
ಕಲಬುರಗಿ,ಅ.16: ಪ್ರಸಕ್ತ 2026-27ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಬೆಳೆಯಲಾದ ಕಬ್ಬು ಕಟಾವು ಪ್ರಕ್ರಿಯೆ ಬಂದಿದ್ದು, ರೈತರಿಂದ ಕಬ್ಬು ಖರೀದಿ ಮುನ್ನ ಪ್ರತಿ ಟನ್ಗೆ ನೀಡಲಾಗುವ ದರ, ಸಾಗಾಣಿಕೆ ವೆಚ್ಚ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಮುಂದಿನ ಒಂದು ವಾರದಲ್ಲಿ ಸೂಕ್ತವಾದ ನಿರ್ಧಾರಕ್ಕೆ ಬಂದು ಕಬ್ಬು ಕಟಾವು ಪ್ರಕ್ರಿಯೆ ಆಂಭಿಸುವಂತೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಡಿ.ಸಿ. ಇಕ್ರಂ ಶರೀಫ್ ಸೂಚನೆ ನೀಡಿದರು.
ಗುರುವಾರ ಇಲ್ಲಿನ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳ ಸಭೆಯಲ್ಲಿ ಕಬ್ಬು ಬೆಳೆಗಾರರು ಮತ್ತು ರೈತ ಸಂಘದ ಮುಖಂಡರುಗಳ ಅಹವಾಲು ಆಲಿಸಿ ಮಾತನಾಡಿದ ಅವರು, ಕಬ್ಬು ಕಟಾವಿಗೆ ಬಂದಿರುವುದರಿಂದ ವಿಳಂಬ ಮಾಡದೆ ಕಳೆದ ವರ್ಷದಂತೆ ಈ ವರ್ಷ ಸಹ ಜಿಲ್ಲೆಯ ಎಲ್ಲಾ ಐದು ಕಾರ್ಖಾನೆಗಳು ಪರಸ್ಪರ ಸಮಾಲೋಚನೆ ನಡೆಸಿ ರೈತರಿಗೆ ನ್ಯಾಯಯುತ ದರ ನೀಡುವ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಒಮ್ಮತ್ತದ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಭೀಕರ ಬರಗಾಲದಿಂದ ರೈತರು ತತ್ತರಿಸಿದ್ದು, ಸಕ್ಕರೆ ಕಾರ್ಖಾನೆಗಳು ಜಿಪುಣತನ ಬಿಟ್ಟು ಉದಾರ ಮನಸ್ಸಿನಿಂದ ಪ್ರತಿ ಟನ್ ಕಬ್ಬಿಗೆ ದರ ನಿಗದಿ ಮಾಡಬೇಕು. ಎಥನಾಯಿಲ್, ಸಕ್ಕರೆ ಬೆಲೆ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಬೆಲೆ ಏರಿಕೆಯಿಂದ ಕಾರ್ಖಾನೆಗಳಿಗೆ ಲಾಭವಿದ್ದು, ಲಾಭದ ಅಂಶ ರೈತರಿಗೂ ಹಂಚಿ ಎಂದು ಕಾರ್ಖಾನೆ ಪ್ರತಿನಿಧಿಗಳಿಗೆ ಡಿ.ಸಿ. ಸಲಹೆ ನೀಡಿದರು.
ಕಬ್ಬು ಕಟಾವಿನಲ್ಲಿ ತಾರತಮ್ಯ, ಪ್ರತಿ ಕಂಪನಿಯ ಪ್ರತ್ಯೇಕ ದರ, ತೂಕದಲ್ಲಿ ಮೋಸ, ತಡವಾಗಿ ಪಾವತಿ, ಹಳೇ ಪಾವತಿ ಬಾಕಿ ಕುರಿತು ಕಾರ್ಖಾನೆಗಳ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ರೈತರಿಗೆ ಕಾಲಮಿತಿಯಲ್ಲಿ ಹಣ ಪಾವತಿ ಮಾಡಬೇಕು. ಕಬ್ಬು ಕಟಾವು, ಕಬ್ಬಿನ ತೂಕ, ಹಣ ಪಾವತಿ ಹೀಗೆ ಪ್ರತಿ ಹಂತದಲ್ಲಿ ರೈತರಿಗೆ ಎಸ್.ಎಂ.ಎಸ್. ಮೂಲಕ ಮಾಹಿತಿ ನೀಡುವ ವ್ಯವಸ್ಥೆ ಎಲ್ಲಾ ಕಾರ್ಖಾನೆಗಳು ಜಾರಿಗೆ ತರಬೇಕು ಎಂದ ಅವರು, ಕಬ್ಬು ತೂಕದಲ್ಲಿ ಕಾರ್ಖಾನೆಯಿಂದ ಮೋಸವಾಗುತ್ತಿದೆ ಎಂಬ ರೈತ ಮುಖಂಡರ ಅಭಿಪ್ರಾಯದ ಹಿನ್ನೆಲೆಯಲ್ಲಿ ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ಆಗಾಗ ಸಕ್ಕರೆ ಕಾರ್ಖಾನೆಗಳಿಗೆ ಹಠಾತ್ ಭೇಟಿ ನೀಡಿ ತಪಾಸಣೆ ಮಾಡಬೇಕು ಎಂದರು.
ಶೆಲ್ಟರ್, ಕುಡಿಯುವ ನೀರು ಒದಗಿಸಿ: ಸಭೆಯಲ್ಲಿ ರೈತ ಮುಖಂಡ ಈರಣ್ಣ ಭಜಂತ್ರಿ ಮಾತನಾಡಿ ಕೆಲವೊಮ್ಮೆ ರೈತ ಕಬ್ಬು ಕಟಾವು ಮಾಡಿಕೊಂಡು ಕಾರ್ಖಾನೆಗೆ ತೆಗೆದುಕೊಂಡು ಹೋಗಿದ್ದಾಗ ಅಲ್ಲಿಯೆ ರಾತ್ರಿ ಕಳೆಯಬೇಕಾಗುತ್ತದೆ. ಉಗಾರ್-ಸುಗರ್ ಕಾರ್ಖಾನೆಯಲ್ಲಿ ರಾತ್ರಿ ಕಳೆಯಲು ಸೂಕ್ತ ಶೆಡ್, ಕುಡಿಯುವ ನೀರು, ಶೌಚಾಲಯದಂತಹ ಕನಿಷ್ಠ ಮೂಲಕಸೌಲಭ್ಯ ಇಲ್ಲ ಎಂದು ಡಿ.ಸಿ. ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಡಿ.ಸಿ. ಅವರು, ನಾವು ತಪಾಸಣೆಗೆ ಬಂದಾಗ ಎ.ಸಿ. ರೂಮ್ನಲ್ಲಿ ತಂಗಿಸಿ ಊಟೋಪಚಾರ ಮಾಡುತ್ತೀರಿ, ರೈತರಿಗೆ ಏಕೆ ಗೌರವ ಕೊಡಲ್ಲ. ಅನ್ನದಾತನಿಗೆ ಕನಿಷ್ಠವಾಗಿ ಕಾಣುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದ ಅವರು, ಎಲ್ಲಾ ಕಾರ್ಖಾನೆಗಳು ರೈತರಿಗೆ ಕನಿಷ್ಠ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಕಾರ್ಖಾನೆಗಳಿಗೆ ಖಡಕ್ ಸೂಚನೆ ನೀಡಿದರು.
ರೇಣುಕಾ ಶುಗರ್ಸ್ ಕಾರ್ಖಾನೆಗೆ ನೋಟಿಸ್: ಸಭೆಯಲ್ಲಿ ಭಾಗವಹಿಸಿದ ರೈತ ಮುಖಂಡ ರಮೇಶ ಪಾಟೀಲ ಮಾತನಾಡಿ, ರೇಣಿಕಾ ಶುರ್ಸ್ ಕಾರ್ಖಾನೆಯಿಂದ ಹೊರಸೂಸುವ ಬೂದಿಯಿಂದ ಕಾರ್ಖಾನೆ ಸುತ್ತ ಬೆಳೆಯುತ್ತಿರುವ ಬೆಳೆಗಳು ಹಾನಿಯಾಗಿವೆ. ಇದರಿಂದ ರೈತರು ಕಂಗೆಟ್ಟಿದ್ದು ಕಾರ್ಖಾನೆಯಿಂದಲೆ ಪರಿಹಾರ ಒದಗಿಸಬೇಕೆಂದು ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ತೀವ್ರ ಗರಂ ಆದ ಡಿ.ಸಿ. ಇಕ್ರಂ ಶರೀಫ್ ಅವರು, ಇμÉ್ಟೂಂದು ತಂತ್ರಜ್ಞಾನ ಇದ್ದರು ಸಂಸ್ಕರಿಸದ ಕಲುಷಿತ ಹೊಗೆ ಹೊರಗೇಕೆ? ಎಂದು ಕಾರ್ಖಾನೆ ಅಧಿಕಾರಿಗಳನ್ನು ಪ್ರಶ್ನಿಸಿದ ಅವರು ಪರಿಸರ ಮಾಲಿನ್ಯ ತಡೆಗಟ್ಟಲು ವಿಫಲವಾಗಿದ್ದಕ್ಕೆ ಕೂಡಲೆ ಕಾರ್ಖಾನೆಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ಪರಿಸರ ಅಧಿಕಾರಿ ವೆಂಕಟೇಶ ಅವರಿಗೆ ನಿರ್ದೇಶನ ನೀಡಿದ ಜಿಲ್ಲಾಧಿಕಾರಿಗಳು, ಇನ್ನೇನು ಕಬ್ಬು ನುರಿಸುವ ಕಾರ್ಯ ಆರಂಭವಾಗಲಿರುವ ಕಾರಣ ಎಲ್ಲಾ ಕಾರ್ಖಾನೆಗಳಿಗೆ ಭೇಟಿ ನೀಡಿ ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಕುರಿತು ಸಹ ಪರಿಶೀಲಿಸುವಂತೆ ಸೂಚಿಸಿದರು.
ರೈತರ ಬೇಡಿಕೆಗಳೇನು?: ಬರಗಾಲ ಇರುವ ಕಾರಣ ಈ ವರ್ಷ 5,500 ರೂ. ಎಫ್.ಆರ್.ಪಿ. ದರ ನಿಗದಿ ಮಾಡಬೇಕು, ಬಾಕಿ ಹಣ ಕೂಡಲೆ ಪಾವತಿಸಬೇಕು, ಕಬ್ಬು ಕಟಾವಿನಲ್ಲಿ ತಾರತಮ್ಯ ಮಾಡಬಾರದು, ಎಲ್ಲಾ ಕಂಪನಿಗಳು ಎಫ್.ಆರ್.ಪಿ ಕ್ಕಿಂತ ಹೆಚ್ಚಿನ ಒಂದೇ ದರ ನಿಗದಿ ಮಾಡಬೇಕು, ಟೋಲ್ ಗೇಟ್ ಪಾವತಿಯಿಂದ ವಿನಾಯ್ತಿ ನೀಡಬೇಕು, ತೂಕದಲ್ಲಿ ಮೋಸ ತಪ್ಪಿಸಲು ಕಾರ್ಖಾನೆ ಗೇಟ್ ಬಳಿ ತೂಕ ಮಾಡಿಯೇ ಕಬ್ಬು ತೆಗೆದುಕೊಳ್ಳಬೇಕು, ರಾಜ್ಯ ಸರ್ಕಾರ 500 ರೂ. ಹೆಚ್ಚುವರಿ ಪೆÇ್ರೀತ್ಸಾಹ ಘೋಷಣೆ ಮಾಡಬೇಕು, ವಿದ್ಯುತ್ ಅವಘಡದಿಂದ ಕಬ್ಬು ಸುಟ್ಟ ರೈತರಿಗೆ ಪರಿಹಾರ ನೀಡಬೇಕು, ಹಣ ಪಾವತಿ ಮತ್ತು ಬಾಕಿ ಕುರಿತು ಎಸ್.ಎಂ.ಎಸ್ ಕಳುಹಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಡಿ.ಸಿ. ಮತ್ತು ಕಾರ್ಖಾನೆ ಪ್ರತಿನಿಧಿಗಳ ಮಂದೆ ರೈತ ಮುಖಂಡರು ಬೇಡಿಕೆ ಇಟ್ಟರು.
ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಮಾರುತಿ ಬ್ಯಾಕೋಡ್ ಪ್ರಸ್ತಾವಿಕವಾಗಿ ಮಾತನಾಡಿ, ಪ್ರಸಕ್ತ 2026-27ನೇ ಸಾಲಿಗೆ ಜಿಲ್ಲೆಯಲ್ಲಿ 40,124 ಹೆಕ್ಟೇರ್ ಪ್ರದೇಶದಲಿ ಕಬ್ಬು ಬೆಳೆಯಲಾಗಿದ್ದು, ಕಳೆದ ವರ್ಷದ ನುರಿಸಿದ ಕಬ್ಬಿನಿಂದ ಉತ್ಪಾದಿಸಿದ ಸಕ್ಕರೆ ಪ್ರಮಾಣದ ಆಧಾರದ ಮೇಲೆ ಈ ವರ್ಷ ಜಿಲ್ಲೆಯಲ್ಲಿ ಪ್ರತಿ ಟನ್ ಕಬ್ಬಿಗೆ ಕೆ.ಪಿ.ಆರ್ ಶುರ್ಸ್ & ಅಪ್ಪಾರೆಲ್ಸ್ ಲಿ. ಕಾರ್ಖಾನೆಗೆ 3,846 ರೂ., ಎನ್.ಎಸ್.ಎಲ್. ಶುಗರ್ ಕಾರ್ಖಾನೆಗೆ 3,703 ರೂ., ಶ್ರೀ ರೇಣುಕಾ ಶುಗರ್ಸ್ ಕಾರ್ಖಾನೆಗೆ 3,760 ರೂ., ದಿ. ಉಗಾರ್ ಶುಗರ್ ವಕ್ರ್ಸ್ ಲಿ. ಕಾರ್ಖಾನೆಗೆ 3,803 ರೂ. ಹಾಗೂ ಸಿದ್ದಸಿರಿ ಸೌಹಾರ್ದ ಸಹಕಾರಿ ನಿ. ಕಾರ್ಖಾನೆಗೆ 3,419 ರೂ. ಎಫ್.ಆರ್.ಪಿ. ನಿಗದಿ ಮಾಡಿದೆ ಎಂದರಲ್ಲದೆ ಕಳದ ವರ್ಷದಂತೆ ಈ ವರ್ಷ ಸಹ ರೈತರು-ಕಾರ್ಖಾನೆಗಳೊಂದಿಗೆ ಸಮಾಲೋಚಿಸಿ ಒಪ್ಪಂದದ ನ್ಯಾಯಯುತ ದರ ನಿಗದಿ ಮಾಡಬೇಕಿದೆ ಎಂದು ತಿಳಿಸಿದರು.
ಚರ್ಚೆಯಲ್ಲಿ ರೈತ ಸಂಘದ ಮುಖಂಡರುಗಳಾದ ರಮೇಶ ಹೂಗಾರ, ಶರಣಬಸಪ್ಪ ಮಮಶೆಟ್ಟಿ, ಧರ್ಮರಾಜ ಸಾಹು, ಶ್ರೀಮಂತ ಬಿರಾದಾರ, ರಮೇಶ ಪಾಟೀಲ ಅವರು ಮಾತನಾಡಿ ಕಬ್ಬು ಬೆಳೆಗಾರರ ಸಮಸ್ಯೆ ಮತ್ತು ಬೇಡಿಕೆಗಳನ್ನು ಡಿ.ಸಿ. ಮುಂದಿಟ್ಟರು.
ಸಭೆಯಲ್ಲಿ ಕಲಬುರಗಿ ಉಪ ವಿಬಾಗದ ಸಹಾಯಕ ಆಯುಕ್ತರಾದ ರಿತಿಕಾ ವರ್ಮಾ, ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ್ ಅಜೀಮ್, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಚಿಂಚೋಳಿ ತಹಶೀಲ್ದಾರ ಸುಬ್ಬಣ್ಣ ಜಮಖಂಡಿ, ಅಫಜಲಪೂರ ತಹಶೀಲ್ದಾರ ಸಂಜೀವಕುಮಾರ ದಾಸರ್, ಯಡ್ರಾಮಿ ತಹಶೀಲ್ದಾರ ಯಲ್ಲಪ್ಪ ಸುಬೇದಾರ, ಆಳಂದ ತಹಶೀಲ್ದಾರ ಅಣ್ಣಾರಾವ ಪಾಟೀಲ, ಕೆ.ಪಿ.ಆರ್ ಶುರ್ಸ್ & ಅಪ್ಪಾರೆಲ್ಸ್ ಲಿ., ಎನ್.ಎಸ್.ಎಲ್. ಶುಗರ್ ಶ್ರೀ ರೇಣುಕಾ ಶುಗರ್ಸ್, ದಿ. ಉಗಾರ್ ಶುಗರ್ ವಕ್ರ್ಸ್ ಲಿ. ಹಾಗೂ ಸಿದ್ದಸಿರಿ ಸೌಹಾರ್ದ ಸಹಕಾರಿ ನಿ. ಕಾರ್ಖಾನೆಯ ಪ್ರತಿನಿಧಿಗಳು ಹಾಗೂ ಅನೇಕ ರೈತರ ಮುಖಂಡರು ಭಾಗಿಯಾಗಿದ್ದರು.























