ಕಲಬುರಗಿ: ನಗರದ ವಾರ್ಡ್ ನಂ..26ರ ಗಂಗಾನಗರ ಹಾಗೂ ನ್ಯೂ ಮಾಣಿಕೇಶ್ವರಿ ಕಾಲೋನಿಯ ಬಡಾವಣೆಯಲ್ಲಿ ಗ್ರಂಥಾಲಯ ಸ್ಥಾಪಿಸುವಂತೆ ಶ್ರೀ ಅಂಬಿಗರ ಸೇವಾದಳ ವತಿಯಿಂದ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿಪತ್ರ ಸಲ್ಲಿಸಲಾಯಿತು. ಶ್ರೀ ಅಂಬಿಗರ ಸೇವಾದಳ ಅಧ್ಯಕ್ಷ ಸಂತೋಷ ಎಸ್.ಬೆಣ್ಣೂರ, ರಾಘವೇಂದ್ರ ಜೋಕೆ, ಶರಣಬಸಪ್ಪ ಕಿರಸಾವಳಗಿ, ಮಹಾಂತೇಶ ಹರವಾಳ, ಬಸವರಾಜ ಮಳ್ಳಿ, ರಾಯಪ್ಪ ಹೊನಗುಂಟಿ, ಅಮೃತ ಡಿಗ್ಗಿ, ವಿಜಯಕುಮಾರ ಹದಗಲ್, ಶಾಂತಪ್ಪ ಕೂಡಿ ಸೇರಿದಂತೆ ಮತ್ತಿತರರು ಇದ್ದರು.