Home ಜಿಲ್ಲೆ ಕಲಬುರಗಿ ಜೂಜಾಟ:8 ಜನರ ಬಂಧನ

ಜೂಜಾಟ:8 ಜನರ ಬಂಧನ

ಕಲಬುರಗಿ,ಮೇ.25-ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ಹಾಗರಗಾ ಗ್ರಾಮದಿಂದ ಭೂಪಾಲ ತೆಗನೂರ ಗ್ರಾಮದ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಹಬೀಬಸಾಬ ಎಂಬುವವರ ಕಬ್ಬಿನ ಹೊಲದ ಶೆಡ್‍ರೂಮ್ ಎದುರುಗಡೆಯ ಖಾಲಿ ಜಾಗದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಎಸಿಪಿ ಜೇಮ್ಸ್ ಮಿನೇಜಸ್, ಸಿಬ್ಬಂದಿಗಳಾದ ಯಲ್ಲಪ್ಪ, ಅಶೋಕ ಕಟಕೆ, ಶಿವಕುಮಾರ, ನಾಗರಾಜ, ಸನೀಲಕುಮಾರ ಅವರು ದಾಳಿ ನಡೆಸಿ 8 ಜನರನ್ನು ಬಂಧಿಸಿದ್ದಾರೆ.
ಅಶ್ಫಾಕ್ ಅಲಿ, ಫಿರ್ದೋಸ್, ಸೈಯದ್ ಖಾಜಾ ಪಾಶಾ, ಮಹ್ಮದ್ ಅಬ್ದುಲ್ ರಹೇಮಾನ್ ರಜಾ, ಅಲಿಮೋದ್ದಿನ್, ಅಬ್ದುಲ್ ರೌಫ್, ಮಹ್ಮದ್ ಜಮೀಲ್ ಖಾನ್ ಹಾಗೂ ಅಬ್ದುಲ್ ನದೀಮ್ ಎಂಬುವವರನ್ನು ಬಂಧಿಸಿ 11,940 ರೂ.ನಗದು ಜಪ್ತಿ ಮಾಡಿದ್ದಾರೆ.
ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.