
ಕಲಬುರಗಿ,ಜೂ.14-ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಮೇಲ್ಛಾವಣಿ ಕುಸಿದು ಬಿದ್ದು ಘಟನೆ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಜಿಲ್ಲಾ ಘಟಕದ ವತಿಯಿಂದ ಕಾಲೇಜಿನ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಹಾಗೂ ಶಿಕ್ಷಣ ಇಲಾಖೆಯ ಅವರಿಗೆ ಪೆÇೀಲೀಸ್ ಇಲಾಖೆ ಮುಖಾಂತರ ಮನವಿ ಸಲ್ಲಿಸಲಾಯಿತು.
ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ತರಗತಿ ನಡೆಸುತ್ತಿದ್ದಾಗಲೇ ಮೇಲ್ಛಾವಣಿ ಕುಸಿದು ಬಿದ್ದು ವಿದ್ಯಾರ್ಥಿನಿಯರು ಗಂಭೀರ ಗಾಯಗೊಂಡ ಆಸ್ಪತ್ರೆಯ ಸೇರಿದ್ದಾರೆ. ಸರ್ಕಾರಿ ಕಾಲೇಜು ಕಟ್ಟಡದ ದುಸ್ಥಿತಿಯಿಂದಾಗಿ ಸುಮಾರ 2000ಕ್ಕೂ ಹೆಚ್ಚು ಬಡ ವಿದ್ಯಾರ್ಥಿನಿಯರ ಪ್ರತಿದಿನ ಆತಂಕದಲ್ಲೇ ಕಲಿಯುವಂತಾಗಿದೆ. ಈಗಾಗಲೇ ತರಗತಿಗಳ ಮೇಲ್ಛಾವಣಿ ಕುಸಿದಿದ್ದು, ಇಡೀ ಕಾಲೇಜಿನ ಕಟ್ಟಡ ಬಿರುಕು ಬಿಟ್ಟಿದೆ. ರಾಜ್ಯ ಸರ್ಕಾರಕ್ಕೆ ಶಿಕ್ಷಣದ ಬಗ್ಗೆ ಯಾಕಿಷ್ಟು ನಿರ್ಲಕ್ಷ್ಯ ,ಅಧಿಕಾರಗಳ ಬೇಜವಾಬ್ದಾರಿಗೆ ವಿದ್ಯಾರ್ಥಿನಿಯರ ಜೀವ ಬಲಿಯಾಗಬೇಕೇ ? ರಾಜ್ಯದಲ್ಲಿ ಶಾಲಾ ಕಾಲೇಜುಗಳು ಪ್ರಾರಂಭವಾಗಿವೆ. ಆದರೆ ವಿದ್ಯಾರ್ಥಿಳಿಗೆ ಪಾಠ ಕೇಳುವುದಕ್ಕೆ ಕೊಠಡಿಯಗಳಿಲ್ಲ, ಮೂಲಭೂತ ಸೌಕರ್ಯ ಕೇಳವುಬೇಡ. ಆ ಮಟ್ಟಕ್ಕೆ ಶಾಲಾ ಕಾಲೇಜುಗಳು ಪರಿಸಿತ್ಥಿ ಇದೆ. ರಾಜ್ಯದಲ್ಲಿ 1,200ಕ್ಕೂ ಹೆಚ್ಚು ಸರ್ಕಾರಿ ಪದವಿ ಪೂರ್ವ ಕಾಲೇಜಿಗಳ ಪರಿಸಿತ್ಥಿ ಒಮ್ಮೆ ಮುಖ್ಯಮಂತ್ರಿಯವರು ನೋಡಬೇಕು ಇದಕ್ಕೆ ಈ ಕಟ್ಟಡದ ಗುತ್ತಿಗೆದಾರ ಮೇಲೆ ಪ್ರಕರಣ ದಾಖಲಿಸಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಕಟ್ಟಡ ಪರಿಶೀಲಿಸಿ ವಿದ್ಯಾರ್ಥಿನಿಯರ ಸುರಕ್ಷತೆಗೆ ತಕ್ಷಣ ಕ್ರಮ ಕೈಗೊಳ್ಳುಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ರಾಜ್ಯಕಾರ್ಯಕಾರಣಿ ಸದಸ್ಯರಾದ ಶ್ರವಣ,ರಾಜ್ಯ ಕಾರ್ಯ ಕಾರಣಿ ಸದಸ್ಯರಾದ ಸಿದ್ದಲಿಂಗ ತಳವಾರ,ಕುಮಾರಿ ನಂದಾ ನಗರ ವಿದ್ಯಾರ್ಥಿನಿ ಪ್ರಮುಖ ,ಹೋರಾಟ ಪ್ರಮುಖರಾದ ಅವಿನಾಶ ಗುತ್ತಿದಾರ, ಶಿವು ಸಜ್ಜನ, ಅಭಿಷೇಕ ಪಾಟೀಲ್,ಸಂದೇಶ,ರಾಚಪ್ಪ ಹಾಗೂ ಕಾಲೇಜಿನ ವಿದ್ಯಾರ್ಥಿನಿಯರು ಇದ್ದರು.


























