ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದ ಸರಕಾರಿ ಮಾದರಿ ಶಾಲೆಯಲ್ಲಿ ಎಲ್.ಕೆ.ಜಿ ಪ್ರಾರಂಭೋತ್ಸವವನ್ನ ಡಿಡಿಪಿಐ ಉಮೇಶ ಬೊಮ್ಮಕ್ಕನವರ ಹಾಗೂ ಪೊಲೀಸ್ ಇನ್ಸಪೆಕ್ಟರ್ ಮಹಾಂತೇಶ ಲಂಬಿ ಅವರು ಉದ್ಘಾಟಿಸಿದರು. ಪ್ರಧಾನ ಗುರುಗಳಾದ ಯಲ್ಲಪ್ಪ ಶೆರೇವಾಡ, ಎಸ್‌ಡಿಎಂಸಿ ಅಧ್ಯಕ್ಷ ನಾಗೇಶ ಮೊರಬ, ಶಿಕ್ಷಕರಾದ ಎಸ್.ಎಸ್.ಕುಂಬಾರ, ಎ.ಬಿ.ಕನಕಣ್ಣನವರ, ಡಿ.ಎಫ್.ಮುರಗಣ್ಣನವರ, ವಿ.ವಿ.ಹಿರೇಮಠ, ಸವಿತಾ ನರಿ, ವಿ.ಪಿ.ಮನಸೂರ, ಎಸ್.ಕೆ.ಜವಳಗದ್ದಿ, ಪಿ.ಬಿ.ಕುಲಕರ್ಣಿ, ಎಲ್‌ಕೆಜಿ ಶಿಕ್ಷಕಿ ಪ್ರೀತಿ ಮುಗದ ಹಾಗೂ ಎಸ್‌ಡಿಎಂಸಿ ಸದಸ್ಯರಾದ ಶಾಬುದ್ಧೀನ ಮುಲ್ಲಾ, ಜ್ಯೋತಿ ಶಿಂಪಿ, ಶಮ್ಮಶುದ್ದೀನ ನಾಯ್ಕರ, ಈರಪ್ಪ ಬಡಪ್ಪನವರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.