
ಕಲಬುರಗಿ: ರಸಾಯನ ವಿಜ್ಞಾನ ಹಳೆಯ ವಿದ್ಯಾರ್ಥಿಗಳ ಸಂಘ ವಿಭಾಗದ ಶೈಕ್ಷಣಿಕ ಬೆಳವಣಿಗೆಗೆ ಚೈತನ್ಯ ತುಂಬಲಿ. ವಿಜ್ಞಾನ ಕ್ಷೇತ್ರದಲ್ಲಿನ ಹೊಸ ಅವಕಾಶಗಳಿಗೆ ತಕ್ಕಂತೆ ವಿದ್ಯಾರ್ಥಿಗಳ ಜ್ಞಾನ ಮಟ್ಟ ಅರಿತು ಶಿಕ್ಷಕರು ಮಾರ್ಗದರ್ಶನ ಮಾಡಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಆಯೋಜಿಸಿದ ರಸಾಯನಶಾಸ್ತ್ರ ವಿಭಾಗದ ಹಳೆಯ ವಿದ್ಯಾರ್ಥಿಗಳ ಸಂಘವನ್ನು ಉದ್ಘಾಟಿಸಿ ಮಾತನಾಡಿ ದೈನಂದಿನ ಜೀವನದಲ್ಲಿ ಸೇವಿಸುವ
ಆಹಾರ, ಆರೋಗ್ಯ, ಕೃಷಿ, ಪರಿಸರ ಔಷಧಗಳು, ಉದ್ಯಮ, ತಂತ್ರಜ್ಞಾನ ಸೇರಿದಂತೆ ಮಾನವನ ನಾವೀನ್ಯ ಜೀವನ ಮಹತ್ವದ ಪಾತ್ರವನ್ನು ರಸಾಯನಶಾಸ್ತç ಕೊಡುಗೆಯನ್ನು ನೀಡುತ್ತಿದೆ. ಜಾಗತಿಕ ವಿಜ್ಞಾನ ಕ್ಷೇತ್ರಗಳ ನಾವೀನ್ಯ ಜ್ಞಾನ ಗ್ರಹಿಸಿ ಪ್ರಾಯೋಗಿಕ ಬೋಧನೆಗೆ ಒತ್ತು ನೀಡಬೇಕು ಎಂದರು.
ತAತ್ರಜ್ಞಾನ ಬೆಳೆದಂತೆ ಜಗತ್ತು ಬದಲಾವಣೆಗೊಳ್ಳುತ್ತಿದೆ. ಮಾನವನ ಮೆದುಳು ಸೂಪರ್ ಪವರ್‌ನಂತೆ ಕೃತಕ ಬುದ್ದಿಮತ್ತೆ (ಎಐ)ಯನ್ನು ರೂಪಿಸಿದೆ. ಇತ್ತೀಚಿನ ವಿಜ್ಞಾನ ವಿಷಯಗಳು ಬೆಳೆಯುತ್ತಿರುವುದು ಮೂಲ ವಿಜ್ಞಾನದ ನೆಲೆಯಲ್ಲಿ ಎಂಬುದನ್ನು ಮರೆಯಬಾರದು. ಸಂಶೋಧನೆ, ಪ್ರಕಟಣೆ, ಯುಜಿಸಿಯ ಉತ್ಕೃಷ್ಟ ಯೋಜನೆಗಳನ್ನು ವಿಭಾಗದ ಪ್ರಾಧ್ಯಾಪಕರು ಯಶಸ್ವಿಯಾಗಿ ಪೂರೈಸಿ ವಿಭಾಗದ ಖ್ಯಾತಿಯನ್ನು ಹೆಚ್ಚಿಸಿರುವುದು ಪ್ರಶಂಸನೀಯ ಎಂದರು.
ಹೈದರಾಬಾದ್‌ನ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಪ್ರೊ. ಫೈಜ್ ಅಹ್ಮದ್ ಖಾನ್ ಮುಖ್ಯ ಅತಿಥಿಯಾಗಿ ಮಾತನಾಡಿ ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನ ರೂಪಿಸುವಲ್ಲಿ ಮೈಲಿಗಲ್ಲಾಗಿದೆ. ಅದಕ್ಕೆ ತಜ್ಞ ಪ್ರಾಧ್ಯಾಪಕರ ಪ್ರೋತ್ಸಾಹ ಮತ್ತು ಉತ್ತೇಜನ ಕಾರಣವೆಂದು ಹೇಳಲು ಅತೀವ ಸಂತೋಷವೆನಿಸಿದೆ. ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಶ್ರೇಷ್ಠ ಉದ್ಯಮ, ಕಂಪನಿಗಳಲ್ಲಿ ವಿದ್ಯಾರ್ಥಿಗಳು ಕೆಲಸ ಮಾಡುತ್ತಿದ್ದಾರೆ. ಕೆಲವು ಪ್ರತಿಭಾನ್ವಿತ ವಿದ್ಯಾರ್ಥಿಗಳು, ಸಂಶೋಧಕರು ರಾಸಾಯನಿಕ ಕೈಗಾರಿಕಾ ಸಂಸ್ಥೆಗಳನ್ನು ಕಟ್ಟಿ ಬೆಳೆಸಿ ನೂರಾರು ವಿದ್ಯಾರ್ಥಿಗಳ ಬದುಕಿಗೆ ಆಸರೆಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೈದ್ರಾಬಾದ್‌ನ ಸಿಎಸ್‌ಐಆರ್-ಐಐಸಿಟಿ ನಿವೃತ್ತ ವಿಜ್ಞಾನ ಡಾ. ಎಚ್.ಎಂ. ಸಂಪತ್ ಕುಮಾರ್ ಮಾತನಾಡಿ ಇಂದಿನ ಜಾಗತಿಕ ಯುಗದಲ್ಲಿ ಗುರುವಿಲ್ಲದೆ ಜಗತ್ತು ಸುಸ್ಥಿರತೆ ಸಾಧಿಸಲು ಸಾಧ್ಯವಿಲ್ಲ. ಶಿಕ್ಷಕ ಜಗತ್ತಿನ ಜ್ಞಾನ
ಸಂಪತ್ತು. ಅವರ ಸೂಕ್ತ ಸಲಹೆ, ಮಾರ್ಗದರ್ಶನ ಪಡೆಯದೆ ಸಾಧನೆ, ಯಶಸ್ಸು, ಬದುಕು ಕೂಡ ಸಾಧ್ಯವಿಲ್ಲ. ಗುರುವಿನಿಂದ ಸಿಗುವ ವ್ಯಕ್ತಿತ್ವ, ಕಲಿಕೆಯಲ್ಲಿ ನಿರಂತರತೆ, ಗುರುತಿಸಿಕೊಳ್ಳುವಿಕೆ, ನೈತಿಕ ಸ್ಥೈರ್ಯ, ಆತ್ಮವಿಶ್ವಾಸ ಮತ್ತು ಸ್ಪರ್ಧಾತ್ಮಕ ಜ್ಞಾನ ಪಡೆದರೆ ಮಾತ್ರ ಮುಕ್ತ ಅವಕಾಶಗಳು ಸಿಗುತ್ತವೆ. ನಮ್ಮ ಗುರುಗಳಿಂದ ನಾನು ಸಾಧಕನಾಗಲು ಸಾಧ್ಯವಾಯಿತು ಎಂದು ಗುರುಗಳನ್ನು ಸ್ಮರಿಸಿಕೊಂಡರು.
ಹೈದ್ರಾಬಾದ್‌ನ ಡಾ. ರೆಡ್ಡಿ ಲ್ಯಾಬೋರೇಟರೀಸ್ ಲಿಮಿಟೆಡ್‌ನ ಮುಖ್ಯಸ್ಥ ಡಾ. ಎ. ಮಲ್ಲೇಶ್ವರ ರೆಡ್ಡಿ ಮಾತನಾಡಿ ವಿಭಾಗದ ಉನ್ನತಿಗೆ ಹಲವು ಹಿರಿಯ ಪ್ರಾಧ್ಯಾಪಕ ಪರಿಶ್ರಮವಿದೆ. ವಿಭಾಗದ ವಿದ್ಯಾರ್ಥಿಗಳು
ಆಡಳಿತ, ಸಂಶೋದನೆ, ಉದ್ಯಮ, ಪ್ರಯೋಗಾಲಯ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವುದು ಗುರುಗಳ ಉತ್ತೇಜನ ಮತ್ತು ಪ್ರೋತ್ಸಾಹದಿಂದ. ಗುರುಗಳ ಬೋಧನಾ ವಿಧಾನ, ಸಂಶೋಧನಾ ಕೌಶಲ್ಯ ಮತ್ತು ಬಾಂಧವ್ಯವನ್ನು ಮರೆಯಲು ಸಾಧ್ಯವಲ್ಲವೆಂದರು.
ಇದೇ ಸಂದರ್ಭದಲ್ಲಿ ವಿಭಾಗದ ಹಳೆಯ ವಿದ್ಯಾರ್ಥಿ ಶರಣಬಸಪ್ಪ ವಿದ್ಯಾರ್ಥಿಗಳ ಪ್ರಯೋಗಾಲಯ ಕಲಿಕೆಗಾಗಿ ಪೋಲಾರಿ ಮೀಟರ್ ಸಾಧನ ನೀಡುವುದಾಗಿ ಪ್ರಮಾಣ ಪತ್ರವನ್ನು ವಿಭಾಗದ ಮುಖ್ಯಸ್ಥ ಪ್ರೊ.
ಕೆ. ಸಿದ್ದಪ್ಪ ಅವರಿಗೆ ನೀಡಿದರು. ರಸಾಯನಶಾಸ್ತ್ರ ವಿಭಾಗದ ನಿವೃತ್ತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಜೆ.ಎಸ್. ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ ಹಳೆಯ ವಿದ್ಯಾರ್ಥಿಗಳ ಸಂಘದ ಸಂಘದ ಉದ್ದೇಶ, ದ್ಯೇಯ ಮತ್ತು ಕಾರ್ಯಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ರಮೇಶ್ ಲಂಡನಕರ್, ವಿತ್ತಾಧಿಕಾರಿ ಶ್ರೀಮತಿ ಜಯಾಂಬಿಕ, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಕೆ. ಸಿದ್ದಪ್ಪ,ಉಪಸ್ಥಿತರಿದ್ದರು.
ಹಿರಿಯ ಪ್ರಾಧ್ಯಾಪಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊAಡರು. ವಿಜ್ಞಾನ ವಿಭಾಗಗಳ ಪ್ರಾಧ್ಯಾಪಕರು, ರಸಾಯನಶಾಸ್ತç ವಿಭಾಗದ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು. ಪ್ರೊ. ಆನಂದ ಆರ್. ಸೌಂದಾನೆ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಡಾ. ಸೋಮಶೇಖರ್ ಮತ್ತು ಡಾ. ಸ್ವಾತಿ ಬಿ. ಅತಿಥಿ ಗಣ್ಯರನ್ನು ಪರಿಚಯಿಸಿದರು. ಪ್ರೊ. ಅರುಣ್ ಕುಮಾರ್ ಲಗಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
……………………………
ನನಗೆ ಶ್ರೇಷ್ಠ ಶಿಕ್ಷಕರು ಸಿಕ್ಕಿದ್ದು ನನ್ನ ಅದೃಷ್ಟ. ರಸಾಯನಶಾಸ್ತç ವಿಭಾಗದ ಶಿಕ್ಷಕರು ನೀಡಿದ ಅಪಾರ ಜ್ಞಾನ ಪಡೆದು ಉನ್ನತ ಹುದ್ದೆ ಸಿಕ್ಕಿದೆ. ನನ್ನ ಸಾಧನೆ ಮತ್ತು ಉದ್ಯಮ ರಂಗದ ಯಶಸ್ಸಿನಲ್ಲಿ ನನ್ನ ಗುರುವಿನ ಋಣವಿದೆ. ಅದನ್ನು ಮತ್ತೆ ಸಮಾಜಕ್ಕೆ ವಿನಿಯೋಗಿಸುವ ಮಹದಾಸೆ ನನ್ನದು. ವಿಭಾಗ ಹೆಮ್ಮರವಾಗಿ ಬೆಳೆದಿದೆ. ವಿಭಾಗದ ಅಬ್ಯುದಯಕ್ಕಾಗಿ ಸಹಾಯ ನೀಡುವುದು ನನ್ನ ಕರ್ತವ್ಯ ಮತ್ತು ಜವಾಬ್ದಾರಿ ಎಂದು ಭಾವಿಸಿದ್ದೇನೆ.
-ಡಾ.ಶಶಿಧರ್ ಬಿ.ಎಸ್, ವಿಜ್ಞಾನಿ-ಎಫ್ ಸಿಎಸ್‌ಐಆರ್-ಎನ್‌ಐಐಎಸ್‌ಟಿ ತಿರುವನಾಂತಪುರA























