Home ಕ್ರೈಂ ಸುದ್ದಿಗಳು ಜಮಖಂಡಿ ತಾಲೂಕು ಪಂಚಾಯತ ಎ.ಡಿ. ಸಂಜು ಹಿಪ್ಪರಗಿ ಮನೆ ಮೇಲೆ ಲೋಕಾಯುಕ್ತರ ದಿಢೀರ್ ದಾಳಿ

ಜಮಖಂಡಿ ತಾಲೂಕು ಪಂಚಾಯತ ಎ.ಡಿ. ಸಂಜು ಹಿಪ್ಪರಗಿ ಮನೆ ಮೇಲೆ ಲೋಕಾಯುಕ್ತರ ದಿಢೀರ್ ದಾಳಿ

ಜಮಖಂಡಿ:ನಗರದ ತಾಲೂಕು ಪಂಚಾಯತದ ಸಹಾಯಕ ನಿರ್ದೇಶಕ (ಎ.ಡಿ.) ಸಂಜು ಹಿಪ್ಪರಗಿ ಅವರಿಗೆ ಸಂಬಂಧಿಸಿದ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.

ವಿಜಯನಗರದಲ್ಲಿರುವ ಸಂಜು ಹಿಪ್ಪರಗಿ ಅವರ ನಿವಾಸದ ಮೇಲೆ ಹಾಗೂ ಜಮಖಂಡಿಯ ದರ್ಗಾ ರಸ್ತೆಯಲ್ಲಿರುವ ಅವರ ತಂದೆಯ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ.

ಲೋಕಾಯುಕ್ತ ಅಧಿಕಾರಿಗಳ ಈ ದಿಢೀರ್ ಕಾರ್ಯಾಚರಣೆಯಿಂದ ಜಮಖಂಡಿ ತಾಲೂಕು ಆಡಳಿತ ವಲಯದಲ್ಲಿ ಸಂಚಲನ ಮೂಡಿದೆ. ದಾಳಿಯ ವೇಳೆ ಯಾವೆಲ್ಲ ದಾಖಲೆಗಳನ್ನು ಪರಿಶೀಲಿಸಲಾಗಿದೆ, ಯಾವುದೇ ಮಹತ್ವದ ದಾಖಲೆಗಳು ಪತ್ತೆಯಾಗಿವೆಯೇ ಹಾಗೂ ಈ ಕಾರ್ಯಾಚರಣೆಗೆ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

ದಾಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳ ಅಧಿಕೃತ ಮಾಹಿತಿ ಹಾಗೂ ಮುಂದಿನ ಬೆಳವಣಿಗೆಗಳಿಗಾಗಿ ಸಾರ್ವಜನಿಕರು ಕುತೂಹಲದಿಂದ ಕಾಯುತ್ತಿದ್ದಾರೆ.