Home ಜಿಲ್ಲೆ ಕಲಬುರಗಿ ಭಾಷೆ ಜೀವನದ ಅವಿಭಾಜ್ಯ ಭಾಗ: ಪ್ರೊ. ಸಂದೀಪ

ಭಾಷೆ ಜೀವನದ ಅವಿಭಾಜ್ಯ ಭಾಗ: ಪ್ರೊ. ಸಂದೀಪ

ಕಲಬುರಗಿ: ಭಾಷೆ ಹಾಗೂ ಸಂಸ್ಕøತಿಗೆ ಅವಿನಾಭವ ಸಂಬಂಧವಿದೆ.ಭಾಷೆಯಲ್ಲಿ ಭಾವನೆಗಳಿವೆ. ಭಾಷೆಯಲ್ಲಿ ಸವಿ ಇದೆ. ಭಾಷೆ ಮಾನವ ಜೀವನದ ಅವಿಭಾಜ್ಯ ಅಂಶ ಎಂದು ಕೇಂದ್ರೀಯ ವಿಶ್ವ ವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥ ಡಾ ಸಂದೀಪ ಹೇಳಿದರು.
ಅವರು ನಗರದ ಖಾಜಾ ಬಂದಾನವಾಜ ವಿಶ್ವ ವಿದ್ಯಾಲಯದ ಹಿಂದಿ ವಿಭಾಗದ ಆಶ್ರಯದಲ್ಲಿ ಆಯೋಜಿಸಲ್ಪಟ್ಟ ಹಿಂದಿ ದಿವಸ ಪಕವಾಡಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಪ್ರತಿ ವರ್ಷ ಸೆಪ್ಟೆಂಬರ್ ನಲ್ಲಿ ಹಿಂದಿ ದಿವಸವನ್ನಾಗಿ ಆಚರಿಸಲಾಗುತ್ತದೆ. ಇದು ಹಿಂದಿಯನ್ನು ಭಾರತದ ಅಧಿಕೃತ ಭಾಷೆಯಾಗಿ ಅಳವಡಿಸಿಕೊಂಡಿರುವ ದಿನ.
ಹಿಂದಿ ನಮ್ಮ ದೇಶದ ವಿವಿಧ ಪ್ರದೇಶಗಳ ಜನರನ್ನು ಒಂದುಗೂಡಿಸುತ್ತದೆ.ಇದು ನಮ್ಮ ಸಂಸ್ಕೃತಿ, ಇತಿಹಾಸ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ.
ಹಿಂದಿ ಪ್ರಪಂಚದಲ್ಲಿ ಹೆಚ್ಚು ಮಾತನಾಡುವ ಭಾಷೆಗಳಲ್ಲಿ ಒಂದಾಗಿದೆ.ಹಿಂದಿ ಮಾತನಾಡಲು ಮತ್ತು ಕಲಿಯಲು ನಾವು ಹೆಮ್ಮೆ ಪಡಬೇಕು. ಭಾರತ ಜ್ಞಾನ, ಸಂಸ್ಕೃತಿ ಮತ್ತು ಸಂಸ್ಕಾರದ ಕರ್ಮಭೂಮಿ. ಭಾಷೆ ಜನರನ್ನು ಜೋಡಿಸುತ್ತದೆ. ಮಾತ್ರ ಭಾಷೆಯ ಸ್ಥಾನ ದೊಡ್ಡದು. ಹಿಂದಿ ಭಾಷೆ ಒಂದು ಸಮವೇಶಿ ಭಾಷೆ. ಒಂದು ಭಾಷೆ ಅವನತಿ ಹೊಂದಿದಾಗ ಆ ಭಾಷೆಯಲ್ಲಿನ ಜ್ಞಾನ, ಸಂಕೃತಿ ಕಳೆದು ಹೋಗುತ್ತದೆ. ಹಿಂದಿ ಕೇವಲ ಭಾಷೆಯಲ್ಲ, ರಾಷ್ಟ್ರೀಯ ಏಕತೆಯ ಸಂಕೇತ.ಅನೇಕ ದಿಗ್ಗಜರು ಹಿಂದಿ ಭಾಷೆಗೆ ಕೊಡುಗೆಗಳನ್ನು ನೀಡಿದ್ದಾರೆ. ಹಿಂದಿ ದಿವಸ್‍ನಲ್ಲಿ, ನಮ್ಮ ದೈನಂದಿನ ಜೀವನದಲ್ಲಿ ಹಿಂದಿಯನ್ನು ಪ್ರಚಾರ ಮಾಡುವ ಭರವಸೆ ನೀಡೋಣ ಎಂದು ಹೇಳಿದರು.
ಡೀನ ಪೆÇ್ರ ನಿಶಾತ ಆರೀಫ್ ಹುಸ್ಸೇನಿ, ತಮ್ಮ ಅಧ್ಯಕ್ಷೀಯ ಸುಮಾರೋಪದಲ್ಲಿ ಮಾನವ ಮನಸ್ಸು ಮತ್ತು ಭಾಷೆಗಳ ನಡುವನ ತಳುಕಿನ ಬಗ್ಗೆ ಅಧ್ಯಯನ ನಡೆಯಬೇಕು ಎಂಬುದನ್ನು ಹೇಳಿದರು. ಮಾತೃ ಭಾಷೆ ಬೆಳೆಸೋಣ ಆದರೂ ಇಂಗ್ಲೀಷ್ ಭಾಷೆ ಉಳಿಸೋಣ ಅಂದರು. ಸ್ಪರ್ಧೆಗಳಲ್ಲಿ ಭಾಗವಾಗಿಸಿದ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊಗಳಿದರು.
ಹಿಂದಿ ದಿವಸದ ಅಂಗವಾಗಿ ಏರ್ಪಡಿಸಿದ ಸ್ಪರ್ಧೆ ಗಳಲ್ಲಿ ಬಿಬಿ ರಜಾ ಮಹಾವಿದ್ಯಾಲಯ, ಗುಲ್ಬರ್ಗಾ ವಿಶ್ವ ವಿದ್ಯಾಲಯ, ಅಂಬೇಡ್ಕರ ಮಹಾ ವಿದ್ಯಾಲಯ ಗಳಿಂದ ಕೂಡ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಲ್ಲ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು.
ಸಲೋಬರ್ ಹಾಗೂ ಉರ್ದು ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ ಶಾಬಾಜ ಪ್ರಾರ್ಥಿಸಿದರು, . ಡಾ ಆಫಷನ ದೇಶಮುಖ ಸ್ವಾಗತಿಸಿದರು. ಡಾ ಭಾರತಿ ವರದಿ ಓದಿದರು. ಸೈಮಾ ಐಮನ್ ಹಾಗೂ ಮುಹಮ್ಮದ್ ಜೈದ್ ನಿರೂಪಿಸಿದರು. ಶಾಫಿಯ ಬೇಗಮ್ ವಂದಿಸಿದರು.ಕಲಾ, ಭಾಷಾ, ಮಾನವೀಕತೆ, ಸಮಾಜ ವಿಜ್ಞಾನ, ವಿಜ್ಞಾನ, ಶಿಕ್ಷಣ, ಕಾನೂನು, ನಿಕಾಯದ ಎಲ್ಲ ವಿದ್ಯಾರ್ಥಿಗಳು ಮತ್ತು ಸಹಾಯಕ ಪ್ರಾಧ್ಯಪಕರು ಹಾಜರಿದ್ದರು.