Home ಜಿಲ್ಲೆ ಕಲಬುರಗಿ ಇಶಾನ್ ಪಾಠಕ್ ಅಮೋಘ ಶತಕ, ಆದಿತ್ಯ ಪಾಂಡೆ ಮಾರಕ ಬೌಲಿಂಗ್:ಕೆಬಿಎನ್ ಗೋಲ್ಡ್ ಕಪ್ ಫೈನಲ್ಗೆ ಅಲ್-ಬರ್ಕಾತ್...

ಇಶಾನ್ ಪಾಠಕ್ ಅಮೋಘ ಶತಕ, ಆದಿತ್ಯ ಪಾಂಡೆ ಮಾರಕ ಬೌಲಿಂಗ್:ಕೆಬಿಎನ್ ಗೋಲ್ಡ್ ಕಪ್ ಫೈನಲ್ಗೆ ಅಲ್-ಬರ್ಕಾತ್ ಶಾಲೆ ಲಗ್ಗೆ

ಕಲಬುರಗಿ: ಆರಂಭಿಕ ಆಟಗಾರ ಇಶಾನ್ ಪಾಠಕ್ ಅವರ ಭರ್ಜರಿ ಶತಕ, ನಾಯಕ ಮಾನ್ ಸಿಂಘ್ವಿ ಅವರ ಅಜೇಯ ಅರ್ಧಶತಕ ಹಾಗೂ ಆದಿತ್ಯ ಪಾಂಡೆ ಅವರ ನಾಲ್ಕು ವಿಕೆಟ್ಗಳ ಮಾರಕ ಬೌಲಿಂಗ್ ನೆರವಿನಿಂದ ಅಲ್-ಬರ್ಕಾತ್ ಶಾಲಾ ತಂಡವು ಕೆಐಒಸಿ (ಏIಔಅ) ತಂಡವನ್ನು 46 ರನ್ಗಳಿಂದ ಮಣಿಸಿ, ನಗರದ ಸಂತ್ರಾಸವಾಡಿಯ ಕೆಬಿಎನ್ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ‘ಕೆಬಿಎನ್ ಗೋಲ್ಡ್ ಕಪ್-2026’ 50 ಓವರ್ಗಳ ಕ್ರಿಕೆಟ್ ಪಂದ್ಯಾವಳಿಯ ಫೈನಲ್ಗೆ ಭರ್ಜರಿ ಪ್ರವೇಶ ಪಡೆದಿದೆ.
ಶುಕ್ರವಾರ ನಡೆದ ರೋಚಕ ಪಂದ್ಯದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಹಾಗೂ ಕಲಬುರಗಿಯ ಎಸ್.ಎಸ್‍ಸ್ವಿ ಟಿವಿ (SSಗಿಖಿಗಿ) ಮತ್ತು ಜೈ ಭೀಮ್ ಟಿವಿ ವ್ಯವಸ್ಥಾಪಕ ನಿರ್ದೇಶಕರಾದ ಶಂಕರ್ ಕೋಡ್ಲಾ ಅವರು ನಾಣ್ಯ ಚಿಮ್ಮುವ ಮೂಲಕ ಪಂದ್ಯಕ್ಕೆ ಚಾಲನೆ ನೀಡಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಲ್-ಬರ್ಕಾತ್ ಶಾಲಾ ತಂಡಕ್ಕೆ ಆರಂಭಿಕರಾದ ಇಶಾನ್ ಪಾಠಕ್ ಮತ್ತು ಯಜ್ಞೇಶ್ ಮೋರೆ ಮೊದಲ ವಿಕೆಟ್ಗೆ 17 ಓವರ್ಗಳಲ್ಲಿ 97 ರನ್ಗಳ ಭದ್ರ ಬುನಾದಿ ಹಾಕಿಕೊಟ್ಟರು. ಯಜ್ಞೇಶ್ 52 ಎಸೆತಗಳಲ್ಲಿ 3 ಬೌಂಡರಿ ಸಹಿತ 32 ರನ್ ಗಳಿಸಿ ವೀರೇನ್ ಸೀರ್ವಿ ಬೌಲಿಂಗ್ನಲ್ಲಿ ಔಟಾದರೆ, ಇಶಾನ್ ಪಾಠಕ್ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು. ಕೇವಲ 95 ಎಸೆತಗಳನ್ನು ಎದುರಿಸಿದ ಪಾಠಕ್ 16 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್ ನೆರವಿನಿಂದ 117 ರನ್ ಸಿಡಿಸಿ 32ನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಶುಭಂ ಜೈಸ್ವಾಲ್ (17) ಮತ್ತು ಸೂರಜ್ ಚೌಹಾಣ್ (4) ಬೇಗನೆ ನಿರ್ಗಮಿಸಿದರೂ, ನಾಯಕ ಹಾಗೂ ವಿಕೆಟ್ ಕೀಪರ್ ಮಾನ್ ಸಿಂಘ್ವಿ 76 ಎಸೆತಗಳಲ್ಲಿ 6 ಬೌಂಡರಿ ಸಹಿತ ಅಜೇಯ 76 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. ಹಾರ್ದಿಕ್ ಕುಮಾರ್ (13) ಅವರ ಉಪಯುಕ್ತ ಕೊಡುಗೆಯೊಂದಿಗೆ ಅಲ್-ಬರ್ಕಾತ್ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 286 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಕೆಐಒಸಿ ಪರ ವಿವೇಕ್ ಸೀರ್ವಿ (58ಕ್ಕೆ 2) ಹಾಗೂ ವೀರೇನ್ ಸೀರ್ವಿ (61ಕ್ಕೆ 2) ತಲಾ ಎರಡು ವಿಕೆಟ್ ಪಡೆದರು.
287 ರನ್ಗಳ ಕಠಿಣ ಗುರಿ ಬೆನ್ನತ್ತಿದ ಕೆಐಒಸಿ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. 9ನೇ ಓವರ್ನೊಳಗೆ ಆರಂಭಿಕರಾದ ಅದ್ವಿಕ್ ಶ್ರೀನಿವಾಸ್ (7) ಮತ್ತು ಬ್ರಿಯಾನ್ ಥಾಮಸ್ (27) ವಿಕೆಟ್ ಕಳೆದುಕೊಂಡ ತಂಡ 34 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಾಯಕ ರೇಯೆಸ್ ರಾಜ್ ಮಧುಸೂದನ್ (12) ಮತ್ತು ಭವಿತ್ (16) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. 19 ಓವರ್ಗಳ ಅಂತ್ಯಕ್ಕೆ 72 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಹನ್ನಾನ್ ಜಾಕಿ ಅಹ್ಮದ್ (54 ಎಸೆತಗಳಲ್ಲಿ 53 ರನ್) ಹಾಗೂ ಸೂರ್ಯ ಮನೋಜ್ (31) 5ನೇ ವಿಕೆಟ್ಗೆ 59 ರನ್ ಸೇರಿಸಿ ಚೇತರಿಕೆ ನೀಡಿದರು. ಕೆಳಕ್ರಮಾಂಕದಲ್ಲಿ ಆರೀನ್ ಸೇನ್ (28), ಮೋಹನ್ ಚೌಧರಿ (24) ಹಾಗೂ ಜಶ್ (24 ಎಸೆತಗಳಲ್ಲಿ 34 ರನ್) ಹೋರಾಟ ನಡೆಸಿದರಾದರೂ, ಆದಿತ್ಯ ಪಾಂಡೆ (39ಕ್ಕೆ 4) ಪ್ರಮುಖ ಜೊತೆಯಾಟಗಳನ್ನು ಮುರಿದು ಪಂದ್ಯದ ದಿಕ್ಕನ್ನೇ ಬದಲಿಸಿದರು. ಅಂತಿಮ ಹಂತದಲ್ಲಿ ಮೂವರು ಆಟಗಾರರು ರ???ಟ್ ಆಗುವುದರೊಂದಿಗೆ ಕೆಐಒಸಿ 47.1 ಓವರ್ಗಳಲ್ಲಿ 240 ರನ್ಗಳಿಗೆ ಆಲೌಟ್ ಆಯಿತು. Iಷುhಚಿಟಿ ಪಾಠಕ್ ಪಂದ್ಯ ಪುರುಷ ಪ್ರಶಸ್ತಿ ಪಡೆದರು. ಕಾಂಗ್ರೆಸ್ ನಾಯಕ ನೀಲಕಂಠ ಮೂಲಗೆ ಪ್ರಶಸ್ತಿ ಪ್ರಧಾನ್ ಮಾಡಿದರು.