Home ಜಿಲ್ಲೆ ಬೆಂಗಳೂರು ಕಾಂಗ್ರೆಸ್ ಮುಖಂಡರ ಮೇಲೆ ಶಾಸಕಿ ರೂಪಶಶಿಧರ್ ಗರಂ

ಕಾಂಗ್ರೆಸ್ ಮುಖಂಡರ ಮೇಲೆ ಶಾಸಕಿ ರೂಪಶಶಿಧರ್ ಗರಂ

ಕೆಜಿಎಫ್:ಜು:೨೯: ನಾಗರೀಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಮುಂದೆ ಬಂದರೆ ಏಕೆ ನೀವು ಅಡ್ಡಿಪಡಿಸುತ್ತಿರಾ? ಅವರ ಸಮಸ್ಯೆ ಗಳನ್ನು ಅರಿಯಲು ನಾನು ಇಲ್ಲಿಗೆ ಬಂದಿರುವುದು.ಅವರು ಸಮಸ್ಯೆಗಳನ್ನು ಹೇಳಿಕೊಳ್ಳುವ ಸಂದರ್ಭದಲ್ಲಿ ನೀವು ಮಧ್ಯದಲ್ಲಿ ಮಾತನಾಡಿದರೆ ಹೇಗೆ ಎಂದು ಕಾಂಗ್ರೆಸ್ ಮುಖಂಡರ ಮೇಲೆ ಶಾಸಕಿ ರೂಪಶಶಿಧರ್ ಗರಂ ಆದ ಘಟನೆ ನಡೆದಿದೆ.


ನಗರಸಭೆ ವ್ಯಾಪ್ತಿಯ ಡ್ರೈವರ್‍ಸ್ ಬಡವಾಣೆಯಲ್ಲಿ ಹೈಮಾಸ್ಕ್ ಬೀದಿ ದೀಪ ಉದ್ಘಾಟಿಸಲು ಶಾಸಕಿ ರೂಪ ಶಶಿಧರ್ ಆಗಮಿಸಿದ್ದ ವೇಳೆ ಸ್ಥಳೀಯ ನಿವಾಸಿಗಳು ನಮ್ಮ ಬಡವಾಣೆಯಲ್ಲಿ ಕಳ್ಳಿ ಗಿಡಗಳು ಅಧಿಕವಾಗಿರುವುದರಿಂದ ಹಾವುಗಳ ಕಾಟ ಮೀತಿ ಮೀರಿದೆ.ಮನೆಯಲ್ಲಿ ವಾಸಿಸಲು ಕಷ್ಟ ಭಯ ಬೀಳುವಂತೆ ಆಗಿದೆ.ಮನೆಯೊಳಗೆ ಹಾವುಗಳು ಬರುತ್ತಿವೆ ಆದ್ದರಿಂದ ಬಡವಾಣೆಯಲ್ಲಿರುವ ಪೊದೆಯಂತೆ ಬೆಳೆದಿರುವ ಗಿಡ ತೆರವುಗೊಳಿಸುವಂತೆ ಶಾಸಕಿ ಬಳಿ ಮನವಿ ಮಾಡುತ್ತಿದ್ದರು.


ಆದರೆ ಈ ವೇಳೆ ಕೆಲವು ಕಾಂಗ್ರೆಸ್ ಮುಖಂಡರು ಅವುಗಳನ್ನು ನಂತರ ಮಾತನಾಡೋಣ.ಇಲ್ಲಿ ಆದು ಬೇಡ ಎಂದು ಹೇಳುತ್ತಿದ್ದಂತೆ ಕಾಂಗ್ರೆಸ್ ಮುಖಂಡರ ಮೇಲೆ ಗರಂ ಆದ ಶಾಸಕಿ ರೂಪಶಶಿಧರ್ ಏಕೆ ನೀವು ಜನರನ್ನು ತಡೆಯುತ್ತಿರಿ? ನಾನು ಇಲ್ಲಿಗೆ ಬಂದಿರುವುದು ಜನರನ್ನು ನೋಡಲು ಅವರ ಕಷ್ಟಗಳನ್ನು ಅರಿಯಲು ತಾವು ನಿತ್ಯ ಅನುಭವಿಸುತ್ತಿರುವ ಸಂಕಷ್ಟಗಳನ್ನು ನನ್ನ ಬಳಿ ಹೇಳಿಕೊಳ್ಳುತ್ತಿದ್ದಾರೆ ಎಂದರು.


ಜನರ ಸಮಸ್ಯೆಗಳನ್ನು ನಾನು ತಿಳಿದುಕೊಂಡು ನಗರಸಭೆ ಅಧಿಕಾರಿ ಗಳೊಂದಿಗೆ ಚರ್ಚೆ ನಡೆಸಿ ಜೆಸಿಬಿ ಮೂಲಕ ಗಿಡಗಳನ್ನು ತೆರವುಗೊಳಿಸುವ ಕಾರ್ಯವನ್ನು ಮಾಡಲಾಗುವುದು.ಅವರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ನನ್ನ ಬಳಿ ಐಡಿಯಾ ಇದೆ ಎಂದು ಹೇಳಿದರು.


ಬಿಜಿಎಂಎಲ್ ಭಾಗದ ಹಲವು ವಾರ್ಡ್‌ಗಳಲ್ಲಿ ಹೈಮಾಸ್ಕ್ ಬೀದಿ ದೀಪಗಳನ್ನು ಅಳವಡಿಸ ಲಾಗಿದ್ದು, ಅಗತ್ಯವಿ ಇರುವ ಕಡೆಗಳಲ್ಲಿ ಆದ್ಯತೆ ಮೇರೆಗೆ ಇನ್ನು ಹೈಮಾಸ್ ಬೀದಿ ದೀಪಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು.


ಈ ವೇಳೆ ಮಾಜಿ ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ಇಂಧಿರಾಗಾಂಧಿ ದಯಾ ಶಂಕರ್, ಮಾಜಿ ನಗರಸಭೆ ಸದಸ್ಯರಾದ ಮಗೇಂದ್ರನ್, ಸಾಮರಾಜ್, ಸುಭಾಶ್ ಹಾಗೂ ಶಶಿಕುಮಾರ್, ಜಗಧೀಶ್, ವಿಷ್ಣುಕಾಂತ್, ಗೋಪಾಲ್ ಹಾಗೂ ಇತರರು ಹಾಜರಿದ್ದರು.