Home ಜಿಲ್ಲೆ ಕಲಬುರಗಿ ವಿಕಸಿತ ಭಾರತ ಶಿಕ್ಷಾ ಅಧಿಷ್ಠಾನ ಮಸೂದೆ ಕುರಿತ ಜೆಪಿಸಿ ಸಭೆಯಲ್ಲಿಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ...

ವಿಕಸಿತ ಭಾರತ ಶಿಕ್ಷಾ ಅಧಿಷ್ಠಾನ ಮಸೂದೆ ಕುರಿತ ಜೆಪಿಸಿ ಸಭೆಯಲ್ಲಿಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಭಾಗಿ

ಕಲಬುರಗಿ,ಅ.1: ವಿಕಸಿತ ಭಾರತ ಶಿಕ್ಷಾ ಅಧಿಷ್ಠಾನ ಮಸೂದೆ 2025′ ಕುರಿತು ಬೆಂಗಳೂರಿನಲ್ಲಿ ಸೆಪ್ಟೆಂಬರ್ 29ರಂದು ನಡೆದ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಸಭೆಯಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಹಾಗೂ ಕಾನೂನು ಅಧ್ಯಯನ ಮತ್ತು ವಿದ್ಯಾರ್ಥಿ ಕಲ್ಯಾಣದ ನಿಕಾಯದ ಡೀನ್ ಪೆÇ್ರ. ಬಸವರಾಜ ಎಂ. ಕುಬಕಡ್ಡಿ ಭಾಗವಹಿಸಿದ್ದರು.
ಸಿಯುಕೆ ಪ್ರತಿನಿಧಿಗಳು ಪ್ರಸ್ತಾವಿತ ಮಸೂದೆಯ ಕುರಿತು ವಿಶ್ವವಿದ್ಯಾಲಯದ ಅನಿಸಿಕೆಗಳು ಮತ್ತು ಅಭಿಪ್ರಾಯಗಳನ್ನು ಜೆಪಿಸಿ ಮುಂದೆ ಮಂಡಿಸಿದರು. ಉನ್ನತ ಶಿಕ್ಷಣ ಸಂಸ್ಥೆಗಳನ್ನು ಒಂದೇ ಸೂರಿನಡಿ ತರುವ ಪ್ರಯತ್ನ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ) 2020ರ ಉದ್ದೇಶಗಳನ್ನು ಮುಂದುವರಿಸುವಲ್ಲಿ ಮಸೂದೆಯ ಮಹತ್ವವನ್ನು ವಿಶ್ವವಿದ್ಯಾಲಯವು ವಿವರಿಸಿತು.
ಮಸೂದೆಯ ವಿವಿಧ ನಿಬಂಧನೆಗಳ ಕುರಿತು ತನ್ನ ಅಭಿಪ್ರಾಯಗಳನ್ನು ಮಂಡಿಸಿದ ಸಿಯುಕೆ, ನೇಮಕಾತಿ, ಹಣಕಾಸು ಮತ್ತು ನಿಧಿ ನಿರ್ವಹಣೆ, ದಂಡ ಹಾಗೂ ಲೆಕ್ಕಪರಿಶೋಧನೆಗೆ ಸಂಬಂಧಿಸಿದ ಅಂಶಗಳತ್ತ ಜೆಪಿಸಿಯ ಗಮನ ಸೆಳೆಯಿತು.
ಜಂಟಿ ಸಂಸದೀಯ ಸಮಿತಿಯು (ಜೆಪಿಸಿ) ಅಧ್ಯಕ್ಷರಾದ ದಗ್ಗುಬಾಟಿ ಪುರಂದೇಶ್ವರಿ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರನ್ನು ಒಳಗೊಂಡಿದೆ.
ಸಭೆಯಲ್ಲಿ ಜೆಪಿಸಿ ಸದಸ್ಯರಾದ ವಿವೇಕ ಠಾಕೂರ, ಇ.ಟಿ.ಮೊಹಮ್ಮದ್ ಬಶೀರ್,ಭರತ್ ಮತುಕುಮಿಲಿ, ವಂಶಿಕೃಷ್ಣ ಗದ್ದಂ ಸೇರಿದಂತೆ ಸಂಸತ್ ಸಚಿವಾಲಯದ ಅಧಿಕಾರಿಗಳು, ಕೇಂದ್ರ ಶಿಕ್ಷಣ ಸಚಿವಾಲಯ, ಉನ್ನತ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು, ರಾಜ್ಯ ಸರ್ಕಾರ ಹಾಗೂ ಮತ್ತು ಸಾರ್ವಜನಿಕ ವಲಯದ ಉದ್ಯಮಗಳ (ಪಿ.ಎಸ್.ಯು) ಪ್ರತಿನಿಧಿಗಳು ಭಾಗವಹಿಸಿದ್ದರು.
ಸಿಯುಕೆ ಸಹಾಯಕ ಕುಲಸಚಿವ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಶ್ರೀಕಾಂತ ಕುಸೂರ ಅವರು ವಿಶ್ವವಿದ್ಯಾಲಯದ ನಿಯೋಗದೊಂದಿಗೆ ಸಭೆಯಲ್ಲಿ ಉಪಸ್ಥಿತರಿದ್ದರು.