
ಕಲಬುರಗಿ,ನ.29: ನಗರದ ಪ್ರತಿಷ್ಠಿತ ಚಂದ್ರಕಾಂತ ಪಾಟೀಲ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ.) ಶಾಲೆಯಲ್ಲಿ ಶನಿವಾರ 38ನೇ ವಾರ್ಷಿಕ ಕ್ರೀಡಾಕೂಟ ಆಯೋಜಿಸಲಾಯಿತು.
ಮುಖ್ಯ ಅತಿಥಿಗಳಾದ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯ ವಿಧಾನ ಪರಿಷತ್ ಸದಸ್ಯ ಡಾ. ಬಿ. ಜಿ. ಪಾಟೀಲ್ ಹಾಗೂ ಗೌರವಾನ್ವಿತ ಅತಿಥಿ ಎಸ್.ಬಿ. ಪಾಟೀಲ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಕೈಲಾಸ್ ಬಿ. ಪಾಟೀಲ ಅವರು ಕ್ರೀಡಾಜ್ಯೋತಿಯನ್ನು ಪಡೆದು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳು ಮಕ್ಕಳನ್ನು ಉದ್ದೇಶಿಸಿ ಕ್ರೀಡೆಗಳು ಮಕ್ಕಳಲ್ಲಿ ಶಿಸ್ತು, ಸಂಯಮ, ಸಮಯ ಪ್ರಜ್ಞೆ, ನಾಯಕತ್ವದ ಗುಣ, ಸಹಕಾರ ಮನೋಭಾವ ಮೊದಲಾದ ಜೀವನ ಮೌಲ್ಯಗಳನ್ನು ಕಲ್ಪಿಸಿಕೊಡುತ್ತವೆ ಎಂದು ತಿಳಿಸುತ್ತ, ಸೋಲು ಗೆಲುವಿನ ದಾರಿಗೆ ಮುನ್ನುಡಿಯಾದರೆ, ಪರಿಶ್ರಮ ಗೆಲುವಿನ ತಳಹದಿ ಎಂದು ಕ್ರೀಡಾಪಟುಗಳಿಗೆ ಪೆÇ್ರೀತ್ಸಾಹಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲ ಕೆ. ರವಿಕುಮಾರ, ಸಂಯೋಜಕರು, ಶಾಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಮಕ್ಕಳು ಉತ್ಸುಕತೆ ಹಾಗೂ ಹುಮ್ಮಸಿನಿಂದ ಭಾಗವಹಿಸಿದರು. ವಿಜೇತರಿಗೆ ಮುಖ್ಯ ಅತಿಥಿಗಳಿಂದ ಪಾರಿತೋಷಕ ವಿತರಿಸಲಾಯಿತು. ಪೆÇೀಷಕರು ಅಷ್ಟೇ ಉತ್ಸಾಹದಿಂದ ಮಕ್ಕಳನ್ನು ಪೆÇ್ರೀತ್ಸಾಹಿಸಿದರು.




















