಾಥ ವಿ. ಮೊಹರೀರ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಚಿತ್ರಕಲಾ ರಂಗದಲ್ಲಿ ರವೀಂದ್ರನಾಥ ವಿ. ಮೊಹರೀರ್ ಅವರು ಮಾಡಿರುವ ಸಾಧನೆಯನ್ನು ಪರಿಗಣಿಸಿ ಡಾಕ್ಟರೇಟ್ ನೀಡಲಾಗಿದೆ ಎಂದು ಅಕಾಡೆಮಿಯ ಪ್ರಮುಖರು ತಿಳಿಸಿದರು. ಪದ್ಮಶ್ರೀ ಪುರಸ್ಕøತರಾದ ಸುಶೀಲಮ್ಮ ಅವರು ಪದವಿ ಪ್ರದಾನ ಮಾಡಿದರು. ವಿಶ್ವವಿದ್ಯಾಲಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ನಿತ್ಯೋತ್ಸವ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕಿ ಕು. ನಿತ್ಯಾ ಅವರು ಇದೇ ಸಂದರ್ಭದಲ್ಲಿ ರವೀಂದ್ರನಾಥ ಮೊಹರೀರ್ ಅವರಿಗೆ `ನಿತ್ಯೋತ್ಸವ ಕನ್ನಡ ಸಿರಿ’ ಪ್ರಶಸ್ತಿ ನೀಡಿ ಗೌರವಿಸಿದರು. ಶ್ರೀಮತಿ ವಂದನಾ ರ. ಮೊಹರೀರ, ಸಂಸ್ಕೃತಿ ಚಿಂತಕ, ಲೇಖಕ ಡಾ. ಗುರುರಾಜ ಪೆÇೀಶೆಟ್ಟಿಹಳ್ಳಿ ಉಪಸ್ಥಿತರಿದ್ದರು.