
ಕಾಳಗಿ : ಪಾದಚಾರಿಗಳಿಗೆ ಸುಲಭವಾಗಿ ಓಡಾಡಲು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತವಾದ ಜಾಗ ಕಲ್ಪಿಸಲು ಸರಿಯಾದ ಫುಟ್ಪಾತ್ ವ್ಯವಸ್ಥೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆಯಲ್ಲಿ ಸಾಮಾಜಿಕ ಹೋರಾಟಗಾರ ಮೋಹನ ಚಿನ್ನ ಮಾತನಾಡಿ ವಯೋವೃದ್ಧರಿಗೆ, ವಿದ್ಯಾರ್ಥಿಗಳಿಗೆ, ರೋಗಿಗಳಿಗೆ ಓಡಾಡಲು ಪುಟ್ ಪಾತ್ ವ್ಯವಸ್ಥೆವಿಲ್ಲದೆ ಸಾರ್ವಜನಿಕರು ತೊಂದರೆಗಳು ಅನುಭವಿಸುತ್ತಿದ್ದಾರೆ. ಸಾರ್ವಜನಿಕರಿಗೆ ನಡೆಯಲು ತೊಂದರೆಯಾಗುತ್ತಿದೆ. ಬೀದಿ ವ್ಯಾಪಾರಿಗಳು ಹಾಗೂ ಮುಖ್ಯ ರಸ್ತೆ ಬದಿಯ ಅಂಗಡಿ ಮಾಲೀಕರ ನಡುವೆ ವ್ಯಾಪಾರಕ್ಕೆ ತೊಂದರೆಯಾಗುವ ಸನ್ನಿವೇಶಗಳು ಎದುರಾಗುತ್ತವೆ. ಪರಿಹಾರೋಪಾಯಗಳು ಬೀದಿ ಬದಿ ವ್ಯಾಪಾರಿಗಳಿಗೆಂದೇ ಪ್ರತ್ಯೇಕವಾದ ಸ್ಥಳವನ್ನು ನಿಗದಿಪಡಿಸಬೇಕು. ಪಾದಚಾರಿಗಳಿಗೆ ಯಾವುದೇ ಅಡಚಣೆ ಇಲ್ಲದೆ ಸುಗಮವಾಗಿ ಓಡಾಡಲು ಅನುಕೂಲ ಕಲ್ಪಿಸಬೇಕು. ಜನರು ವಿಶ್ರಾಂತಿ ಪಡೆಯಲು ಹಾಗೂ ಮನರಂಜನೆಗಾಗಿ ಭೇಟಿ ನೀಡಲು ಸುಂದರವಾದ ಉದ್ಯಾವನ ನಿರ್ಮಾಣ ಮಾಡಬೇಕು. ಓದುಗರಿಗೆ ಶಾಂತವಾದ ಮತ್ತು ಸುಲಭವಾಗಿ ತಲುಪಬಹುದಾದ ಜಾಗವನ್ನು ಆರಿಸಿ. ಹೊಸ ಗ್ರಂಥಾಲಯವನ್ನು ಸ್ಥಾಪಿಸಲು ಸೂಕ್ತವಾದ ಸ್ಥಳ, ಪುಸ್ತಕಗಳ ಸಂಗ್ರಹ ಮತ್ತು ಮೂಲಭೂತ ಸೌಕರ್ಯಗಳು ಒದಗಿಸಬೇಕು. ಕಾಳಗಿಯಿಂದ ಕಲಬುರಗಿ ಹೋಗುವ ರಸ್ತೆ ಮಧ್ಯದಲ್ಲಿ ಸುಮಾರು ವರ್ಷಗಳಿಂದ ಸ್ವಾಗತ ಬೋರ್ಡ್ ತುಕ್ಕು ಹಿಡಿದು ಹೋಗಿದೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಸ್ವಾಗತ ಬೋರ್ಡ್ ಗಳನ್ನು ಅಳವಡಿಸಬೇಕು ಎಂದು ಹೇಳಿದರು.
ಮಾದಿಗ ದಂಡೋರ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಸುಂದರ ಡಿ ಸಾಗರ, ಭೀಮರಾಯ ಮಲಘಾಣ, ಇಂದ್ರಜೀತ ಕಟ್ಟಿಮನಿ, ತಿಮ್ಮಯ್ಯ ಒಡೆಯರಾಜ, ಕಾಶಿನಾಥ ರಾಜಾಪುರ, ಈರಪ್ಪ ಸೇರಿದಂತೆ ಅನೇಕರಿದ್ದರು.






























