
ವಾಷಿಂಗ್ಟನ್,ಮೇ.೨೫- ಸಂಘರ್ಷಕ್ಕೆ ಅಂತ್ಯ ಹಾಡುವ ಹಿನ್ನೆಲೆಯಲ್ಲಿ ಇರಾನ್ ಜೊತೆ ಒಪ್ಪಂದ ಮುಕ್ತಾಯಗೊಂಡಿದೆ. ಒಪ್ಪಂದ ನಿಯಮಗಳನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು ಎಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಲ್ಟಾ ಹೊಡೆದಿದ್ದಾರೆ.
ಇರಾನ್ ಜೊತೆ ಒಪ್ಪಂದ ಮಾಡಿಕೊಳ್ಳಲು ಯಾವುದೇ ಕಾರಣಕ್ಕೂ ಆತುರ ಪಡಬೇಡಿ ಎಂದು ಅಮೆರಿಕದ ಸಂಧಾನಕಾರರಿಗೆ ಸಂದೇಶ ರವಾನಿಸಿದ್ದಾರೆ, ಹೀಗಾಗಿ ಕ್ಷಣಕ್ಕೊಂದು ಗಳಿಗೆಗೊಂದು ಹೇಳಿಕೆ ನೀಡುತ್ತಾ ಮತ್ತಷ್ಟು ಗೊಂದಲಕ್ಕೆ ಸಿಲುಕಿಸುವ ಪ್ರಯತ್ನ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು ಇರಾನ್ ಜೊತೆ ಚರ್ಚೆಯಲ್ಲಿರುವ ಒಪ್ಪಂದ ೬೦ ದಿನಗಳ ಕದನ ವಿರಾಮ ವಿಸ್ತರಣೆ, ಹೋರ್ಮುಜ್ ಜಲಸಂಧಿ ಮತ್ತೆ ತೆರೆಯುವುದು ಮತ್ತು ಇರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ಹೆಚ್ಚಿನ ಮಾತುಕತೆಗಳ ಯೋಜನೆ ಒಳಗೊಂಡಿದೆ ಎಂದು ಹೇಳಿ ಈಗ ಒಪ್ಪಂದ ಮಾಡಿಕೊಳ್ಳಲು ಆತುರ ಪಡಬೇಡಿ ಎಂದಿದ್ದಾರೆ.
ಇರಾನ್ ಜೊತೆ “ರಚನಾತ್ಮಕ” ಮಾತುಕತೆಗಳು ನಡೆಯುತ್ತಿವೆ. ಆದರೆ “ಎರಡೂ ಕಡೆಯವರು ತಮ್ಮ ಸಮಯವನ್ನು ತೆಗೆದುಕೊಂಡು ಅದನ್ನು ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು, ಹೀಗಾಗಿ ಅಮೆರಿಕ ಸಂಧಾನಕಾರರು ಆತುರ ಪಡಬೇಡಿ ಎಂದು ಹೇಳಿದ್ದಾರೆ.
ಶಾಂತಿ ಒಪ್ಪಂದದ ಕುರಿತು “ಹೆಚ್ಚಾಗಿ ಮಾತುಕತೆ ನಡೆಸಲಾಗಿದೆ.”, ಈ ಬಗ್ಗೆ ಶೀಘ್ರ ಘೋಷಣೆ ಮಾಡಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ವಿದೇಶಾಂಗ ಕಾರ್ಯದರ್ಶಿ ಮಾರ್ಕ್ ರುಬಿಯೋ ಹೇಳಿದ್ದರು.
ಇರಾನಿನ ಅಧಿಕಾರಿಗಳು ವಾರಾಂತ್ಯದಲ್ಲಿ ಮಾತುಕತೆಗಳಲ್ಲಿ ಪ್ರಗತಿ ನಡೆಯುತ್ತಿದೆ, ಅಮೆರಿಕದ ಷರತ್ತು ಒಪ್ಪಲು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ ಹೇಳಿದ್ದರು.
ಅಮೆರಿಕದ ಮಾಧ್ಯಮಗಳ ಪ್ರಕಾರ, ಚರ್ಚಿಸಲಾದ ಒಪ್ಪಂದ ಅಂತಿಮ ಇತ್ಯರ್ಥವಲ್ಲ, ಬದಲಾಗಿ ಕೆಲವು ಕಠಿಣ ಸಮಸ್ಯೆ ನಂತರ ಮಾತುಕತೆಯಿಂದ ಹಿಂದೆ ಸರಿಯಲಾಗಿದೆ. ಇರಾನ್‌ನ ನಿರ್ಬಂಧಗಳ ಪರಿಹಾರಕ್ಕಾಗಿ ಬೇಡಿಕೆ, ಹೆಪ್ಪುಗಟ್ಟಿದ ಇರಾನಿನ ನಿಧಿಗಳನ್ನು ಬಿಡುಗಡೆ ಮಾಡಬೇಕೆಂಬ ಕರೆಗಳು ಮತ್ತು ಇರಾನ್ ತನ್ನ ಪರಮಾಣು ಮಹತ್ವಾಕಾಂಕ್ಷೆಗಳನ್ನು ನಿಗ್ರಹಿಸಲು ಶ್ರಮಿಸುತ್ತಿದೆ ಎಂದು ಹೇಳಿವೆ.
ಸೆನೆಟರ್ ಟೆಡ್ ಕ್ರೂಜ್ ಪ್ರತಿಕ್ರಿಯಿಸಿ ಸೆನೆಟ್ ಸಶಸ್ತ್ರ ಸೇವೆಗಳ ಸಮಿತಿಯ ಅಧ್ಯಕ್ಷರಾಗಿರುವ ರೋಜರ್ ವಿಕರ್, ೬೦ ದಿನಗಳ ಕದನ ವಿರಾಮ “ಆಪರೇಷನ್ ಎಪಿಕ್ ಫ್ಯೂರಿಯಿಂದ ಸಾಧಿಸಲ್ಪಟ್ಟ ಎಲ್ಲವೂ ವ್ಯರ್ಥ ಎಂದು ಹೇಳಿದ್ದಾರೆ.
ಫೆಬ್ರವರಿ ೨೮ ರಂದು ಅಮೆರಿಕ ಮತ್ತು ಇಸ್ರೇಲ್, ಇರಾನ್ ಮೇಲೆ ವ್ಯಾಪಕ ದಾಳಿ ನಡೆಸಲಾಗಿತ್ತು, ಇದರಿಂದ ಯುದ್ಧ ಆರಂಭವಾಗಿತ್ತು.


























