Home ಜಿಲ್ಲೆ ಕಾನೂನು ಅರಿವು ಕಾರ್ಯಕ್ರಮ

ಕಾನೂನು ಅರಿವು ಕಾರ್ಯಕ್ರಮ

ಧಾರವಾಡ,ಆ೨೭: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಧಾರವಾಡ, ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ವೆÃದಿಕೆ, ಪ್ರಧಾನ ಕಛೇರಿ, ದೆಹಲಿ, ಅಬಿಜಿತ್ ಬೆಂಗೇರಿ ¥üËಂಡೇಶನ್ ಶ್ರೀ ಸತ್ಯ ಸಾಯಿ ಶೈಕ್ಷಣಿಕ ಟ್ರಸ್ಟ್, ಸಾಯಿಚರಣ ಕ್ಯಾಂಪಸ್, ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಪೆÉÆಕ್ಸೋ ಕಾಯ್ದೆ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಶ್ರೀ ಸತ್ಯ ಸಾಯಿ ಶೈಕ್ಷಣಿಕ ಟ್ರಸ್ಟ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಎನ್. ವ್ಹಿ. ವಿಜಯ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಂiÀÆಧೀಶರು ಹಾಗೂ ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಧಾರವಾಡ ಇವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ಪೊಕ್ಸೋ ಕಾಯ್ದೆ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಮಾತನಾಡುತ್ತಾ ಮಕ್ಕಳ ಹಿತಾಶಕ್ತಿ ಮತ್ತು ಅದರ ದೈಹಿಕ ಮಾನಸಿಕ ಸುರಕ್ಷತೆಗೆ ಮೊದಲು ಆದ್ಯತೆ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಗಂಬೀರವಾಗಿ ಪರಿಗಣಿಸಿ ತ್ವರಿತವಾಗಿ ನ್ಯಾಯ ಒದಗಿಸಲು ವಿಶೇಷ ನ್ಯಾಂiÀÆಲಯಗಳನ್ನು ಈ ಕಾಯ್ದೆ ಒಳಗೊಂಡಿದೆ, ಮಾದಕ ದ್ರವ್ಯ ವ್ಯಸನದಿಂದ ವ್ಯಕ್ತಿಯ ದೈಹಿಕ ಮಾನಸಿಕ ಮತ್ತು ಸಾಮಾಜಿಕ ಜೀವನದ ಮೇಲೆ ತೀವ್ರವಾದ ಹಾಗೂ ಹಾನಿಕಾರಕ ದುಷ್ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಅಲ್ಲಪ್ಪ ಎಂ. ಬಡಿಗೇರ, ಹಿರಿಯ ಸಿವಿಲ್ ನ್ಯಾಂiÀÆಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಧಾರವಾಡ ಇವರು ಕಾನೂನು ಸೇವೆಗಳ ಪ್ರಾಧಿಕಾರದ ಧ್ಯೇಯ್ಯೊದ್ದೇಶಗಳ ಬಗ್ಗೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾನೂನು ಕುರಿತು ಮಾತನಾಡಿದರು ಹಾಗೂ ಡಾ|| ಕೆ. ಎಸ್, ಸಮೀರ್‌ಕುಮಾರ, ರಾಷ್ಟೀಯ ಪ್ರಧಾನ ಕಾರ್ಯದರ್ಶಿಗಳು, ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ವÉÃದಿಕೆ, ಪ್ರಧಾನ ಕಛೇರಿ, ದೆಹಲಿ, ಶ್ರೀ ಅಬಿಜಿತ್ ಬೆಂಗೇರಿ, ಅಬಿಜಿತ್ ಬೆಂಗೇರಿ ¥üËಂಡೇಶನ್ ಇವರು ಮುಖ್ಯ ಅತಿಥಿಗಳಾಗಿ ಹಾಜರಿದ್ದರು. ಅಧ್ಯಕ್ಷತೆಯ ಸ್ಥಾನದಲ್ಲಿ ಶ್ರೀ ಕೆ. ಎಸ್. ನಾಡಿಗೇರ, ಆಡಳಿತ ಮಂಡಳಿಯ ಸದಸ್ಯರು, ಶ್ರೀ ಸತ್ಯ ಸಾಯಿ ಶೈಕ್ಷಣಿಕ ಟ್ರಸ್ಟ್, ಧಾರವಾಡ, ಶ್ರೀಮತಿ ಅಂಜಲಿ ಶೆಟ್ಟಿ, ಆಡಳಿತ ಮಂಡಳಿಯ ಸದಸ್ಯರು, ಹಾಗೂ ಶ್ರೀ ಜಿ. ಎಮï. ಗಣಾಚಾರಿ, ಶೈಕ್ಷಣಿಕ ನಿರ್ದೇಶಕರು, ಶ್ರೀ ಸತ್ಯ ಸಾಯಿ ಶೈಕ್ಷಣಿಕ ಟ್ರಸ್ಟ್, ಧಾರವಾಡ ಇವರು ಭಾಗವಹಿಸಿದ್ದರು. ಸದರಿ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕ ವೃಂದದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.