Home ಜಿಲ್ಲೆ ಕಲಬುರಗಿ ಜಿಮ್ಸ್ ಸಂಸ್ಥೆಯಲ್ಲಿ ಆರನೇ ಪದವಿ ಪ್ರದಾನ ಸಮಾರಂಭ

ಜಿಮ್ಸ್ ಸಂಸ್ಥೆಯಲ್ಲಿ ಆರನೇ ಪದವಿ ಪ್ರದಾನ ಸಮಾರಂಭ

ಕಲಬುರಗಿ,ಜೂ 14: ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್) ಸಂಸ್ಥೆಯ ಆರನೇ ಪದವಿ ಪ್ರದಾನ ಸಮಾರಂಭವು 2020ನೇ ಸಾಲಿನ ನಿರ್ಗಮಿತ ಬ್ಯಾಚ್ ವಿದ್ಯಾರ್ಥಿಗಳಿಗಾಗಿ ನಡೆಯಿತು. ಸುಮಾರು 156 ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಪದವಿಯನ್ನು ಪ್ರದಾನ ಮಾಡಲಾಯಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ,
ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್
ಅವರು ಆಗಮಿಸಬೇಕಾಗಿತ್ತು. ಆದರೆ ಬೆಂಗಳೂರಿನಲ್ಲಿ ಅಧಿಕೃತ ಸಭೆಯ ಕಾರಣ ಅವರು ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ ಆದಾಗ್ಯೂ, ಅವರು ಆನ್‍ಲೈನ್ ಮೂಲಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಯುಕೆಗೆ ಅಧಿಕೃತಭೇಟಿಯಲ್ಲಿರುವ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ನಿರ್ದೇಶಕರಾದ ಡಾ. ಸುಜಾತಾ ರಾಥೋಡ್,ಅವರು ವಿದ್ಯಾರ್ಥಿಗಳಿಗೆಶುಭಾಶಯಗಳನ್ನು ಕೋರಿದರು. ಗೌರವಾನ್ವಿತ ಅತಿಥಿಗಳಾಗಿ ಪ್ರಾಧ್ಯಾಪಕರಾದ ಡಾ. ಪಿ.ಎಸ್. ಶಂಕರ್ ಅವರು ಭಾಗವಹಿಸಿದ್ದರು.
ಅವರು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಉತ್ತಮ ಯಶಸ್ಸನ್ನು ಸಾಧಿಸಲು ಪ್ರೇರೇಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡೀನ್ ಮತ್ತು ನಿರ್ದೇಶಕರಾದ ಡಾ. ಉಮೇಶ್ ಎಸ್.ಆರ್ ಅವರು ವಹಿಸಿದ್ದರು. ಪ್ರಾಂಶುಪಾಲ ಡಾ.ಅಜಯಕುಮಾರ್, ಹಾಗೂ ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ್ ಸಿ.ಆರ್., , ಡಾ. ಸಂದೀಪ ವಿ.ಹೆಚ್ ಮತ್ತು ಎಲ್ಲಾ ಉಪ ವೈದ್ಯಕೀಯ ಅಧೀಕ್ಷಕರು ಉಪಸ್ಥಿತರಿದ್ದರು. ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು,ಅವರ ಪೆÇೀಷಕರು ಹಾಗೂ ಬೋಧಕ ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಡಾ. ಉಮೇಶ್ ಎಸ್.ಆರ್. ಅವರು ಜಿಮ್ಸ್ ವಿದ್ಯಾರ್ಥಿಗಳ ವಿವಿಧ ಸಾಧನೆಗಳು ಹಾಗೂ ಸಂಸ್ಥೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳ ಕುರಿತು ವಿವರಿಸಿದರು.
ಆರೋಗ್ಯ ಕ್ಷೇತ್ರದಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನದ ಮಹತ್ವ ಮತ್ತು ಯುವ ವೈದ್ಯರು ಎದುರಿಸುತ್ತಿರುವ ಸವಾಲುಗಳನ್ನುಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅವರು ಪ್ರಸ್ತಾಪಿಸಿದರು.
14 ವಿಭಾಗಗಳಲ್ಲಿ ವಿಷಯವಾರು ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ. ಸೃಷ್ಟಿಎಸ್. ಶಾಸ್ತ್ರಿ ಅವರು 7 ವಿಷಯಗಳಲ್ಲಿ ಹಾಗೂ 3 ಹಂತಗಳಲ್ಲಿ ಪ್ರಥಮ ಸ್ಥಾನ ಪಡೆದು ವಿಶೇಷ ಸಾಧನೆ
ಮಾಡಿದರು. ಅಂತಿಮ ವರ್ಷದ ಪ್ರಥಮ ಸ್ಥಾನಕ್ಕೆ ಡಾ. ಮೆಹ್ರೀನ್ ನಾಜ್ ಜೆರ್ಡಿ ಅವರಿಗೆ ಪ್ರಶಸ್ತಿ ನೀಡಲಾಯಿತು. ಇಎನ್‍ಟಿ ವಿಭಾಗದ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ರಾಘವೇಂದ್ರ ಮೇಲಕುಂದಿ ಅವರ ಸ್ಮರಣಾರ್ಥ ರೂ ಹತ್ತು ಸಾವಿರ ರೂ ನಗದು ಬಹುಮಾನ ನೀಡಲಾಯಿತು. ಒಟ್ಟಾರೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಯಾಗಿ ಡಾ. ಸೃಷ್ಟಿ ಎಸ್. ಶಾಸ್ತ್ರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.