
ಕಲಬುರಗಿ,ಜು.1-ಸಿಸಿಬಿ ಪೆÇಲೀಸರ ಕಾರ್ಯಾಚರಣೆ ನಡೆಸಿ ನಗರದ ಸಬ್ ಅರ್ಬನ್ ಪೆÇಲೀಸ್ ಠಾಣಾ ವ್ಯಾಪ್ತಿಯ ಕಾಕಡೆ ಚೌಕ್ ಹತ್ತಿರ ನಿಷೇದಿತ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ 2,60,000/- ರೂಪಾಯಿ ಮೌಲ್ಯದ 2 ಕೆಜಿ, 600 ಗ್ರಾಂ.ನಿಷೇಧಿತ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.
ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಅವರ ನಿರ್ದೇಶನದಂತೆ ಡಿಸಿಪಿಗಳಾದ ಶಾಲೂ, ಪ್ರವೀಣ್ ಹೆಚ್.ನಾಯಕ್, ಸಿಸಿಬಿ ಘಟಕದ ಎಸಿಪಿ ಜೇಮ್ಸ್ ಮಿನೇಜಸ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಪಿಐ ಅರುಣಕುಮಾರ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮೃತ್ಯುಂಜಯ, ರಾಜಕುಮಾರ, ಪ್ರದೀಪ್, ಅಂಬಾಜಿ, ಅಶೋಕ ಕಟಕೆ, ನಾಗೇಂದ್ರ, ಶಿವಲಿಂಗ, ನಾಗರಾಜ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿ ನಗರದ ಸಬ್-ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾಕಡೆ ಚೌಕ್ ಹತ್ತಿರವಿರುವ ಕಾಕಡೆ ನಗರದ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ನಿಷೇಧಿತ ಗಾಂಜಾ ಮಾರಾಟ ಮಾಡುತ್ತಿದ್ದ ಮಿಜಗುರಿಯ ಲದಾಫ್ ಬಸೀರ್ ಹಸನ್ ತಂದೆ ಹಸನ್ ಲದಾಫ್ (42), ಕಾಕಡೆ ಚೌಕ್‍ನ ಖುತುಬುದ್ದಿನ್ ತಂದೆ ಮೈಬೂಬ್ ಶೇಖ್ (50) ಮತ್ತು ಅಬ್ದುಲ್ ಗನಿ ತಂದೆ ಹಾಶೀಮ್ ಶೇಖ್ (41) ಎಂಬುವವರನ್ನು ಬಂಧಿಸಿ 2.20 ಲಕ್ಷ ರೂ.ಮೌಲ್ಯದ 2.ಕೆ.ಜಿ.,600 ಗ್ರಾಂ.ಗಾಂಜಾ, 2,100 ರೂ.ನಗದು ಮತ್ತು 2 ಕೀಪ್ಯಾಡ್ ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ನಿಷೇಧಿತ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಶ್ಲಾಘಿಸಿದ್ದಾರೆ.























