Home ಸುದ್ದಿ ರಾಷ್ಟ್ರೀಯ ಉಕ್ರೇನ್ ಮೇಲೆ ರಷ್ಯಾ ದಾಳಿ: ನಾಲ್ವರ ಸಾವು

ಉಕ್ರೇನ್ ಮೇಲೆ ರಷ್ಯಾ ದಾಳಿ: ನಾಲ್ವರ ಸಾವು

ಕೈವ್, ಮೇ.25- ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದು, ನೂರಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಉಕ್ರೇನ್ ವಿರುದ್ಧ ರಷ್ಯಾ ದೊಡ್ಡ ಪ್ರಮಾಣದಲ್ಲಿ ರಾತ್ರಿಯಿಡೀ ನೂರಾರು ಡ್ರೋನ್‍ಗಳು ಮತ್ತು ಡಜನ್‍ಗಟ್ಟಲೆ ಕ್ಷಿಪಣಿ ದಾಳಿ ನಡೆಸಿದೆ, ಇದರಿಂದ ಕೆಲವು ದಿನಗಳಿಂದ ತಣ್ಣಗಾಗಿದ್ದ ಸಂಘರ್ಷ ಮತ್ತೆ ತಾರಕ್ಕೇರುವ ಎಲ್ಲಾ ಸಾಧ್ಯತೆಗಳಿವೆ.


ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪ್ರತಿಕ್ರಿಯಿಸಿ ಉಕ್ರೇನ್ ರಾಜಧಾನಿ ಕೈವ್ ಸೇರಿದಂತೆ ಪ್ರಮಖ ನಗರಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಇದರಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದು ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅದರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದಿದ್ದಾರೆ.
ರಾತ್ರಿಯಿಡೀ ಈ ಪ್ರದೇಶದಾದ್ಯಂತ ಜೋರಾಗಿ ಸ್ಫೋಟಗಳು ಕೇಳಿಬಂದವು. ಡಜನ್ ಗಟ್ಟಲೆ ವಸತಿ ಕಟ್ಟಡಗಳು, ಶಾಲೆ, ಒಪೆರಾ ಹೌಸ್ ಮತ್ತು ವಸ್ತುಸಂಗ್ರಹಾಲಯ ಹಾನಿಗೊಳಗಾಗಿವೆ ಎಂದಿದ್ದಾರೆ.


ಒರೆಶ್ನಿಕ್ ಹೈಪರ್ಸಾನಿಕ್ ಕ್ಷಿಪಣಿ ದಾಳಿಗಳಲ್ಲಿ ಬಳಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ, ಇದು ಉಕ್ರೇನ್‍ನ “ನಾಗರಿಕ ಮೂಲಸೌಕರ್ಯದ ಮೇಲಿನ ದಾಳಿಗೆ” ಪ್ರತಿಕ್ರಿಯೆಯಾಗಿ ನಡೆಸಲಾಗಿದೆ ಎಂದು ಸಮಜಾಯಿಷಿ ನೀಡಿದೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 2022ರ ಫೆಬ್ರವರಿ 22 ರಂದು ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ಪ್ರಾರಂಭಿಸಿದ ನಂತರ ಹಲವು ದಾಳಿಗಳು ನಡೆದಿದ್ದವು.


ಈ ವಾರದ ಆರಂಭದಲ್ಲಿ, ಕೈವ್ ಸ್ಟಾರೋಬಿಲ್ಸ್ಕ್ ಪಟ್ಟಣದಲ್ಲಿರುವ ವಿದ್ಯಾರ್ಥಿ ನಿಲಯದ ಮೇಲೆ ಉಕ್ರೇನ್ ದಾಳಿ ಮಾಡಿತ್ತು ಇದರಲ್ಲಿ 21 ಜನರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ಅಧಿಕಾರಿಗಳು ಹೇಳಿದ್ದಾರೆ.
ರಷ್ಯಾ ಆಕ್ರಮಿತ ಪೂರ್ವ ಉಕ್ರೇನ್‍ನ ಸ್ಟಾರೋಬಿಲ್ಸ್ಕ್‍ನಲ್ಲಿ ಶುಕ್ರವಾರ ರಾತ್ರಿ ತನ್ನ ಪಡೆಗಳು ದಾಳಿ ನಡೆಸಿವೆ ಎಂದು ಉಕ್ರೇನ್ ಸೇನೆ ಹೇಳಿದೆ, ಆದರೆ ಅದು ರಷ್ಯಾದ ಗಣ್ಯ ಡ್ರೋನ್ ಮಿಲಿಟರಿ ಘಟಕವನ್ನು ಹೊಡೆದಿದೆ ಎಂದು ಸಮರ್ಥಿಸಿಕೊಂಡಿದೆ.


ರಷ್ಯಾ ದಾಳಿ ಯೋಜಿಸುತ್ತಿದೆ ಮತ್ತು ಅದು ಒರೆಶ್ನಿಕ್ ಕ್ಷಿಪಣಿಯನ್ನು ಬಳಸಲು ತಯಾರಿ ನಡೆಸುತ್ತಿರಬಹುದು ಎಂದು ವಲೋಡಿಮಿರ್ ಝೆಲೆನ್ಸ್ಕಿ ನೀಡಿದ ಎಚ್ಚರಿಕೆಯ ನಂತರ ರಷ್ಯಾದ ದಾಳಿಯನ್ನು ಯುರೋಪಿಯನ್ ನಾಯಕರು ಖಂಡಿಸಿದ್ದಾರೆ.
ಧ್ವನಿಯ 10 ಪಟ್ಟು ಹೆಚ್ಚು ವೇಗದಲ್ಲಿ ಪ್ರಯಾಣಿಸುತ್ತದೆ ಎಂದು ವರದಿಯಾಗಿದೆ, ಪ್ರತಿಬಂಧಿಸುವುದು ಕಷ್ಟ, ಮತ್ತು ಸಾಂಪ್ರದಾಯಿಕ ಮತ್ತು ಪರಮಾಣು ಸಿಡಿತಲೆಗಳನ್ನು ಸಾಗಿಸುವ ಸಾಮಥ್ರ್ಯವನ್ನು ಹೊಂದಿದೆ ಎಂದು ತಿಳಿದುಬಂದಿದೆ.


ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಇಬ್ಬರೂ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.