Home ಸುದ್ದಿ ರಾಷ್ಟ್ರೀಯ ಎಸ್‍ಐಆರ್ ನ್ಯಾಯ ಸಮ್ಮತವಾಗಿ ನಡೆಸುತ್ತಿಲ್ಲ ಸ್ಟಮಕ್-ಸಿಜೆಐಗೆ ವಿಪಕ್ಷಗಳ ಮುಖಂಡರ ಪತ್ರ

ಎಸ್‍ಐಆರ್ ನ್ಯಾಯ ಸಮ್ಮತವಾಗಿ ನಡೆಸುತ್ತಿಲ್ಲ ಸ್ಟಮಕ್-ಸಿಜೆಐಗೆ ವಿಪಕ್ಷಗಳ ಮುಖಂಡರ ಪತ್ರ

ನವದೆಹಲಿ,ಜು,1- ದೇಶಾದ್ಯಾಂತ ಆರಂಭವಾಗಿರುವ ಮತದಾರರ ತೀವ್ರ ಪರಿಷ್ಕರಣೆಯನ್ನು ನ್ಯಾಯಸಮ್ಮತವಾಗಿ ನಡೆಸುತ್ತಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ 23 ರಾಜಕೀಯ ಪಕ್ಷಗಳ ನಾಯಕರು, ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರಿಗೆ ಪತ್ರ ಬರೆದಿದ್ದಾರೆ.

ಮುಖ್ಯನ್ಯಾಯಮೂರ್ತಿ ಅವರಿಗೆ ಬರೆದಿರುವ ಪತ್ರದಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಮಾಡುತ್ತಿರುವ ಕ್ರಮದ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಬಿಜೆಪಿಗೆ ಸಹಾಯ ಮಾಡಲು “ಪಕ್ಷಪಾತ”ದಿಂದ ಚುನಾವಣಾ ಆಯೋಗ ನಡೆದುಕೊಳ್ಳುತ್ತಿದೆ ಇದನ್ನು ಸರಿ ಪಡಿಸಬೇಕು ಇಲ್ಲದಿದ್ದರೆ ಹೋರಾಟ ಮುಂದುವರಿಯಲಿವೆ ಎಂದು ಎಚ್ಚರಿಸಿದ್ದಾರೆ

ಇಂಡಿಯಾ ಮೈತ್ರಿಕೂಟದ ಭಾಗವಾಗಿಲ್ಲದಿದ್ದರೂ ಡಿಎಂಕೆ ಮತ್ತು ಎಎಪಿ ಕೂಡ ಮುಖ್ಯನ್ಯಾಯಮೂರ್ತಿ ಸೂರ್ಯಕಾಂತ್ ಅವರಿಗೆ ಬರೆದ ಪತ್ರಕ್ಕೆ ಸಹಿ ಹಾಕಿವೆ. ಜೂನ್ 8 ರಂದು ಜಂಟಿ ಪತ್ರ ಬರೆಯುವ ನಿರ್ಧಾರ ತೆಗೆದುಕೊಳ್ಳಲಾದ ವಿರೋಧ ಪಕ್ಷಗಳ ಮೈತ್ರಿಕೂಟದ ಸಭೆಯಲ್ಲಿ ಎರಡೂ ಪಕ್ಷಗಳು ಭಾಗವಹಿಸಲಿಲ್ಲ. ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುನ್ನ ಬಿಜೆಪಿ ವಿರೋಧಿ ಬಣದಲ್ಲಿ ಒಗ್ಗಟ್ಟು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಎಐಸಿಸಿ ವಕ್ತಾರ ಜೈರಾಮ್ ರಮೇಶ್ “23 ರಾಜಕೀಯ ಪಕ್ಷಗಳು ಮತ್ತು ಒಬ್ಬ ಸ್ವತಂತ್ರ ವ್ಯಕ್ತಿ ಸಹಿ ಮಾಡಿದ ಜಂಟಿ ಪತ್ರವನ್ನು ಮುಖ್ಯನ್ಯಾಯಮೂರ್ತಿ ಸೂರ್ಯಕಾಂತ್ ಅವರಿಗೆ ಕಳುಹಿಸಲಾಗಿದೆ, ಈ ಪತ್ರಕ್ಕೆ ಪ್ರಮುಖ ವಿರೋಧ ಪಕ್ಷದ ಸದಸ್ಯರು ಸಹಿ ಹಾಕಿದ್ದಾರೆ ಎಂದು ತಿಳಿಸಿದ್ದಾರೆ

ಅದರಲ್ಲಿ ಪ್ರಮುಖವಾಗಿ ಕಾಂಗ್ರೆಸ್ ಅಧ್ಯಕ್ಷ ಹಾಗು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಲ ರಾಹುಲ್ ಗಾಂಧಿ, ಟಿಎಂಸಿಯ ಮಮತಾ ಬ್ಯಾನರ್ಜಿ, ಆರ್ಜೆಡಿಯ ತೇಜಸ್ವಿ ಯಾದವ್, ಎಸ್‍ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಜೆಎಂಎಂನ ಹೇಮಂತ್ ಸೊರೆನ್, ಎನ್‍ಸಿಯ ಒಮರ್ ಅಬ್ದುಲ್ಲಾ, ಎಡಪಂಥೀಯ ರಾಜಕಾರಣಿಗಳು ಮತ್ತು ಸ್ವತಂತ್ರ ಸಂಸದ ಕಪಿಲ್ ಸಿಬಲ್ ಸೇರಿದಂತೆ ಇತರರು ಸಹಿಹಾಕಿದ್ದಾರೆ ಎಂದು ಹೇಳಿದ್ದಾರೆ

ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳಿಗೆ ಬರೆದ ಪತ್ರದಲ್ಲಿ ಚುನಾವಣಾ ಆಯೋಗದ ಪಾತ್ರ ಪ್ರಶ್ನಿಸಿರುವ ಸಾಧ್ಯತೆಯಿದೆ. ನ್ಯಾಯಾಂಗದ ಮೇಲೆ ಇದು ಆಕ್ಷೇಪಣೆ ವ್ಯಕ್ತಪಡಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರೂ, ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯ ವಿವಿಧ ಅಂಶಗಳು ಪ್ರಶ್ನಿಸಲಾಗಿದೆ ಎಂದು ಹೇಳಲಾಗಿದೆ

ವಿರೋಧ ಪಕ್ಷದ ಸದಸ್ಯರೊಬ್ಬರು ಹೇಳುವಂತೆ, ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿನ ಎಸ್‍ಐಆರ್ ಡೇಟಾದ ಗುಣಮಟ್ಟ ಉಲ್ಲೇಖಿಸಲಾಗಿದೆ. ಮತದಾನದ ಪಟ್ಟಿಯಲ್ಲಿರುವ ಮೃತ ವ್ಯಕ್ತಿಗಳಂತಹ ತಪ್ಪು ದತ್ತಾಂಶಗಳ ನಿದರ್ಶನಗಳನ್ನು ವಿರೋಧ ಪಕ್ಷಗಳು ಈ ಹಿಂದೆ ಎತ್ತಿ ತೋರಿಸಿದ್ದು, ಈ ಪ್ರಕ್ರಿಯೆಯ ನ್ಯಾಯಸಮ್ಮತವಾಗಿ ನಡೆಯುತ್ತಿಲ್ಲ ಎಂದು ಅತೃಪ್ತಿ ಹೊರಹಾಕಿದ್ದಾರೆ.

ವಿವಿಧ ರಾಜ್ಯಗಳಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ವೈವಿಧ್ಯಮಯ ಸಮಯ, ಬಿಹಾರ ಮತ್ತು ತಮಿಳುನಾಡಿನ ಉದಾಹರಣೆಗಳೊಂದಿಗೆ ವಿರೋಧ ಪಕ್ಷಗಳು ಉಲ್ಲೇಖಿಸಿವೆ ಎಂದು ಮೂಲಗಳು ತಿಳಿಸಿವೆ