Home ಮುಖಪುಟ ಸುದ್ದಿ ನ ೧ರಿಂದ ಕರೆ ಮಾಡಿದವರ ಹೆಸರು,ಸಂಖ್ಯೆ ಮೊಬೈಲ್‌ನಲ್ಲಿ ಕಡ್ಡಾಯ ಪ್ರದರ್ಶನ

ನ ೧ರಿಂದ ಕರೆ ಮಾಡಿದವರ ಹೆಸರು,ಸಂಖ್ಯೆ ಮೊಬೈಲ್‌ನಲ್ಲಿ ಕಡ್ಡಾಯ ಪ್ರದರ್ಶನ

ನವದೆಹಲಿ, ಅ.೧೫-ಅಪರಿಚಿತ ಮೊಬೈಲ್ ಕರೆಗಳ ಹಿಂದಿರುವವರ ಗುರುತು ಪತ್ತೆಹಚ್ಚಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ನವೆಂಬರ್ ೧ರಿಂದ ಮೊಬೈಲ್‌ಗೆ ಕರೆ ಬಂದಾಗ ಕರೆ ಮಾಡಿದವರ ಹೆಸರು ಮತ್ತು ದೂರವಾಣಿ ಸಂಖ್ಯೆ ಪ್ರದರ್ಶಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ದೂರಸಂಪರ್ಕ ಇಲಾಖೆ ಸೂಚನೆ ನೀಡಿದೆ.

’ಕಾಲಿಂಗ್ ನೇಮ್ ಪ್ರೆಸೆಂಟೇಷನ್’ ಎಂದು ಕರೆಯಲಾಗುವ ಈ ವ್ಯವಸ್ಥೆ ೪ಜಿ ಮತ್ತು ೫ಜಿ ಸೇರಿದಂತೆ ನಾಲ್ಕನೇ ತಲೆಮಾರಿನ ಹಾಗೂ ಅದಕ್ಕಿಂತ ಹೆಚ್ಚಿನ ತಂತ್ರಜ್ಞಾನ ಹೊಂದಿರುವ ಮೊಬೈಲ್ ಜಾಲಗಳಲ್ಲಿ ಪೂರ್ವನಿಯೋಜಿತವಾಗಿ ಸಕ್ರಿಯವಾಗಲಿದೆ. ಇದರಿಂದ ಅಪರಿಚಿತ ಸಂಖ್ಯೆಯಿಂದ ಕರೆ ಬಂದಾಗಲೂ ಕರೆ ಮಾಡಿದವರ ಹೆಸರನ್ನು ತಿಳಿದುಕೊಳ್ಳಲು ಸಾಧ್ಯವಾಗಲಿದೆ ಎಂದು ’ಇಂಡಿಯಾ ಟುಡೇ’ ವರದಿ ಮಾಡಿದೆ.

ಮೊಬೈಲ್‌ಗೆ ಕರೆ ಬಂದಾಗ ಪರದೆಯ ಮೇಲೆ ಮೊದಲಿಗೆ ಕರೆ ಮಾಡಿದವರ ಸಂಖ್ಯೆ ಹಾಗೂ ನಂತರ ಹೆಸರು ಕಾಣಿಸಿಕೊಳ್ಳಲಿದೆ. ಕರೆ ಸ್ವೀಕರಿಸುವವರ ಸಂಪರ್ಕ ಪಟ್ಟಿಯಲ್ಲಿ ಆ ಸಂಖ್ಯೆ ದಾಖಲಾಗಿದ್ದರೆ, ಅಲ್ಲಿ ಉಳಿಸಿರುವ ಹೆಸರೇ ಪ್ರದರ್ಶನವಾಗಲಿದೆ. ಸಂಖ್ಯೆ ಉಳಿಸಿರದಿದ್ದರೆ, ದೇಶೀಯ ಕರೆಗಳ ಸಂದರ್ಭದಲ್ಲಿ ಕರೆ ಮಾಡಿದವರ ದೂರಸಂಪರ್ಕ ಸೇವಾ ಸಂಸ್ಥೆಯ ಗ್ರಾಹಕರ ದಾಖಲೆಗಳಲ್ಲಿ ನೋಂದಣಿಯಾಗಿರುವ ಹೆಸರು ಕಾಣಿಸಿಕೊಳ್ಳಲಿದೆ.

ಇದಕ್ಕಾಗಿ ಪ್ರತಿಯೊಂದು ದೂರಸಂಪರ್ಕ ಸೇವಾ ಸಂಸ್ಥೆಯೂ ಗ್ರಾಹಕರ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ಜೋಡಿಸುವ ಪ್ರತ್ಯೇಕ ದತ್ತಾಂಶ ವ್ಯವಸ್ಥೆಯನ್ನು ನಿರ್ವಹಿಸಬೇಕಾಗುತ್ತದೆ. ಕರೆ ಸ್ವೀಕರಿಸುವವರ ಸೇವಾ ಸಂಸ್ಥೆಯು ಈ ವ್ಯವಸ್ಥೆಯ ಮೂಲಕ ಹೆಸರನ್ನು ಪಡೆದು ಮೊಬೈಲ್ ಪರದೆಯಲ್ಲಿ ಪ್ರದರ್ಶಿಸಲಿದೆ.

ಕರೆ ಮುಗಿದ ಬಳಿಕ ಹೆಸರು ಪಡೆಯಲು ಬಳಸಿದ ಪ್ರಶ್ನೆ-ಪ್ರತಿಕ್ರಿಯೆ ವ್ಯವಸ್ಥೆಯಲ್ಲಿ ಕರೆ ಮಾಡಿದವರ ಹೆಸರನ್ನು ಉಳಿಸಿಕೊಳ್ಳುವಂತಿಲ್ಲ ಎಂದು ದೂರಸಂಪರ್ಕ ಇಲಾಖೆ ಸೂಚಿಸಿದೆ. ಕರೆ ಮಾಡುವಾಗ ತಮ್ಮ ಗುರುತನ್ನು ಮರೆಮಾಚುವ ’ಕಾಲಿಂಗ್ ಲೈನ್ ಐಡೆಂಟಿಫಿಕೇಶನ್ ರಿಸ್ಟ್ರಿಕ್ಷನ್’ ಸೌಲಭ್ಯ ಪಡೆದಿರುವವರ ಹೆಸರು ಪ್ರದರ್ಶಿಸಲಾಗುವುದಿಲ್ಲ.

ವ್ಯಾಪಾರ ಸಂಸ್ಥೆಗಳು ಮತ್ತು ಬೃಹತ್ ಪ್ರಮಾಣದ ಸಂಪರ್ಕಗಳನ್ನು ಬಳಸುವವರಿಗೆ, ನೋಂದಾಯಿತ ಗ್ರಾಹಕ ಹೆಸರಿನ ಬದಲಾಗಿ ಅಧಿಕೃತ ವ್ಯಾಪಾರ ಹೆಸರನ್ನು ಪ್ರದರ್ಶಿಸುವ ಅವಕಾಶವನ್ನೂ ನೀಡಬಹುದು. ಆದರೆ, ಆ ಹೆಸರು ಟ್ರೇಡ್ ಮಾರ್ಕ್ಸ್ ರಿಜಿಸ್ಟ್ರಿಯಲ್ಲಿ ನೋಂದಾಯಿತವಾಗಿರಬೇಕು ಅಥವಾ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪೋರ್ಟಲ್‌ನಲ್ಲಿ ನೋಂದಾಯಿತ ವ್ಯಾಪಾರ ಹೆಸರಾಗಿರಬೇಕು. ಸಂಬಂಧಿತ ದಾಖಲೆಗಳನ್ನು ಸೇವಾ ಸಂಸ್ಥೆಗಳು ಪರಿಶೀಲಿಸಬೇಕಾಗುತ್ತದೆ.

ಅಪರಿಚಿತ ಕರೆಗಳನ್ನು ಗುರುತಿಸಲು ಬಳಕೆಯಲ್ಲಿರುವ ಟ್ರೂಕಾಲರ್‌ನಂತಹ ಆ?ಯಪ್‌ಗಳಿಗೆ ಪರ್ಯಾಯವಾಗಿ ಸರ್ಕಾರಿ ಮಟ್ಟದ ದೃಢೀಕೃತ ವ್ಯವಸ್ಥೆ ರೂಪಿಸುವ ಪ್ರಯತ್ನವಾಗಿ ಸಿಎನ್‌ಎಪಿ ಪರಿಗಣಿಸಲಾಗಿದೆ. ಆದರೆ, ಈ ವ್ಯವಸ್ಥೆ ಕರೆ ಮಾಡಿದವರ ನೋಂದಾಯಿತ ಹೆಸರನ್ನು ಆಧರಿಸುವುದರಿಂದ, ಅದು ಎಲ್ಲ ಸಂದರ್ಭಗಳಲ್ಲೂ