
ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದ ನಾಲ್ಕು ದಿನಗಳ ವಾರ್ಷಿಕ ಕ್ರೀಡಾಕೂಟದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಸೋಮೇಶ್ವರ ಹಾಗೂ ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (ಬಿಬಿಎ-ಸಹಶಿಕ್ಷಣ) ವಿಭಾಗದ ರಮ್ಯಾ ಪ್ರಥಮ ಸ್ಥಾನ ಗಳಿಸುವ ಮೂಲಕ ಪುರುಷ ಮತ್ತು ಮಹಿಳಾ ವಿಭಾಗಗಳ ಅತ್ಯಂತ ವೇಗದ ಓಟಗಾರರಾಗಿ ಹೊರಹೊಮ್ಮಿದರು. ಗುರುವಾರ ಕಲಬುರಗಿ ನಗರದ ಶರಣಬಸವ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಸಮಾಪನಗೊಂಡಿತು.
ಪುರುಷರ 100 ಮೀಟರ್ ಓಟದಲ್ಲಿ ಸೋಮೇಶ್ವರ ಕೇವಲ 11 ಸೆಕೆಂಡುಗಳಲ್ಲಿ ಗುರಿ ತಲುಪಿ ದಾಖಲೆ ನಿರ್ಮಿಸಿದರು. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಸಿದ್ದಣ್ಣ ದ್ವಿತೀಯ ಹಾಗೂ ಆರ್ಕಿಟೆಕ್ಚರ್ ವಿಭಾಗದ ಅರ್ನೆಶ್ ತೃತೀಯ ಸ್ಥಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ರಮ್ಯಾ 15 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರು. ಬಿ. ಫಾರ್ಮಸಿ ವಿಭಾಗದ ಅಂಕಿತಾ ದ್ವಿತೀಯ ಹಾಗೂ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ (ಮಹಿಳೆಯರಿಗೆ ಮಾತ್ರ) ವಿಭಾಗದ ಸಂಧ್ಯಾ ತೃತೀಯ ಸ್ಥಾನ ಗಳಿಸಿದರು.
ಪುರುಷರ 200 ಮೀಟರ್ ಓಟದಲ್ಲಿ ಬಿ. ಎಸ್ಸಿ (ಆನರ್ಸ್) ವಿಭಾಗದ ವಿಶಾಲ್ ಚಿನ್ನದ ಪದಕ ಗೆದ್ದರೆ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವೀರೇಶ್ ದ್ವಿತೀಯ ಹಾಗೂ ಬಿ. ಎಸ್ಸಿ (ಆನರ್ಸ್) ವಿಭಾಗದ ಮೊಯಿನ್ ತೃತೀಯ ಸ್ಥಾನ ಪಡೆದರು. ಮಹಿಳೆಯರ 200 ಮೀಟರ್ ಓಟದಲ್ಲಿ ಎಂ.ಬಿ.ಎ. (ಟ್ರಾವೆಲ್ ಆ್ಯಂಡ್ ಟೂರಿಸಂ) ವಿಭಾಗದ ದೇವಿಕಾ ಪ್ರಥಮ ಸ್ಥಾನ ಗಳಿಸಿದರು. ಬಿ.ಬಿ.ಎ. (ಸಹ ಶಿಕ್ಷಣ) ವಿಭಾಗದ ರಮ್ಯಾ ದ್ವಿತೀಯ ಹಾಗೂ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ (ಮಹಿಳೆಯರಿಗೆ ಮಾತ್ರ) ವಿಭಾಗದ ಸಂಧ್ಯಾ ತೃತೀಯ ಸ್ಥಾನ ಪಡೆದರು.
ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳ ಇತರ ಫಲಿತಾಂಶಗಳು:
ಪುರುಷರ ವಿಭಾಗ:
400 ಮೀಟರ್ ಓಟ: ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೇಮಕುಮಾರ ಪ್ರಥಮ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಶಿವಕುಮಾರ ದ್ವಿತೀಯ ಹಾಗೂ ಎನರ್ಜಿ ಇಂಜಿನಿಯರಿಂಗ್ ವಿಭಾಗದ ಧಾನಯ್ಯ ತೃತೀಯ ಸ್ಥಾನ ಪಡೆದರು.
800 ಮೀಟರ್ ಓಟ: ಎನರ್ಜಿ ಇಂಜಿನಿಯರಿಂಗ್ ವಿಭಾಗದ ದಿನೇಶ್ ಪ್ರಥಮ, ಬಿ.ಫಾರ್ಮಸಿ ವಿಭಾಗದ ವಿಕಾಸ್ ದ್ವಿತೀಯ ಹಾಗೂ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಮರಲಿಂಗ ದೊರೆ ತೃತೀಯ ಸ್ಥಾನ ಪಡೆದರು.
ಉದ್ದ ಜಿಗಿತ: ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಸಿದ್ದಣ್ಣ ಪ್ರಥಮ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಕಿರ್ತೆಶ್ ದ್ವಿತೀಯ ಹಾಗೂ ವಿಜಯ್ ತೃತೀಯ ಸ್ಥಾನ ಪಡೆದರು.
ಗುಂಡು ಎಸೆತ: ಎಂ.ಬಿ.ಎ. (ಆಸ್ಪತ್ರೆ ಆಡಳಿತ) ವಿಭಾಗದ ಅಲ್ತಾಫ್ ಪ್ರಥಮ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಜ್ವಲ್ ದ್ವಿತೀಯ ಹಾಗೂ ಬಿ.ಎಸ್ಸಿ (ಆನರ್ಸ್) ವಿಭಾಗದ ಶರಣಕುಮಾರ ತೃತೀಯ ಸ್ಥಾನ ಪಡೆದರು.
ಜಾವೆಲಿನ್ ಎಸೆತ: ಎಂ.ಬಿ.ಎ. (ಆಸ್ಪತ್ರೆ ಆಡಳಿತ) ವಿಭಾಗದ ಅಲ್ತಾಫ್ 38.85 ಮೀಟರ್ ಎಸೆದು ಪ್ರಥಮ, ಬಿ.ಎಸ್ಸಿ (ಆನರ್ಸ್) ವಿಭಾಗದ ಶರಣಕುಮಾರ 37.55 ಮೀಟರ್ ಎಸೆದು ದ್ವಿತೀಯ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಚಿನ್ ಪಾಟೀಲ 34.50 ಮೀಟರ್ ಎಸೆದು ತೃತೀಯ ಸ್ಥಾನ ಪಡೆದರು.
ಚಕ್ರ ಎಸೆತ: ಬಿ.ಎಸ್ಸಿ (ಆನರ್ಸ್) ವಿಭಾಗದ ಶರಣಕುಮಾರ 22.20 ಮೀಟರ್ ಎಸೆದು ಪ್ರಥಮ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಉಜ್ವಲ್ 16.70 ಮೀಟರ್ ಎಸೆದು ದ್ವಿತೀಯ ಹಾಗೂ ಎಂ.ಸಿ.ಎ. ವಿಭಾಗದ ಮೊಹಮ್ಮದ್ ಸಮೀರ್ ಪಟೇಲ್ 16.60 ಮೀಟರ್ ಎಸೆದು ತೃತೀಯ ಸ್ಥಾನ ಗಳಿಸಿದರು.
ಮಹಿಳೆಯರ ವಿಭಾಗ:
400 ಮೀಟರ್ ಓಟ: ಬಿ.ಬಿ.ಎ. (ಮಹಿಳೆಯರಿಗೆ ಮಾತ್ರ) ವಿಭಾಗದ ಸುಕನ್ಯಾ ಪ್ರಥಮ, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ (ಮಹಿಳೆಯರಿಗೆ ಮಾತ್ರ) ವಿಭಾಗದ ಬಿ. ಜಿ. ಲಕ್ಷ್ಮಿ ದ್ವಿತೀಯ ಹಾಗೂ ಬಿ. ಫಾರ್ಮಸಿ ವಿಭಾಗದ ತಮನ್ನಾ ತೃತೀಯ ಸ್ಥಾನ ಪಡೆದರು.
800 ಮೀಟರ್ ಓಟ: ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ (ಮಹಿಳೆಯರಿಗೆ ಮಾತ್ರ) ವಿಭಾಗದ ಸಂಧ್ಯಾ ಪ್ರಥಮ, ಬಿ. ಜಿ. ಲಕ್ಷ್ಮಿ ದ್ವಿತೀಯ ಹಾಗೂ ಜಕ್ಕಮ್ಮ ತೃತೀಯ ಸ್ಥಾನ ಪಡೆದರು.
ಉದ್ದ ಜಿಗಿತ: ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ (ಮಹಿಳೆಯರಿಗೆ ಮಾತ್ರ) ವಿಭಾಗದ ಎಂ. ಸೃಷ್ಟಿ ಪ್ರಥಮ, ಬಿ.ಸಿ.ಎ. (ಸಹ ಶಿಕ್ಷಣ) ವಿಭಾಗದ ಸಾಧನಾ ದ್ವಿತೀಯ ಹಾಗೂ ಸ್ಮಿತಾ ತೃತೀಯ ಸ್ಥಾನ ಗಳಿಸಿದರು.
ಜಾವೆಲಿನ್ ಎಸೆತ: ಬಿ.ಟೆಕ್ (ಸಹಶಿಕ್ಷಣ) ವಿಭಾಗದ ದಾನೇಶ್ವರಿ ಪ್ರಥಮ, ಬಿ.ಎಸ್ಸಿ (ಆನರ್ಸ್) ವಿಭಾಗದ ಭಾವನಾ ದ್ವಿತೀಯ ಹಾಗೂ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಪೂಜಾ ತೃತೀಯ ಸ್ಥಾನ ಪಡೆದರು.
ಗುಂಡು ಎಸೆತ: ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಪೂಜಾ ಬಿ. ಪ್ರಥಮ, ಬಿ. ಫಾರ್ಮಸಿ ವಿಭಾಗದ ಅಂಕಿತಾ ದ್ವಿತೀಯ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಭಕ್ತಿ ತೃತೀಯ ಸ್ಥಾನ ಪಡೆದರು.
ಚಕ್ರ ಎಸೆತ: ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ (ಸಹ ಶಿಕ್ಷಣ) ವಿಭಾಗದ ದಾನೇಶ್ವರಿ 16.90 ಮೀಟರ್ ಎಸೆದು ಪ್ರಥಮ, ಬಿ. ಎಸ್ಸಿ (ಆನರ್ಸ್) ವಿಭಾಗದ ಭಾವನಾ ಬಿ. 13.15 ಮೀಟರ್ ಎಸೆದು ದ್ವಿತೀಯ ಸ್ಥಾನ ಪಡೆದರು. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಭಕ್ತಿ ಹಾಗೂ ಬಿ. ಫಾರ್ಮಸಿ ವಿಭಾಗದ ಅಂಕಿತಾ ತಲಾ 12.50 ಮೀಟರ್ ಎಸೆದು ಜಂಟಿಯಾಗಿ ತೃತೀಯ ಸ್ಥಾನ ಗಳಿಸಿದರು.



















