Home ಜಿಲ್ಲೆ ಕಲಬುರಗಿ ಸರ್ಕಾರಿ ಬಾಲಕಿಯರ ಕಾಲೇಜು ಕಟ್ಟಡದ ಮೇಲ್ಚಾವಣಿ ಕುಸಿತಕ್ಕೆ ಕಳಪೆ ಕಾಮಗಾರಿ ಕಾರಣ

ಸರ್ಕಾರಿ ಬಾಲಕಿಯರ ಕಾಲೇಜು ಕಟ್ಟಡದ ಮೇಲ್ಚಾವಣಿ ಕುಸಿತಕ್ಕೆ ಕಳಪೆ ಕಾಮಗಾರಿ ಕಾರಣ

ಕಲಬುರಗಿ,ಜೂ.14-2016 ರಲ್ಲಿ ನಿರ್ಮಾಣವಾಗಿರೋ ಕಟ್ಟಡ 8 ವರ್ಷದಲ್ಲೇ ಹೀಗೆಲ್ಲಾ ಚಾವಣಿ ಕುಸಿದು ಮಕ್ಕಳ ಪ್ರಾಣಕ್ಕೆ ಕುತ್ತಾಗಿದೆ. ಈ ಪ್ರಕರಣದ ಸಂಪೂರ್ಣ ತನಿಖೆಗೆ ತಾವು ಜಿಪಂ ಸಿಇಓ, ಡೀಸಿಯವರಿಗೆ ಸೂಚಿಸಿರೋದಾಗಿ ಶಾಸಕ ಅಲ್ಲಂಪ್ರಭು ಪಾಟೀಲ್ ಹಳಿದ್ದಾರೆ.
ಗಾಯಗೊಂಡ ಶೀತಲ್, ಸ್ನೇಹಾ, ದಿವ್ಯಾ ಸೇರಿದಂತೆ ಹಲವರು ವಿದ್ಯಾರ್ಥಿನಿಯರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ವೈಯಕ್ತಿಕ ತಲಾ 5 ಸಾ. ರು ನ ಸಹಾಯ ಗಾಯಗಂಡವರಿಗೆ ನೀಡಿದ ಶಾಸಕರು ಸರ್ಕಾರಿ ಕಾಲೇಜಿನ ಕಟ್ಟಡ ಕಳಪೆ ಕಟ್ಟಿದ್ದೇ ಅವಘಡಕ್ಕೆ ಕಾರಣವೆಂದು ದೂರಿದರು. ಕಟ್ಟಡ ಕಟ್ಟಿರೋ ಗುತ್ತಿಗೆದಾರರವಿರುದ್ಧ ಕ್ರಮವಾಬೇಕು. ಶೀಘ್ರ ವಿಚಾರಣೆ ನೆಡೆಸಿ ಕಳಪೆತನಕ್ಕಿರೋ ಕಾರಣ ಪತ್ತೆ ಹಚ್ಚುವಂತೆ ಶಾಸಕರು ಸೂಚಿಸಿದ್ದಾರೆ.
ಪಾಠ ನಡೆಯುವಾಗಲೇ ಮೇಲ್ಚಾವಣಿ ಕುಸಿದಿದೆ, ಇದರಿಂದ 80 ಕ್ಕೂ ಹೆಚ್ಚು ಮಕ್ಕಳು ತರಗತಿ ಕೋಣೆಯಲ್ಲಿದ್ದರು. ಅವರೆಲ್ಲರೂ ಅಪಾಯ ಎದುರಿಸಿದ್ದಾರೆ. ಶಾಲೆಗಳು ಗುಣಮಟ್ಟದ ಕಾಮಗಾರಿಗೆ ತೆರೆದುಕಳ್ಳಬೇಕು. ಇವು ಜೀವತ ದೇವರ ಕೋಣೆಗಳು. ಹೀಗಾಗಿ ಕಳಪೆ ತನದ ಈ ಪ್ರಕರಣಕ್ಕೆ ಸೂಕ್ತ ತನಿಖೆ ಹಾಗೂ ಕಾನೂನು ಕ್ರಮದ ಬಿಸಿ ಮುಟ್ಟಿಸೋ ಮೂಲಕ ಜಿಲ್ಲಾಡಳಿತ, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಶಾಸಕ ಅಲ್ಲಂಪ್ರಭು ಆಗ್ರಹಿಸಿದರು.