
ಕಲಬುರಗಿ,ಅ.1: ಸಾರ್ವಜಕನಿಕ ಶಿಕ್ಷಣ ಇಲಾಖೆಯು ಬುಧವಾರ ಆಯೋಜಿಸಿದ ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಿ ನಗರದ ಎಸ್. ಆರ್. ಎನ್. ಮೆಹತಾ ಶಾಲೆಯ ವಿದ್ಯಾರ್ಥಿಗಳು ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
14 ವರ್ಷದೊಳಗಿನ ಬಾಲಕಿಯರ ಸ್ಪರ್ಧೆಯಲ್ಲಿ ಸ್ಪಂದನಾ-ಪ್ರಥಮ ಸ್ಥಾನ, ಸಮನ್ವಿ-ದ್ವಿತಿಯ ಸ್ಥಾನ
ಖುಷಿ-ನಾಲ್ಕನೇ ಸ್ಥಾನ ಪಡೆದಿದ್ದಾರೆ. 14 ವರ್ಷದೊಳಗಿನ ಬಾಲಕರ ಸ್ಪರ್ಧೆಯಲ್ಲಿ
ಅಕ್ಷಿತ ಎಸ್-ಪ್ರಥಮ ಸ್ಥಾನ,ರಿತ್ವಿಕ ಜಿ.-ತೃತೀಯ ಸ್ಥಾನ,ಅನೀಷ ಪಿ. -ನಾಲ್ಕನೇ ಸ್ಥಾನ ಪಡೆದಿದ್ದಾರೆ.
17 ವರ್ಷದೊಳಗಿನ ಬಾಲಕಿಯರ ಸ್ಪರ್ಧೆಯಲ್ಲಿಅಕ್ಷರಾ ಅವಟೆ-ಪ್ರಥಮ ಸ್ಥಾನ,
ಅನುಶ್ರೀ -ಐದನೇ ಸ್ಥಾನ ಪಡೆದಿದ್ದಾರೆ.17 ವರ್ಷದೊಳಗಿನ ಬಾಲಕರ ಸ್ಪರ್ಧೆಯಲ್ಲಿಪ್ರದೀಪ ಪಾಟಿಲ -ದ್ವೀತಿಯ ಸ್ಥಾನ , ನಿಖಿಲ ರೆಡ್ಡಿ -ತೃತಿಯ ಸ್ಥಾನ , ಸಾತ್ವೀಕ ಬಿ.ಕೆ.-ನಾಲ್ಕನೇ ಸ್ಥಾನ ಪಡೆದಿದ್ದಾರೆ. ಈ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ವಿಜೇತರಾಗಿ ರಾಜ್ಯ ಮಟ್ಟದ ಚೆಸ್ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿ ಜಿಲ್ಲೆಗೆ ಮತ್ತು ಶಾಲೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿಯ ಟ್ರಸ್ಟಿಗಳಾದ ಚಕೋರ ಮೆಹತಾ, ಪ್ರಾಚಾರ್ಯರಾದ ಪ್ರೀತಿ ಮೆಹತಾ, ದೈಹಿಕ ಶಿಕ್ಷಣದ ವಿಭಾಗ ಮುಖ್ಯಸ್ಥರಾದ ಬಸವರಾಜ ತಳಕೇರಿ, ಚೆಸ್ ತರಬೇತಿದಾರರಾದ ಪ್ರಮೋದ ಮೋರೆ ಹಾಗೂ ಶಿಕ್ಷಕ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.






















