Home ಜಿಲ್ಲೆ ಕಲಬುರಗಿ ಮನೆ ಬಾಗಿಲಿಗೆ ಉದ್ಯೋಗ : ಚಿದಂಬರ ಪಾಟೀಲ

ಮನೆ ಬಾಗಿಲಿಗೆ ಉದ್ಯೋಗ : ಚಿದಂಬರ ಪಾಟೀಲ

ಜೇವರ್ಗಿ : ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ ಆಂಡ್ ಆಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ ಆಗಸ್ಟ್ 15 ರಿಂದ ಸೆಪ್ಟೆಂಬರ್ 15 ರವರೆಗೆ ಜಾಬ್ ಕಾರ್ಡ್ ಮೇಳ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಅಕುಶಲ ಕೂಲಿಕಾರರು ಜಾಬ್ ಕಾರ್ಡ್ ಪಡೆದು ಉದ್ಯೋಗದ ಭದ್ರತೆ ಪಡೆದುಕೊಳ್ಳಬೇಕೆಂದು ತಾಲೂಕ ಐಇಸಿ ಸಂಯೋಜಕರಾದ ಚಿದಂಬರ ಪಾಟೀಲ್ ಕರೆ ನೀಡಿದರು.

ತಾಲೂಕಿನ ಗಂವ್ಹಾರ ಗ್ರಾಮ ಪಂಚಾಯತಿಯ ಗಂವ್ಹಾರ ಗ್ರಾಮದಲ್ಲಿ ಬುಧವಾರ ಜಾಬ್ ಕಾರ್ಡ್ ಮೇಳ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದೆ ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ನೋಂದಣಿಯಾಗದ ಕುಟುಂಬಗಳಿಗೆ ಇದೀಗ ವಿಬಿ- ಜಿ ರಾಮ್ ಜಿ ಯೋಜನೆಯಡಿ ಹೊಸದಾಗಿ “ಗ್ಯಾರಂಟಿ ರೋಜ್ಗಾರ್ ಕಾರ್ಡ್” ಮಾಡಿ ಕೊಡಲಾಗುವುದು ಎಂದರು.

ಮನೆ-ಮನೆಗೆ ಭೇಟಿ / ಬೇಡಿಕೆಗಳ ಸ್ವೀಕಾರ : ಗ್ರಾ.ಪಂ ಸಿಬ್ಬಂದಿಗಳು ಮನೆ -ಮನೆಗೆ ಭೇಟಿ ಮಾಡಿದ ಸಂದರ್ಭದಲ್ಲಿ ಜಾಬ್ ಕಾರ್ಡ್ ನೋಂದಣಿಯಾಗದ ಕುಟುಂಬಗಳು ನಮೂನೆ-1ರಲ್ಲಿ ಮಾಹಿತಿ ಭರ್ತಿ ಮಾಡಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಮತ್ತು ರೇಷನ್ ಕಾರ್ಡ್ ದಾಖಲೆಗಳನ್ನು ಸಲ್ಲಿಸಿದರೆ 15 ದಿನಗಳೊಳಗೆ ಗ್ರಾಮ ಪಂಚಾಯತಿಯಿಂದ ಜಾಬ್ ಕಾರ್ಡ್ ವಿತರಿಸಲಾಗುವುದು. ಇನ್ನೂ ವಿಶೇಷ ಚೇತನರಿಗೆ, ಮಹಿಳಾ ಪ್ರಧಾನ ಕುಟುಂಬ ಮತ್ತು ಲಿಂಗತ್ವ ಅಲ್ಪ ಸಂಖ್ಯಾತರಿಗೆ ವಿಶೇಷ “ಗ್ಯಾರಂಟಿ ರೋಜ್ಗಾರ್ ಕಾರ್ಡ್” ನ್ನು
ಕೊಡಲಾಗುವುದು.

ವಿಬಿ-ಜಿ ರಾಮ್ ಜಿ ಯೋಜನೆಯಡಿ ನೋಂದಾಯಿತ ಅಕುಶಲ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ 125 ದಿನಗಳು ಕೆಲಸ ಕೊಡಲಾಗುವುದು. ಗಂಡು-ಹೆಣ್ಣಿಗೆ ಸಮಾನ ಕೂಲಿ, ಪ್ರತಿ ಮಾನವ ದಿನಕ್ಕೆ ರೂ.- 382 ಕೂಲಿ ಮೊತ್ತ. ಕೊಡಲಾಗುವುದು.
ಯೋಜನೆಯಡಿ 318 ಅನುಮೋದಿತ ಕಾಮಗಾರಿಗಳಿದ್ದು, ಪರಿಶೀಷ್ಟ ಜಾತಿ -ಪರಿಶೀಷ್ಟ ಪಂಗಡ, ಮಹಿಳೆಯರು, ವಿಶೇಷ ಚೇತನರು, ಲಿಂಗತ್ವ ಅಲ್ಪಸಂಖ್ಯಾತರು, ದುರ್ಬಲ ವರ್ಗದವರು, ರೈತರು ಮತ್ತು ಅತೀ ಸಣ್ಣ ರೈತರಿಗೆ ಯೋಜನೆಯಡಿ ಹೆಚ್ಚಿನ ಪ್ರಧಾನ್ಯತೆ ನಿಡಿದ್ದು, ಕೆಲಸದ ಬೇಡಿಕೆ ಅರ್ಜಿ ನಮೂನೆ- 6 ಸಲ್ಲಿಸಿದರೆ, 15 ದಿನದೊಳಗೆ ಕೆಲಸ ಒದಗಿಸಲಾಗುವುದು ಎಂದರು.
ನಂತರ ತಾಂತ್ರಿಕ ಸಹಾಯಕ ಇಂಜಿನಿಯರ್ ಸ್ನೇಹಿತ ಹರ್ನಾಳ ಅವರು ಮಾತನಾಡಿ ಗ್ರಾಮೀಣ ಕುಟುಂಬಗಳ ಜೀವನೋಪಾಯಕ್ಕೆ ಭದ್ರತೆ ಕಲ್ಪಿಸಲು ಜೀವನೋಪಾಯ ಕಾಮಗಾರಿಗಳು, (ಜಾನುವಾರು ಶೆಡ್) ತೋಟಗಾರಿಕೆ ಬೆಳೆ, ಬರ ನಿರ್ವಹಣೆ ಮತ್ತು ಜಲ ಸಂರಕ್ಷಣೆ (ಕೃಷಿ ಹೋಂಡಾ)ಅಂತಹ ಕಾಮಗಾರಿಗಳು ಯೋಜನೆಯಡಿ ಅನುಷ್ಠಾನಗೊಳಿಸಲು ಅವಕಾಶವಿದ್ದು, ಅರ್ಹ ಕುಟುಂಬಗಳು ಇದರ ಲಾಭ ಪಡೆದುಕೊಳ್ಳಬೇಕೆಂದು ಹೇಳಿದರು.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಸಂತ ಕಬಾಡೆ ಅಭಿಯಾನಕ್ಕೆ ಚಾಲನೆ ನೀಡಿ, ಆಗಸ್ಟ್ 15ರಿಂದ ಸೆಪ್ಟೆಂಬರ್ 15 ರವರೆಗೆ ಜಾಬ್ ಕಾರ್ಡ್ ಮೇಳ ನಡೆಯುತ್ತಿದ್ದು, ಕೂಲಿಕಾರ್ಮಿಕರು ಸಕ್ರಿಯವಾಗಿ ಭಾಗವಹಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಬಳಿಕ ಜಾಬ್ ಕಾರ್ಡ್ ಜಾಗೃತಿ ವಾಹನದ ಮೂಲಕ ಗ್ರಾಮದ ಎಲ್ಲ ಬಿದಿಗಳಲ್ಲಿ ಜಿಂಗಲ್ಸ್ ಮೂಲಕ ಪ್ರಚಾರ ಮಾಡಲಾಯಿತು.

ಅಭಿಯಾನದಲ್ಲಿ ಕಾರ್ಯದರ್ಶಿ ಮಲ್ಲಿನಾಥ್, ಡಿಇಒ ಪಾರ್ವತಿ, ಕರ ವಸೂಲಿಗಾರ ವಿಲಾಸ್ ಗೌಡ, ಜಗನಾಥ್, ಕಾಯಕ ಬಂಧು ಜೈ ಭೀಮ್, ಮತ್ತು ಗ್ರಾಮಸ್ಥರು ಅಭಿಯಾನದಲ್ಲಿ ಭಾಗವಹಿಸಿದ್ದರು.


ಕೂಲಿ ಕಾರ್ಮಿಕರು ಕೆಲಸ ಅರಸಿಕೊಂಡು ದೂರದ ನಗರಗಳಿಗೆ ವಲಸೆ ಹೋಗದೆ ಇದ್ದುರಲ್ಲೇ ವಿಬಿ – ಜಿ ರಾಮ್ ಜಿ ಯೋಜನೆಯಡಿ ಕೂಲಿ ಕೆಲಸ ಮಾಡಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಿ.

ಚಿದಂಬರ ಪಾಟೀಲ್ –
ಐಇಸಿ ಸಂಯೋಜಕರು ತಾ. ಪಂ ಜೇವರ್ಗಿ