
ಕಲಬುರಗಿ,ನ.29: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು (ಸಿಯುಕೆ) ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದ ಕಾಶಿ ತಮಿಳು ಸಂಗಮಂನ ಐದನೇ ಆವೃತ್ತಿಯ (ಕೆ.ಟಿ.ಎಸ್.5.0) ಉದ್ಘಾಟನಾ ಸಮಾರಂಭದಲ್ಲಿ ವರ್ಚುವಲ್ ಮೂಲಕ ಭಾಗವಹಿಸಿತು.
ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ, ಕುಲಸಚಿವ ಪೆÇ್ರ. ಆರ್. ಆರ್. ಬಿರಾದಾರ, ವಿವಿಧ ನಿಕಾಯಗಳ ಡೀನ್ಗಳು, ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಭಾರತ ಸರ್ಕಾರದ, ಕೇಂದ್ರ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾಗಿರುವ ‘ಕಾಶಿ ತಮಿಳು ಸಂಗಮಂ 5.0 ಕಾರ್ಯಕ್ರಮವು ನವೆಂಬರ್ 28ರಿಂದ ಪ್ರಾರಂಭಗೊಂಡಿದ್ದು,ಡಿಸೆಂಬರ್ 12ರವರೆಗೆ ವಾರಣಾಸಿಯಲ್ಲಿ ನಡೆಯಲಿದೆ. ತಿರುಕ್ಕುರಳ್ ಪಯಿಲ್ವೋಮ್ – ತಿರುಕ್ಕುರಳ್ ಅಭ್ಯಾಸ್ ಕರೇನ್ (ತಿರುಕ್ಕುರಳ್ ಕಲಿಯೋಣ) ಎಂಬುದು ಈ ಆವೃತ್ತಿಯ ವಿಷಯವಾಗಿದೆ.
ಭಾರತ ಸರ್ಕಾರದ ‘ಏಕ್ ಭಾರತ್ ಶ್ರೇಷ್ಠ ಭಾರತ್’ ಉಪಕ್ರಮದ ಭಾಗವಾಗಿರುವ ಈ ಕಾರ್ಯಕ್ರಮವು ಕಾಶಿ ಮತ್ತು ತಮಿಳುನಾಡಿನ ನಡುವಿನ ಪ್ರಾಚೀನ ಸಾಂಸ್ಕೃತಿಕ, ಭಾಷಾ, ಸಾಹಿತ್ಯಿಕ ಹಾಗೂ ಆಧ್ಯಾತ್ಮಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದೆ. ಪ್ರಸಿದ್ಧ ತಮಿಳು ಕವಿ ಹಾಗೂ ತತ್ವಜ್ಞಾನಿ ತಿರುವಳ್ಳುವರ್ ರಚಿಸಿರುವ ‘ತಿರುಕ್ಕುರಳ್’ ಕೃತಿಯಲ್ಲಿನ ಸಾರ್ವಕಾಲಿಕ ಜ್ಞಾನ ಮತ್ತು ಸಾರ್ವತ್ರಿಕ ಮೌಲ್ಯಗಳನ್ನು ದೇಶದ ಯುವ ಪೀಳಿಗೆಗೆ ಪರಿಚಯಿಸುವುದು ಈ ಆವೃತ್ತಿಯ ಪ್ರಮುಖ ಉದ್ದೇಶವಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಭಾರತದ ಗೌರವಾನ್ವಿತ ಉಪರಾಷ್ಟ್ರಪತಿ ಸಿ. ಪಿ. ರಾಧಾಕೃಷ್ಣನ್, ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಗಣ್ಯರು ಮಾತನಾಡಿದರು.
ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ, ಕುಲಸಚಿವ ಪೆÇ್ರ. ಆರ್. ಆರ್. ಬಿರಾದಾರ ಸೇರಿದಂತೆ ವಿವಿಧ ನಿಕಾಯಗಳ ಡೀನ್ಗಳು ಹಾಗೂ ವಿಭಾಗಗಳ ಮುಖ್ಯಸ್ಥರಾದ ಪೆÇ್ರ. ವೆಂಕಟ ರಮಣ ದೊಡ್ಡಿ, ಪೆÇ್ರ. ಬಸವರಾಜ ಎಂ. ಕುಬಕಡ್ಡಿ, ಪೆÇ್ರ. ರಾಜೀವ್ ಶೇಷ ಜೋಶಿ, ಪೆÇ್ರ. ಎಂ. ಪ್ರಶಾಂತ್, ಪೆÇ್ರ. ಚಿಂತಲಪುಡಿ ವಿ. ಸುರೇಶ್, ಪೆÇ್ರ. ಪ್ರಮೋದ್ ಕುಮಾರ್, ಪೆÇ್ರ. ಪ್ರಭಾಕರನ್ ಸೆಲ್ವರಾಜ್, ಪೆÇ್ರ. ಜ್ಞಾನವೇಲ್ ಸೌಂದರರಾಜನ್, ಡಾ. ಬಸವರಾಜ ಎಂ., ಡಾ. ಔದೇಶ್ ಭಟ್, ಡಾ. ಅಶೋಕ್ ಕುಮಾರ್, ಡಾ. ಎಂ. ಶಿವ, ವಿನೋದ್ ಕುಮಾರ್ ತಾಂಡೂರಕರ್ ಹಾಗೂ ಮಂಜು ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕಾರ್ಯಕ್ರಮದ ಸಂಚಾಲಕಿ ಡಾ. ಪಿ. ವೈಷ್ಣವಿ ನಾರಾಯಣಿ ಅವರು ಕಾರ್ಯಕ್ರಮ ಸಂಯೋಜಿಸಿದರು.ಕಾರ್ಯಕ್ರಮವು ವಂದೇ ಮಾತರಂನೊಂದಿಗೆ ಪ್ರಾರಂಭವಾಗಿ ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.




















