
ಕಲಬುರಗಿ,ಜೂ.14-ಸಂಗೀತವು ಮನಸ್ಸಿಗೆ ನೆಮ್ಮದಿ ನೀಡುವುದರ ಜೊತೆಗೆ ರೋಗಮುಕ್ತಿಗೂ ಸಹಕಾರಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೆಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆಯೊಂದಿಗೆ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಇದರಿಂದ ರೋಗಿಗಳಿಗೆ ಮಾನಸಿಕ ಶಾಂತಿ ದೊರೆಯುತ್ತದೆ ಎಂದು ಪೆÇ್ರ.ಶಿವರಾಜ ಪಾಟೀಲ ಹೇಳಿದರು.
ನಗರದ ಆರಾಧನಾ ಪಿಯು ಕಾಲೇಜಿನಲ್ಲಿ ಪಾಳಾದ ಶ್ರೀ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ರಮಾತಾಯಿ ನಾಟಕ ಮತ್ತು ಸಂಗೀತ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕ ಭಾಗವು ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಶ್ರೀಮಂತ ಪರಂಪರೆಯನ್ನು ಹೊಂದಿದ್ದು, ಸಂಗೀತದ ಮೂಲಕ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಆರಾಧನಾ ಪಿಯು ಕಾಲೇಜಿನ ಪ್ರಾಚಾರ್ಯ ಚೇತನಕುಮಾರ್ ಗಾಂಗಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನೀಲೂರಿನ ಶರಣಯ್ಯ ಸ್ವಾಮಿಗಳು ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಗೀತವನ್ನೂ ಆಲಿಸಬೇಕು. ಇದರಿಂದ ಓದಿನತ್ತ ಹೆಚ್ಚಿನ ಆಸಕ್ತಿ ಮತ್ತು ಉಲ್ಲಾಸ ಮೂಡುತ್ತದೆ ಎಂದು ಹೇಳಿದರು.
ಸಾಹಿತಿ ವಿಶ್ವನಾಥ ಭಕರೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಟೀಲ ಪಾಳಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮರಲಿಂಗ ತಂಡದವರಿಂದ ನಾಟಕ ಪ್ರದರ್ಶನ ನಡೆಯಿತು. ಸಂಗೀತಗಾರರಾದ ಅಣ್ಣಾರಾಯ ಮತ್ತಿಮಡು, ಸೈದಪ್ಪ ಚೌಡಾಪೂರ, ನಾಗಲಿಂಗಯ್ಯ ಸ್ಥಾವರಮಠ, ನಾಗೇಂದ್ರ ಸಪ್ಪನಗೋಳ, ಶಿವರಾಜ ಪಾಟೀಲ, ನಿರ್ಮಲ ಕೋಣೆ, ಶಿವಶರಣಯ್ಯ ಲಿಂಗದಳ್ಳಿ ಹಾಗೂ ವಿನೋದ ದಸ್ತಾಪೂರರವರು ಜನರ ಮನಮುಟ್ಟುವಂತೆ ಹಾಡುಗಳನ್ನು ಹಾಡಿದರು. ಶ್ರೀಶೈಲ್ ಕೊಂಡೇದ ಮತ್ತು ಅನೀಲ ಮಠಪತಿ ಹಾರ್ಮೋನಿಯಂ ಸಾಥ್ ನೀಡಿದರೆ, ಮೌನೇಶ್ ಪಂಚಾಳ ಹಾಗೂ ಶಿವರಾಯ ಕೊಡ್ಲಿ ತಬಲಾ ಸಾಥ್ ನೀಡಿದರು.
ಕಾರ್ಯಕ್ರಮದಲ್ಲಿ ಸಂಗೀತಾಸಕ್ತರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಅಂಬಾರಾಯ ಕೊಣೆ ಸ್ವಾಗತಿಸಿದರು. ನಾಗಲಿಂಗಯ್ಯ ಸ್ಥಾವರಮಠ ಕಾರ್ಯಕ್ರಮ ನಿರೂಪಿಸಿದರು. ಶಿವಯೋಗಿ ಭಜಂತ್ರಿ ವಂದಿಸಿದರು.


























