Home ಜಿಲ್ಲೆ ವಾರ್ಷಿಕ ಸರ್ವ ಸಾಧಾರಣ ಸಭೆ

ವಾರ್ಷಿಕ ಸರ್ವ ಸಾಧಾರಣ ಸಭೆ


ಧಾರವಾಡ,ಆ.೧೫: ಧರಣಿ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ, ಧಾರವಾಡದ ೨೦೨೫?೨೬ನೇ ಸಾಲಿನ ೧೧ನೇ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಅಧ್ಯಕ್ಷರಾದ ಮಹೇಶ ಶೆಟ್ಟಿ ಅವರು ಉದ್ಘಾಟಿಸಿ ಮಾತನಾಡಿ, ಸಂಸ್ಥೆಯು ಸದಸ್ಯರ ವಿಶ್ವಾಸ ಹಾಗೂ ಸಹಕಾರದಿಂದ ನಿರಂತರವಾಗಿ ಪ್ರಗತಿಯತ್ತ ಸಾಗುತ್ತಿದೆ. ಮುಂದಿನ ದಿನಗಳಲ್ಲಿಯೂ ಸದಸ್ಯರ ಸಹಕಾರದೊಂದಿಗೆ ಸಂಸ್ಥೆಯನ್ನು ಮತ್ತಷ್ಟು ಬಲಿಷ್ಠವಾಗಿ ಬೆಳೆಸಲಾಗುವುದು ಎಂದರು.


ಸAಸ್ಥೆಯ ಉಪಾಧ್ಯಕ್ಷರು ಹಾಗೂ ಮಾಜಿ ಮಹಾಪೌರರಾದ ಈರೇಶ ಅಂಚಟಗೇರಿ ಅವರು ಮಾತನಾಡಿ, ಸಂಸ್ಥೆಯ ಯಶಸ್ಸಿನಲ್ಲಿ ಸದಸ್ಯರ ವಿಶ್ವಾಸ ಮತ್ತು ಸಹಕಾರವೇ ಪ್ರಮುಖ ಶಕ್ತಿಯಾಗಿದೆ ಎಂದರು.
೨೦೨೫?೨೬ನೇ ಸಾಲಿನಲ್ಲಿ ಸಹಕಾರಿಯು ಉತ್ತಮ ಆರ್ಥಿಕ ಪ್ರಗತಿ ಸಾಧಿಸಿದೆ. ೩೧-೦೩-೨೦೨೫ಕ್ಕೆ ?೫,೪೭,೪೩,೦೦೦ ಇದ್ದ ಶೇರು ಬಂಡವಾಳವು ೩೧-೦೩-೨೦೨೬ಕ್ಕೆ ?೫,೪೭,೬೯,೦೦೦ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ನಿಧಿಗಳ ಮೊತ್ತವು ?೨,೬೪,೨೯,೨೩೮.೩೯ರಿಂದ ?೩,೩೨,೫೦,೭೧೫.೭೩ಕ್ಕೆ ಹಾಗೂ ಠೇವಣಿಗಳ ಮೊತ್ತವು ?೧೯,೭೭,೮೦,೧೩೮.೭೫ರಿಂದ ?೨೬,೯೪,೧೩,೬೨೫.೭೫ಕ್ಕೆ ಹೆಚ್ಚಳವಾಗಿದೆ.


ಸಭೆಯಲ್ಲಿ ನಿರ್ದೇಶಕರಾದ ವೀರಣ್ಣ ಯಳಲಿ, ಡಾ. ವೈ.ಬಿ. ಪಾಟೀಲ, ರವೀಂದ್ರ ಶೆಟ್ಟಿ, ಭರತ ಭಂಡಾರಿ, ಶರಣಬಸಪ್ಪ ಸವಡಿ, ಮನೋಜ ಭಂಡಾರಿ, ಕಾರ್ಯನಿರ್ವಾಹಕ ಅಧಿಕಾರಿ ವಸಂತ ಪ್ರಸಾದ ಜಮಾದಾರ, ಪದಾಧಿಕಾರಿಗಳು, ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.