
ಕಲಬುರಗಿ,ಅ.6: ಮಹಾನವಮಿ ಅಮಾವಾಸ್ಯೆ ( ಮಹಾಲಯ ಅಮಾವಾಸ್ಯೆ ) ನಿಮಿತ್ತ ಅಕ್ಟೋಬರ್ 10 ರಂದು ಜಿಲ್ಲೆಯ ವಿವಿಧ ಮಠಗಳಲ್ಲಿ ಶಿವಾನುಭವ ಚಿಂತನಾ ಗೋಷ್ಠಿ ಜರುಗಲಿದೆ.
ಅಂದು ಅಬ್ಬೇತುಮಕೂರಿನ ವಿಶ್ವರಾಧ್ಯ ಮಠದಲ್ಲಿ ರಾತ್ರಿ 8.30ಕ್ಕೆ 498ನೇ ಶಿವಾನುಭವ ಗೋಷ್ಠಿ ನಡೆಯಲಿದೆ. ಡಾ.ಗಂಗಾಧರ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಧಾರ್ಮಿಕ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಜೇವರಗಿ ತಾಲೂಕಿನ ಶಾಖಾಪುರ ವಿಶ್ವರಾಧ್ಯ ತಪೋವನ ಮಠದಲ್ಲಿ ರಾತ್ರಿ 8 ಕ್ಕೆ 388ನೇ ಗೋಷ್ಠಿ ನಡೆಯಲಿದೆ. ಡಾ. ಸಿದ್ದರಾಮ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿ ಪ್ರವಚನ ನೀಡಲಿದ್ದಾರೆ. ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿಯ ಚಿಕ್ಕವಿರೇಶ್ವರ ಹಿರೇಮಠ ಸಂಸ್ಥಾನದಲ್ಲಿ ರಾತ್ರಿ 8ಕ್ಕೆ 333ನೇ ಗೋಷ್ಠಿ ನಡೆಯಲಿದೆ. ಡಾ. ರೇವಣಸಿದ್ದ ಶಿವಾಚಾರ್ಯರು ನೇತೃತ್ವ ವಹಿಸಲಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಅಪ್ಪನ ಶಾಖಾಮಠದಲ್ಲಿ ಅಕ್ಟೋಬರ 15 ರಂದು ರಾತ್ರಿ 8.50ಕ್ಕೆ 314ನೇ ಶಿವಾನುಭವ ಗೋಷ್ಠಿ ನಡೆಯಲಿದೆ. ಅಬ್ಬೇತುಮಕೂರ ಮಠದ ಡಾ.ಗಂಗಾಧರ ಸ್ವಾಮೀಜಿ ಅವರು ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಲಿದ್ದಾರೆ ಎಂದು ವಿಶ್ವರಾಧ್ಯ ಸೇವಾ ಸಮಿತಿ ನಗರ ಘಟಕದ ವಕ್ತಾರ, ಸಂಘಟನಾ ಕಾರ್ಯದರ್ಶಿ ಬಸವರಾಜ ಶೀಲವಂತ ಅವರು ಪತ್ರಿಕೆ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.























