Home ಜಿಲ್ಲೆ ಕಲಬುರಗಿ “ಎಸಿಪಿ ದುರ್ಗಾ” ಚಲನಚಿತ್ರದ ಪೋಸ್ಟರ್ ಬಿಡುಗಡೆ

“ಎಸಿಪಿ ದುರ್ಗಾ” ಚಲನಚಿತ್ರದ ಪೋಸ್ಟರ್ ಬಿಡುಗಡೆ

ಕಲಬುರಗಿ,ನ.27: ಎನ್‍ಎಂಆರ್ ಮೂವಿ ಮೇಕರ್ಸ್ ಲಾಂಛನದಡಿ ಮಂಜು ಹೆಜ್ಜಾಲ ಅವರು ನಿಮಿ9ಸಿ ಎಂಎಸ್ ರವೀಂದ್ರ ಅವರ ನಿರ್ದೇಶನದ “ಎಸಿಪಿ ದುರ್ಗಾ” ಕನ್ನಡ ಚಲನಚಿತ್ರದ ಪೋಸ್ಟರ್ ಬಿಡುಗಡೆ ಸಮಾರಂಭ ಇಂದು ನಗರದ ಪತ್ರಿಕಾಭವನದಲ್ಲಿ ನಡೆಯಿತು.
ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ ಎಂಎಸ್ ರವೀಂದ್ರ ಅವರು ಚಿತ್ರದ ನಿರ್ಮಾಣದ ಬಗ್ಗೆ ಮಾಹಿತಿ ಹಂಚಿಕೊಂಡರು.
ಸುಮಾರು 2- 3 ಕೋಟಿ ವೆಚ್ಚದ “ಎಸಿಪಿ ದುರ್ಗಾ” ಚಲನಚಿತ್ರವು 2027 ರ ಜೂನ್ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.ಗ್ರಾಮೀಣ ಪರಿಸರದ ಚಿತ್ರಕತೆ ಹೊಂದಿರುವ ಈ ಚಲನಚಿತ್ರವು ಎಲ್ಲ ವರ್ಗದ ಪ್ರೇಕ್ಷಕರನ್ನು ತಲುಪುವ ವಿಶ್ವಾಸವಿದೆ.
ಉತ್ತರ ಕರ್ನಾಟಕ ಸೇರಿದಂತೆ ವಿಶೇಷವಾಗಿ ಕಲಬುರಗಿ ಭಾಗದ ಕಲಾವಿದರಿಗೆ ಅವಕಾಶ ನೀಡಲು ಚಿತ್ರ ತಂಡ ತೀರ್ಮಾನ ಕೈಗೊಂಡಿದೆ. ಕಲಬುರಗಿ ಜಿಲ್ಲೆ ಯಡ್ರಾಮಿಯ ಯುವಸಾಹಿತಿ, ಕಲಾವಿದ ಡಾ. ಮಲ್ಲಿಕಾರ್ಜುನ ಆಲಮೇಲ ಅವರು ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಸಿಪಿಯಾಗಿ ಸುಗುಣಾ, ಕಮಿಷನರ್ ಆಗಿ ಕಾಡಯ್ಯ ಹಿರೇಮಠ ಸ್ವಾಮೀಜಿ, ಎಂಎಲ್‍ಎ ಆಗಿ ಸೂಗೂರಯ್ಯಸ್ವಾಮಿ ಅವರು ಸೇರಿದಂತೆ ಶೇ 50 ಹೊಸ ಕಲಾವಿದರು, ಶೇ 50 ಹಳೆಯ ಕಲಾವಿದರು ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಕಲಬುರಗಿಯ ಕಲಾಭಿಮಾನಿಗಳ ಆಶೀರ್ವಾದ ಪಡೆದು ಚಿತ್ರೀಕರಣ ಆರಂಭಿಸಲಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಂಜು ಹೆಜ್ಜಾಲ ,ಡಾ. ಮಲ್ಲಿಕಾರ್ಜುನ ಆಲಮೇಲ ಯಡ್ರಾಮಿ,ಕಾಡಯ್ಯ ಹಿರೇಮಠ ಸ್ವಾಮೀಜಿ,ಸುಗುಣ,ದಿವ್ಯಾ,ಆಶಾ,ಸೂಗೂರಯ್ಯಸ್ವಾಮಿ,ವಿನೋದ ಅವರು ಸೇರಿದಂತೆ ಹಲವರಿದ್ದರು.