Home ಜಿಲ್ಲೆ ಕಲಬುರಗಿ ಡಾ. ಮಹೇಂದ್ರ ಕುರ್ಡಿಯವರ ಹೊನ್ನುಡಿ ಕೃತಿ ಲೋಕಾರ್ಪಣೆ- ಸಾಹಿತಿಗಳು ಅನಭಿಷಿಕ್ತ ಶಾಸಕರು: ಡಾ.ಖಾಜಾವಲಿ ಈಚನಾಳ ಅಭಿಮತ

ಡಾ. ಮಹೇಂದ್ರ ಕುರ್ಡಿಯವರ ಹೊನ್ನುಡಿ ಕೃತಿ ಲೋಕಾರ್ಪಣೆ- ಸಾಹಿತಿಗಳು ಅನಭಿಷಿಕ್ತ ಶಾಸಕರು: ಡಾ.ಖಾಜಾವಲಿ ಈಚನಾಳ ಅಭಿಮತ

ಹಟ್ಟಿ ಚಿನ್ನದಗಣಿ : ಸಾಹಿತಿಗಳು, ಬರಹ ಗಾರರರು, ಪತ್ರಕರ್ತರು ಸಮಾಜದ ಬದಲಾವಣೆ ಯಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಚುನಾವಣೆಯ ಮೂಲಕ ಆಯ್ಕೆಯಾದ ಶಾಸಕರು ಸಮಾಜದ ಭೌತಿಕ ಬದಲಾವಣೆ ಮಾಡಿದರೆ, ಸಾಹಿತಿಗಳು ಅನಭಿಷಿಕ್ತ ಶಾಸಕರಾಗಿ ಸಮಾಜದಲ್ಲಿನ ಜನರ ಬೌದ್ಧಿಕ ಬದಲಾವಣೆ ಮಾಡುತ್ತಾರೆ ಎಂದು ಜೇವರ್ಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಹಾಗೂ ಬಂಡಾಯ ಸಾಹಿತಿ ಡಾ. ಖಾಜಾವಲಿ ಈಚನಾಳ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದ ವಿನಾಯಕ ವಿದ್ಯಾ ಸಂಸ್ಥೆ, ಲಿಂಗಸುಗೂರ ತಾಲೂಕಾ ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ಚುಟುಕು ಸಾಹಿತ್ಯ ಪರಿಷತ್ತುಗಳ ಸಹಯೋಗದಲ್ಲಿ ವಿನಾಯಕ್ ಶಾಲೆಯಲ್ಲಿ ಆಯೋಜಿಸಿದ್ದ ಡಾ. ಮಹೇಂದ್ರ ಕುರ್ಡಿಯವರ ಹೊನ್ನುಡಿ ಕೃತಿ ಲೋಕಾರ್ಪಣೆಯ ನಂತರ, ಮಧ್ಯಾಹ್ನ ಜರುಗಿದ ಕವಿ ಕಾವ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತ, ಕಾವ್ಯ ಕೇವಲ ಪದ ಜೋಡಣೆ ಯ ಕಸರತ್ತಲ್ಲ. ಕವಿ ಶಬ್ದ ಜಿಪುಣನಾಗಿರಬೇಕು. ಪದಮೈತ್ರಿ ಸಾಧಿಸ ಬೇಕು. ಸಾಂಪ್ರದಾಯಿಕ ವಿಷಯ ಬಿಟ್ಟು, ವಾಸ್ತವ ಸಮಾಜದ ಜ್ವಲಂತ ಸಮಸ್ಯೆಗಳಾದ ಹಸಿವು ಬಡತನ, ಶೋಷಣೆ, ಲಿಂಗ ತಾರತಮ್ಯ, ಅಸಮಾನತೆ, ಅಸ್ಪೃಶ್ಯತೆ, ಅಜ್ಞಾನ, ಮೂಢನಂಬಿಕೆ, ಭ್ರಷ್ಟಾಚಾರ,ಕೋಮುವಾದದಂತಹ ವಿಷಯಗಳು ಕಾವ್ಯದ ವಸ್ತುಗಳನ್ನಾಗಿ ಆಯ್ಕೆಮಾಡಿಕೊಳ್ಳಬೇಕೆಂದು ಹೇಳಿದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ. ಶಶಿಕಾಂತ ಕಾಡ್ಲೂರು ಮಾತನಾಡಿ, ನಮ್ಮ ಸಾಹಿತ್ಯ ಪರಂಪರೆ ಬಹಳ ಶ್ರೀಮಂತವಾಗಿದೆ. ಶಿಶುನಾಳ ಶರೀಫ, ಬೇಂದ್ರೆ, ಕುವೆಂಪು ಅವರು ನಮಗೆ ಮಾದರಿಯಾಗಬೇಕು ಎಂದು ತಿಳಿಸಿದರು.ಕವಿ,
ಕಥೆಗಾರ ಶರಣಬಸವ ಗುಡದಿನ್ನಿ ಆಶಯ ನುಡಿಗಳನ್ನಾಡಿ, ಕವಿ ವರ್ತಮಾನದ ಜೊತೆಗೆ ಮುಖಾಮುಖಿಯಾಗಬೇಕು ಸಮಾಜಕ್ಕೆ ತಲ್ಲಣ ಗಳಿಗೆ ಸ್ಪಂದಿಸಲು ಹೇಳಿದರು.
ವೇದಿಕೆ ಮೇಲಿದ್ದ ವಿನಾಯಕ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಹುಲಗಪ್ಪ ಬುದ್ದಿನ್ನಿ, ಭಾಗೀರಥಿ, ನಾಗರತ್ನ ಮಾತನಾಡಿದರು.
ಸುಮಾರು ಹದಿನೈದು ಜನ ಕವಿಗಳು ಪ್ರೀತಿ ಪ್ರೇಮ, ಪ್ರಕೃತಿ ಅವ್ವ, ಇತ್ಯಾದಿ ವಿಷಯಹೊಂದಿದ ಕವಿತೆಗಳನ್ನು ವಾಚಿಸಿದರು.
ಕಾರ್ಯಕ್ರಮದಲ್ಲಿ ವಿನಾಯಕ ವಿದ್ಯಾ ಸಂಸ್ಥೆಯ ಅಧ್ಯಕ್ಷ ನರಸಪ್ಪ ಯಾದವ, ರಾಯಚೂರಿನ ಲೋಕಾಯುಕ್ತ ಡಿ,ವೈ.ಎಸ್ ಪಿ ರವಿ ಪುರುಷೋತ್ತಮ, ವಕೀಲ ಶಂಶುದ್ದೀನ್, ಸಾಹಿತಿ ಮಹೇಂದ್ರ ಕುರ್ಡಿ ಹಾಗೂ ಇನ್ನಿತರ ರು ಉಪಸ್ಥಿತರಿದ್ದರು. ಚಂದ್ರು ನಿರೂಪಿಸಿದರು.