
ಕಲಬುರಗಿ,ನ.29-ಕರ್ನಾಟಕ ಸಂಘಟನಾ ವೇದಿಕೆ ವತಿಯಿಂದ 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕನ್ನಡದ ಹಬ್ಬ, ಸಂಗೀತ, ಉಪನ್ಯಾಸ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ಶನಿವಾರ ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡ ಕನ್ನಡದ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ ಹಾಗೂ ಕನ್ನಡದ ರಾಪರ್ ಎಸ್.ಆರ್.ಎನ್. ಅವರು ಸಂಗೀತ ಕಾರ್ಯಕ್ರಮದ ಮೂಲಕ ನೆರೆದಿದ್ದವರಿಗೆ ಸಂಗೀತ ರಸದೌತಣ ನೀಡಿದರು. ಉಡುಪಿಯಿಂದ ಆಗಮಿಸಿದ್ದ ನಿತಿನ್ ಪೂಜಾರಿ ಅವರು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕøತಿಯ ಕುರಿತು ಉಪನ್ಯಾಸ ನೀಡಿದರು.
ಡಾ.ಸುರೇಶ್ ಶರ್ಮ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಶ್ಯಾಮ್ ಕಂದೇವಾಲ್ ಅವರು ಜ್ಯೋತಿ ಬೆಳಗಿಸಿದರು. ಕಾಂಗ್ರೆಸ್ ಹಿರಿಯ ಮುಖಂಡ ನೀಲಕಂಠರಾವ್ ಮೂಲಗೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಭಿಷೇಕ್ ಬಾಲಾಜಿ ವಹಿಸಿದ್ದರು.
ಉದ್ಯಮಿಗಳಾದ ಯುವರಾಜ್ ರಾಥೋಡ್ ಸೌರಭ ಶಿವಣಕರ್, ಸಿದ್ದು ಬದ್ರಶೆಟ್ಟಿ, ಸಂಪತ್ ಹಿರೇಮಠ, ದೊಡ್ಡಪ್ಪ ಪೂಜಾರಿ ಹುಂಡೆಕಲ್, ರಾಜೇಶ್ವರಿ ಸಾಹು, ವಿಜಯಕುಮಾರ್ ಕಟ್ಟಿಮನಿ, ಜಯಶ್ರೀ ಪಾಟೀಲ್ ಡಾ. ಪಿ.ಎನ್. ರಾವ್, ಅಲ್ಲಮಪ್ರಭು ಮಠಪತಿ, ಸುಪ್ರಿಯ ಮಠಪತಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು ಎಂದು ಕರ್ನಾಟಕ ಸಂಘಟನಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಗುರು ಬಂಡಿ ಅವರು ತಿಳಿಸಿದ್ದಾರೆ.





















