Home ಜಿಲ್ಲೆ ಬೆಂಗಳೂರು ಶಾಸಕ ನಾರಾಯಣಸ್ವಾಮಿ ಹೇಳಿಕೆ ಮಾದಿಗ ಸಮಿತಿ ಲೇವಡಿ

ಶಾಸಕ ನಾರಾಯಣಸ್ವಾಮಿ ಹೇಳಿಕೆ ಮಾದಿಗ ಸಮಿತಿ ಲೇವಡಿ

ಕೋಲಾರ,ಜು.೩೦: ರಾಜ್ಯದಾದ್ಯಂತ ಒಳ ಮೀಸಲಾತಿ ಜನಗಣತಿ ಸಿದ್ದರಾಮಯ್ಯ ರವರ ಸರ್ಕಾರ ಮಾಡಿದಂತೆ ರಾಜ್ಯದಲ್ಲಿ ಮಾದಿಗರ ಜನಸಂಖ್ಯೆ ಜಾಸ್ತಿ ಇದೆ. ಈ ಮಾಹಿತಿಯನ್ನು ಮರೆಮಾಚಿ ಹೊಲೆಯ ಸಮುದಾಯ ಸಂಖ್ಯೆ ಜಾಸ್ತಿ ಎಂದು ಸುಳ್ಳು ಮಾಹಿತಿ ಕೊಡಬೇಡಿ ಮಂತ್ರಿಗಿರಿ ಬೇಕಾದರೆ ತಾವು ಹೋರಾಟ ಆರಂಭಿಸಿ ಪಡೆದುಕೊಳ್ಳಿ ಈ ಮಧ್ಯೆ ಹಿರಿಯ ನಾಯಕ ಕೆ.ಎಚ್. ಮುನಿಯಪ್ಪ ಅವರ ಹೆಸರು ತರುವುದು ಅಪ್ರಸ್ತುತ ಎಂದು ಬಂಗಾರಪೇಟೆಯ ಶಾಸಕ ಎಸ್ ಎನ್ ನಾರಾಯಣಸ್ವಾಮಿ ರವರ ಹೇಳಿಕೆಗೆ ಕರ್ನಾಟಕ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ಸಾಹುಕಾರ್ ಶಂಕರಪ್ಪ ಲೇವಡಿ ಮಾಡಿದ್ದಾರೆ.


ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಪ್ರಿಯಾಂಕ ಖರ್ಗೆ, ಮಹದೇವಪ್ಪ ಮತ್ತಿತರ ಅನೇಕ ನಾಯಕರು ತಮ್ಮ ಸಮುದಾಯದವರು ಆಗಿದ್ದು ಯಾವುದೇ ಸ್ಥಾನಮಾನ ಪಡೆದುಕೊಳ್ಳಲು ಯಾರ ಅಭ್ಯಂತರವೂ ಇಲ್ಲ ಆದರೂ ಮಾದಿಗ ಸಮುದಾಯದ ಬಗ್ಗೆ ಮಾತನಾಡುವುದು ಅಪ್ರಸ್ತುತ ಎಂದಿದ್ದಾರೆ.


ಡಿ.ಕೆ ಶಿವಕುಮಾರ್ ರವರ ಮಂತ್ರಿಮಂಡಲದಲ್ಲಿ ಹೊಲಯ ಸಮುದಾಯದವರೇ ಹೆಚ್ಚು ಸಂಖ್ಯೆ ಸಚಿವರು ಆಗಿದ್ದು, ಖಾತೆ ಹಂಚಿಕೆಯಲ್ಲಿ ಉತ್ತಮ ಖಾತೆ ಪಡೆದುಕೊಂಡಿದ್ದರು .


ಈ ಬಗ್ಗೆ ನಾವು ಚರ್ಚೆ ಮಾಡುತ್ತಿಲ್ಲ ಆದರೆ ನಮ್ಮ ಪರಮೋಚ್ಚ ನಾಯಕ ಕೆಎಚ್ ಮುನಿಯಪ್ಪ ರವರಿಗೆ ಖಾತೆ ಬದಲಾವಣೆ ಅಥವಾ ರಾಜ್ಯದ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬುದು ಬಕ್ಷಿಸಲ್ಲ ನಮ್ಮ ಸಮುದಾಯದ ನ್ಯಾಯಯುತ ಪಾಲು ಆಗಿದ್ದು ಇದನ್ನು ಪ್ರತಿಪಾದಿಸುವಾಗ, ಮಹಿಳಾ ಮೀಸಲಾತಿ ಪ್ರಸ್ತಾಪ ಬಂದಾಗ ಶಾಸಕಿ ರೂಪ ಶಶಿಧರ್ ರವರಿಗೂ ಮಂತ್ರಿ ಸ್ಥಾನ ನೀಡಬೇಕು ಎಂಬುದು ನಮ್ಮ ಅಗ್ರಹವಾಗಿದೆ ಎಂದು ಅವರು ತಿಳಿಸಿದ್ದಾರೆ.


ಮಾದಿಗ ಸಮುದಾಯ ಮತ್ತು ರಾಜ್ಯದ ನಾಯಕರಾಗಿರುವ ಕೆ.ಎಚ್. ಮುನಿಯಪ್ಪ ರವರ ಹೆಸರನ್ನು ಪ್ರಸ್ತುತ ಜಿಲ್ಲೆಯ ರಾಜಕಾರಣ, ಮತ್ತು ಮಂತ್ರಿಗಳ ಆಯ್ಕೆ ವಿಚಾರದಲ್ಲಿ ತರದೆ, ತಮ್ಮ ಹೊಲೆಯ ಸಮುದಾಯದ ಶಕ್ತಿ ಪ್ರದರ್ಶಿಸಿ ಸ್ಥಾನ ಪಡೆದುಕೊಳ್ಳುವುದು ಸೂಕ್ತ ಎಂದು ಅವರು ತಿಳಿಸಿದ್ದಾರೆ.