
ಸಿಂದಗಿ, ಮೇ.25- ಜಗತ್ತು ಅನೈತಿಕತೆಯಲ್ಲಿ ಮುಳುಗಿ ಅದಃಪತನದಡಿ ಸಾಗುತ್ತಿರುವಾಗ, ಅಧ್ಯಾತ್ಮೀಕತೆಯಿಂದ ದೂರಗೊಂಡು ಕತ್ತಲೆ ಆವರಿಸಿದಾಗಲೆಲ್ಲ ಸರ್ವಶಕ್ತನಾದ ದೇವನು ಮನುಷ್ಯನ ಮಾರ್ಗದರ್ಶನಕ್ಕಾಗಿ ತನ್ನ ಅವತಾರಗಳನ್ನು ಕಳುಹಿಸಿ ಕೋಡುವುದಾಗಿ ಪವಿತ್ರ ಗ್ರಂಥಗಳಾದ ಭಗವತ ಗೀತೆ, ಬೈಬಲ್ ಮತ್ತು ಕುರ್ ಆನ್ ನಲ್ಲಿ ವಾಗ್ದಾನ ಮಾಡಿದ್ದಾನೆ ಎಂದು ಬಿಜಾಪುರ ಮೌಲ್ವಿ ಮಕ್ಬುಲ್ ಅಹ್ಮದ ಅವರು ಹೇಳಿದರು.
ತಾಲೂಕಿನ ಗೋಲಗೇರಾ ಗ್ರಾಮದ ಅಹ್ಮದಿಯಾ ಮುಸ್ಲೀಮ ತಾಲೀಮ್ ಉಲ್ ಇಸ್ಲಾಂ ಸೆಂಟರ್ ನಲ್ಲಿ ಮೇ.24 ರವಿವಾರ ಆಯೋಜಿಸಿದ್ದ (ಖುದ್ದಾಮುಲ್ ಅಹ್ಮದಿಯಾ ಮತ್ತು ಅತ್ಫಾಲುಲ್ ಅಹ್ಮದಿಯಾ) ಕಲಬುರಗಿ ಮತ್ತು ವಿಜಯಪುರ ಜಿಲ್ಲೆಯ ಯುವಕರ ಮತ್ತು ಮಕ್ಕಳ ವಾರ್ಷಿಕ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಉಪನ್ಯಾಸ ನೀಡಿದ ಅವರು, ಪ್ರವಾದಿ ಮಹ್ಮದ್ ಪೈಗಂಬರ ಅವರು ಅಂತ್ಯ ಕಾಲದ ಕುರಿತು ಶುಭವಾರ್ತೆಯನ್ನು ಪ್ರಕಟಿಸಿದರು, ನನ್ನ ನಂತರ ಬರಲಿರುವ ಮಹಾಪುರುಷನ ಹೆಸರು ಅಹ್ಮದ ಆಗಿರುವುದು, ಅದರಂತೆ ಅಲ್ಲಾಹನ ಆದೇಶದಂತೆ ಪಂಜಾಬಿನ ಖಾದಿಯಾನ್ ನಲ್ಲಿ ಅವತರಿಸಿದ ಹಜರತÀ ಗುಲಾಂ ಅಹ್ಮದ ಖಾದಿಯಾನಿ ಅವರು, ತಾವು ಅಂತ್ಯ ಯುಗದ ವಾಗ್ದತ್ತ ಮಸಿಹ ಮತ್ತು ಮಹದಿ ಆಗಿರುವುದಾಗಿ ಘೋಷಿಸಿದರು ಮತ್ತು ಅವರು, 1889ರಲ್ಲಿ ಅಹ್ಮದಿಯಾ ಮುಸ್ಲೀಮ ಸಂಘಟನೆಗೆ ಭೂನಾದಿ ಹಾಕಿದರು. ಈ ಸಂಘಟನೆ ವಿಶ್ವದಲ್ಲಿ ಶಾಂತಿಯ ನೈಜ ಇಸ್ಲಾಮಿನ ಸಂದೇಶವನ್ನು ಮರು ಸ್ಥಾಪಿಸಲು ಶ್ರಮಿಸುತ್ತಿದೆ, ಶಿಕ್ಷಣ, ಆರೋಗ್ಯ ಮತ್ತು ಮಾನವೀಯ ಸೇವೆಯಲ್ಲಿ ನಿರತವಾಗಿದೆ ಎಂದು ಅವರು ಹೇಳಿದರು.
ಬೆಳಗಿನ ಜಾವದ ವಿಶೇಷ ಪ್ರಾರ್ಥನೆ ತಾಜುದ ನಮಾಜ ಮತ್ತು ಪವಿತ್ರ ಕುರ್‍ಆನ್ ಪಠಣದೊಂದಿಗೆ ಪ್ರಾರಂಭಾದ ಈ ಸಮಾವೇಶಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೇಂದ್ರ ಸಂಘಟನೆಯ ಪ್ರತಿನಿಧಿ ಹಿರಿಯ ನ್ಯಾಯವಾದಿ ಲಿಯಾಖತ್ ಫರೀದ್ ಉಸ್ತಾದ ಅವರನ್ನು ಸಂಘಟನೆಯ ಶಿಷ್ಟಚಾರದಂತೆ ಗೌರವ ಆದಾರಗಳೋಂದಿಗೆ ಭವ್ಯವಾಗಿ ಸ್ವಾಗತಿಸಲಾಯಿತು, ಸಂಘಟನೆಯ ಧ್ವಜಾರೋಹಣವನ್ನು ನೆರವೇರಿಸುವ ಮೂಲಕ ಅವರು, ಸಮಾವೇಶಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ರಾಯಚೂರು ಮೌಲ್ವಿ ಸಮೀರ ಅಹ್ಮದ ಅವರು, ಪ್ರವಾದಿ ಮೊಹ್ಮದ ಪೈಗಂಬರ ಅವರ ನಡೆನುಡಿ ಮಾನವೀಯ ಸಂದೇಶದ ಕರುತು ಉಪನ್ಯಾಸ ನೀಡಿದರು. ಗುಲಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ.ಅಬ್ದುಲ ರಬ್ ಉಸ್ತಾದ ಅವರು, ಯುವರಕ ಸುಧಾರಣೆ ಇಲ್ಲದೇ ಸಮಾಜದ ಸುಧಾರಣೆ ಅಸಾಧ್ಯ ಎಂಬ ವಿಷಯದ ಮೇಲೆ ಉಪನ್ಯಾನ ನೀಡಿದರು.
ಯಾದಗಿರ ಜಿಲ್ಲಾ ಅಮೀರ ನಹೀಮ ಅಹ್ಮದ ಸಗರಿ ಅವರು, ಪ್ರವಾದ ಮೊಹ್ಮದ ಪೈಗಂಬರ ಅವರ ಭವಿಷ್ಯವಾಣಿ ಮತ್ತು ವಾಗ್ದತ್ತ ಮಸೀಹ ಮಹದಿ ಅವರ ಅವತಾರದ ಕುರಿತು ಮಾತನಾಡಿದರು. ಕಲಬುರಗಿ ಅಹ್ಮದಿಯಾ ಮಿಷನರಿ ಮೌಲ್ವಿ ಜುನೈದ್ ಅಹ್ಮದ ಖಾನ್ ಅವರು, ಅಲ್ಲಾಹ ಅನುಗ್ರಾಹ ಪ್ರಾಪ್ತಿಯಗಾಗಿ ಪ್ರಾರ್ಥನೆಯ ಮಾರ್ಗದ ಭಕ್ತಿಯಿಂದ ಆತನನ್ನು ಸಂದಿಸುವ ವಿಷಯದ ಕುರಿತು ಉಪನ್ಯಾಸ ನೀಡಿದರು.
ಪವಿತ್ರ ಕುರ್‍ಆನ್ ಪಠಣ, ನಜಂ ಭಕ್ತಿಗೀತೆ, ಕ್ವಿಜ್, ಕಬಡ್ಡಿ, ಓಟ, ರಿಲೆ, ಹಗ್ಗಜಗ್ಗಾಟ, ಮಿಜಿಕಲ್ ಚೇರ್ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಯುವಕರಿಗೆ ಮತ್ತು ಮಕ್ಕಳಿಗೆ ಬಹುಮಾನಗಳನ್ನು ಗಣ್ಯಮಾನ್ಯರಿಂದ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯ ಮೌಲ್ವಿ ನಿಜಾಮುದ್ದೀನ ಬೊಧನ, ಮೌಲ್ವಿ ಸಾಬಿರ್ ಮುಲ್ಲಾ ಸಂಕನಾಳ, ಗೊಲಗೇರ ಮೌಲ್ವಿ ಫಜಲ್ ಉಲ್ ರಹಮಾನ್, ಮೌಲ್ವಿ ಸಗಿರ್ ಅಹ್ಮದ ಬಿಜಾಪೂರ, ಮೌಲ್ವಿ ಖಾಜಿ ಉಸ್ಮಾನ ಪಾಷಾ ಸೋಲಾಪೂರ, ಮೌಲ್ವಿ ರಫೀಕ್ ಉಲ್ ಜಮಾ ಕರ್ನಾಟಕ ಮತ್ತು ಮಹಾರಾಷ್ಟ್ರ ಪ್ರಮುಖರು, ಬಿಜಾಪುರ ಮಾಜಿ ಅಮೀರ ಜನಾಬ ಹುಸೇನ್ ಪೀರ ಸಾಹೇಬ, ರಾಯಚೂರ ಜಿಲ್ಲಾ ಅಮೀರ ಸಾದತ ಅಹ್ಮದ, ಮೌಲ್ವಿ ಮಕಬೂಲ ಅಹ್ಮದ ವಿಜಯಪುರ, ಹಷ್ಮಮತುಲ್ಲಾ ಹೌದೋಡಿ ಕಲಬುರಗಿ, ವಸೀಮ್ ಅಹ್ಮದ ನೂರ, ತಾರೀಖ ಅಹ್ಮದ ಮುಸ್ತಕೀಮ ಸೇರಿದಂತೆ ಗಣ್ಯಮಾನ್ಯರು ವೇದಿಕೆಯಲ್ಲಿದ್ದರು.
ಖುದ್ದಾಮುಲ್ ಅಹ್ಮದಿಯಾ ಕೇಂದ್ರ ಸಂಘಟನೆಯ ಅಧ್ಯಕ್ಷರು, ಆನ್ ಲೈನ್ ಮೂಲಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ, ಖಲಿಫಾರ ಆಜ್ಞಾಪಾಲನೆ ಮಾಡುವ ಮೂಲಕ, ಅಹ್ಮದಿಯ ಸಂಘಟನೆಯ ಶಾಂತಿಪ್ರೀಯ ನೈಜ ಇಸ್ಲಾಮೀನ ಸಂದೇಶವನ್ನು ತಮ್ಮೇಲ್ಲರ ನಡೆನುಡಿಯಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ಮತ್ತು ವಿಜಯಪುರ ಜಿಲ್ಲೆಯ ಅಮಿರ್ ಅಧ್ಯಕ್ಷ ಹಿರಿಯ ನ್ಯಾಯವಾದಿ ಲಿಯಾಖತ್ ಫರೀದ್ ಉಸ್ತಾದ ಅವರು, ಮಾತನಾಡಿ ಇಂತಹ ಕಾರ್ಯಕ್ರಮಗಳನ್ನು ಸಂಘಟಿಸಲು ತಮ್ಮೇಲ್ಲರ ಸಹಕಾರದಿಂದ ಸಾಧ್ಯವಾಗಿದೆ ಈ ಕೇಂದ್ರದಲ್ಲಿ ನಿರಂತರ ನೈಜ ಇಸ್ಲಾಮಿನ ಸೇವೆ ಮಾಡುವ ಸೇವಕರ ಅಗತ್ಯವಿದೆ ಎಂದರು. ತಾರೀಕ ಅಹ್ಮದ ಮುಸ್ತಾಕೀಮ ಅವರು, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು, ಮೌನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.























