Home ಜಿಲ್ಲೆ ಕಲಬುರಗಿ ಕೆಬಿಎನ್ ವಿವಿ : ರಾಷ್ಟೀಯ ಗ್ರಂಥಪಾಲಕರ ದಿನ ಆಚರಣೆ

ಕೆಬಿಎನ್ ವಿವಿ : ರಾಷ್ಟೀಯ ಗ್ರಂಥಪಾಲಕರ ದಿನ ಆಚರಣೆ

ಕಲಬುರಗಿ: ನಗರದ ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ಕೇಂದ್ರ ಗ್ರಂಥಾಲಯದಲ್ಲಿ ಪದ್ಮಶ್ರೀ ಡಾ. ಎಸ್ ಆರ್ ರಂಗನಾಥ ಅವರ 134 ನೇಯ ಜನ್ಮದಿನಾಚರಣೆಯ ಅಂಗವಾಗಿ ಇತ್ತೀಚಿಗೆ ರಾಷ್ಟೀಯ ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸಲಾಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕರ್ನಾಟಕ ಕೇಂದ್ರೀಯ ವಿವಿಯ ಗ್ರಂಥಪಾಲಕ ಡಾ. ಪರಶುರಾಮ ಕಟ್ಟಿಮನಿ ಆಗಮಿಸಿದ್ದರು. ರಂಗನಾಥ ಅವರ ಜೀವನ ಪಯಣ, ಗ್ರಂಥಾಲಯಕ್ಕೆ ಅವರ ಕೊಡುಗೆಗಳನ್ನು ಹಾಗೂ ಗ್ರಂಥಾಲಯದ ಪಂಚ ಸೂತ್ರಗಳನ್ನು ವಿವರಿಸಿದರು. ಗ್ರಂಥಾಲಯ ಜ್ಞಾನದ ಭಂಡಾರ ಅದನ್ನು ಅಭಿವೃದ್ಧಿಪಡಿಸುತ್ತೇಲೆ ಇರಬೇಕು ಎಂದರು.

ವಿವಿಯ ಸಮ ಉಪಕುಲಪತಿ ಡಾ. ಅಶಫಾಕ್ ಅಹ್ಮದ ಇವರು ವಿದ್ಯಾರ್ಥಿಗಳಿಗೆ ಪುಸ್ತಕ ಓದುವಂತೆ ಪ್ರೇರೆಪಿಸಿದರು. ಗ್ರಂಥಾಲಯವೆಂದರೆ ಕೇವಲ ಕಾಗದ ಮತ್ತು ಅಂಟುಗಳಿಂದ ತುಂಬಿದ ಕೋಣೆಯಲ್ಲ. ಮೊಬೈಲ್ ನಲ್ಲಿ ಸಮಯ ವ್ಯರ್ಥ ಮಾಡುವುದು ಸಲ್ಲ ಎಂದರು.

ಮೆಡಿಕಲ್ ಡೀನ್ ಡಾ. ಗುರು ಪ್ರಸಾದ ಪುಸ್ತಕ ಓದುವುದರ ಮಹತ್ವ ಹೇಳಿದರು. ಸಯ್ಯದ ಖಾಜಿ ಅನ್ಸಾರಿ ಪ್ರಾರ್ಥಿಸಿದರು. ವಿವಿಯ ಗ್ರಂಥಪಾಲಕ ಡಾ. ಸರ್ಮಸ್ಥ ಸ್ವಾಗತಿಸಿದರು. ಡಾ ಮೊಹಮ್ಮದ್ ಯೂನುಸ್ ಅಲಿ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ವಿನುತಾ ನಿರೂಪಿಸಿದರು.

ಡೀನರಾದ ಡಾ. ಇಕ್ಬಾಲ್ ಮಟ್ಟು, ಡಾ. ಶ್ರೀನಿವಾಸ, ಸಹಾಯಕ ಡೀನ್ ಡಾ. ಮಾರೋಫ, ಡಾ. ಸಿದ್ಧೇಶ್ ಸಿರವಾರ, ಡಾ. ಬಿಲಾಲ, ಭಾಷಾ, ಕಲಾ, ವಿಜ್ಞಾನ ನಿಕಾಯದ ಎಲ್ಲ ಉಪನ್ಯಾಸಕರು ಹಾಜರಿದ್ದರು.